ಮಡಿಕೇರಿ, (www.thenewzmirror.com) :
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆದ ಬಳಿಕ ಸಿಬ್ಬಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ಆಗ್ತಾನೇ ಇದೆ.., ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಅನ್ನೋ ಗಾದೆ ಮಾತಿನಂತೆ ಸಿಬ್ಬಂದಿ ಏನು ಮಾಡಿದ್ರೂ ಅದ್ರಲ್ಲಿ ತಪ್ಪು ಹುಡುಕೋ ಕೆಲ್ಸವನ್ನ ಹಿರಿಯ ಅಧಿಕಾರಿಗಳು ಮಾಡ್ತಿದ್ದಾರೆ. ಇದಕ್ಕೆ ಪೂರಕವಾದ ಘಟನೆ ಮಡಿಕೇರಿ ಡಿಪೋದಲ್ಲಿ ನಡೆದಿದೆ.
ಮಡಿಕೇರಿ KSRTC ಡಿಪೋದ ಕೆಎಂಪಿಎಲ್ ಮಾಸ್ಟರ್ ಒಬ್ಬ ಚಾಲಕನಿಗೆ ನಿಗದಿತ ಕೆಎಂಪಿಎಲ್ ಗಿಂತ ಹೆಚ್ಚು ಡೀಸೆಲ್ ಕುಡಿಸಿಕೊಂಡು ಬಂದಿದ್ದೀಯ ಎಂದು ಅವಾಚ್ಯ ವಾಗಿ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲ ಡ್ರೈವರ್ ಗೆ ಕಲ್ಲಿನಿಂದ ಹೊಡೆಯಲು ಮುಂದಾಗಿರುವ ವೀಡಿಯೋ ವೈರಲ್ ಆಗಿದ್ದು, ಅಧಿಕಾರಿ ವಿರುದ್ಧ ಭಾರೀ ಅಸಮಧಾನ ವ್ಯಕ್ತವಾಗ್ತಿದೆ.
ಈ ರೀತಿ ಯಾಕ್ ಸರ್ ನನಗೆ ಬೈಯುತ್ತೀರಾ ಎಂದು ಪ್ರಶ್ನೆ ಮಾಡಿದ್ರೆ ಏಯ್ ಏನಯ್ಯಾ ವೀಡಿಯೋ ಮಾಡ್ತೀಯಾ ಮಾಡು ಮಾಡು ಎಲ್ಲಿ ಹೋಗ್ತಿಯಾ ನೀನು ಅಂತ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದೂ ವೈರಲ್ ಆಗಿರೋ ವೀಡಿಯೋದಲ್ಲಿ ಸೆರೆಯಾಗಿದೆ.
ಈ ದೌರ್ಜನ್ಯ ಮಾಡುವ ವಿಡಿಯೋ ಈಗ ವೈರಲ್ ಆಗಿದ್ದು ಒಬ್ಬ ಚಾಲಕನ ಮೇಲೆ ಕೈ ಮಾಡುವುದಲ್ಲದೆ ಅವಾಚ್ಯವಾಗಿ ನಿಂದಿಸುತ್ತಿರುವ ಈತನನ್ನು ಕೂಡಲೇ ಅಮಾನತು ಮಾಡಬೇಕು ಎಂಬ ಆಗ್ರಹ ಕರ್ನಾಟಕ ಮಜ್ದೂರ್ ಸಂಘದ ಮಾಧ್ಯಮ ವಕ್ತಾರ ಯೊಗೀಶ್ ಗೌಡ ಮಾಡ್ತಿದ್ದಾರೆ.
ತನ್ನ ಬಳಿ ಅಧಿಕಾರ ಇದೆ ಎಂದು ಈರೀತಿ ವರ್ತನೆ ಮಾಡ್ತಿರೋದು ಸರಿಯಲ್ಲಿ ಇವ್ರಿಗೆ ತಕ್ಷಣಕ್ಕೆ ಶಿಕ್ಷೆ ನೀಡಬೇಕು ಎಂದು CITU ಜಂಟಿ ಕಾರ್ಯದರ್ಶಿ ಆನಂದ್ ಒತ್ತಾಯ ಮಾಡುತ್ತಿದ್ದಾರೆ.