ಆರ್ಥಿಕ ದಿವಾಳಿಯತ್ತ ಕರ್ನಾಟಕ: ಬಿ.ವೈ.ವಿಜಯೇಂದ್ರ

RELATED POSTS

ಶಿವಮೊಗ್ಗ(www.thenewzmirror.com): ಸಿದ್ದರಾಮಯ್ಯನವರ ಸರಕಾರ ಕೊಟ್ಟ ಅನ್ನಭಾಗ್ಯ ಯೋಜನೆಗೆ ಕಾಂಗ್ರೆಸ್ ಸರಕಾರವೇ ಕನ್ನ ಹಾಕುತ್ತಿದೆ,ಆರ್ಥಿಕ ದಿವಾಳಿಯತ್ತ ಕರ್ನಾಟಕ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು , 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಅದನ್ನು 5 ಕೆಜಿಗೆ ಇಳಿಸಿದರು. ಈಗ ಅದನ್ನೂ ನಿಲ್ಲಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯವು ಇವತ್ತು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ಸರಕಾರಿ ನೌಕರರಿಗೆ ಸಂಬಳ ಕೊಡಲು ಕೂಡ ಸರಕಾರ ಪರದಾಡುತ್ತಿದೆ. ಅಭಿವೃದ್ಧಿಗೆ ಹಣ ಸಿಗದೆ ಆಡಳಿತ ಪಕ್ಷದ ಶಾಸಕರೇ ಬೀದಿಗಿಳಿಯುವ ಹಾಗೂ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಒಂದು ಕಡೆ ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಅವರ ಸಚಿವ ಸಂಪುಟವು ಕೊಟ್ಟಂಥ ಭರವಸೆ ಈಡೇರಿಸಿದ್ದಾಗಿ ಅವರಿಗೆ ಅವರೇ ಶಹಬ್ಬಾಸ್‍ಗಿರಿ ಕೊಡುತ್ತಿದ್ದಾರೆ. ಆದರೆ, ವಾಸ್ತವಿಕ ಸತ್ಯ ಏನೆಂದರೆ ಇವತ್ತು ಮಹಾನಗರ ಪಾಲಿಕೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಲಾರಿ ಮಾಲೀಕರಿಗೆ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಕೊಡಲು ಸಾಧ್ಯವಾಗದೆ ಅವರು ಕೂಡ ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ ಎಂದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಮುಖ್ಯಮಂತ್ರಿಗಳು ಆಡಳಿತದ ಮೇಲೆ ತಮ್ಮ ಹಿಡಿತ ಕಳಕೊಂಡಿದ್ದಾರೆ. ಆಡಳಿತ ಪಕ್ಷವಾದ ಕಾಂಗ್ರೆಸ್ಸಿನ ಶಾಸಕರು ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಕಳಕೊಂಡಿದ್ದಾರೆ ಎಂದು ತಿಳಿಸಿದರು. ಅನ್ನಭಾಗ್ಯದ ಸಾಗಾಟ ವೆಚ್ಚವಾಗಿ ಲಾರಿ ಬಾಡಿಗೆ ಕೊಡಲು ಕೂಡ ಸರಕಾರದ ಬಳಿ ದುಡ್ಡಿಲ್ಲ; ಸರಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂಬ ಸತ್ಯವನ್ನು ರಾಯರೆಡ್ಡಿಯವರೇ ಹೇಳಿದ್ದಾರೆ ಎಂದರು.

ಸಿಎಂ, ಡಿಸಿಎಂ ಪ್ರಚಾರದ ಚಟ- ಹಠದಿಂದ ಹೀಗಾಗಿದೆ:

ಆರ್‍ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಸಾವು ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವತಃ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ, ಆರ್‍ಸಿಬಿ ತಂಡಕ್ಕೆ ಸನ್ಮಾನಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದರು. ಸತ್ಯ ಮರೆಮಾಚಿ ಕೇವಲ ಆರ್‍ಸಿಬಿ, ಕೆಎಸಿಎ ಮೇಲೆ ಅದನ್ನು ಹೊರಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವಿನ ಪ್ರತಿಷ್ಠೆ, ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಚಟದಿಂದ, ಹಠದಿಂದ ಕಾಲ್ತುಳಿತ ಆಗಿದೆ ಎಂದು ಟೀಕಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist