ಬೆಂಗಳೂರು(www.thenewzmirror.com): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 2000 ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿ ಕಾರ್ಯ ಪ್ರಗತಿಯಲ್ಲಿದ್ದು, ಅಂತಿಮ ಆಯ್ಕೆ ಪಟ್ಟಿ ಮತ್ತು ಕಟ್ ಆಫ್ ಅಂಕಗಳ ವಿವರಗಳನ್ನು ಪ್ರಕಟಿಸಿದೆ.
ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆಯಲ್ಲಿ ನೇಮಕಾತಿ ಕುರಿತ ಮಾಹಿತಿ ನೀಡಿದ್ದು, 2000 ಚಾಲಕ ಕಂ ನಿರ್ವಾಹಕ ಹುದ್ದೆಗೆ ಸಂಭವನೀಯ ಆಯ್ಕೆಪಟ್ಟಿಗೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ,ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇದರ ಜತೆ ಕೆಎಸ್ಆರ್ಟಿಸಿಯ ಅಧಿಕೃತ ಜಾಲತಾಣವಾದ ksrtcjobs.karnataka.gov.in ನಲ್ಲಿಯೂ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಅಲ್ಲಿಯೂ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ. ಅಂತಿಮ ಆಯ್ಕೆಪಟ್ಟಿಯಲ್ಲಿ ಆಯಾ ಪ್ರವರ್ಗದಲ್ಲಿ ಸ್ಥಾನ ಪಡೆದ ಕೊನೆಯ ಅಭ್ಯರ್ಥಿ ಪಡೆದ ಅಂಕಗಳು ಹಾಗೂ ಹುಟ್ಟಿದ ದಿನಾಂಕದ ವಿವರ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ವಿಶೇಷ ಸೂಚನೆ:
1) ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳಿಗೆ ದುನಾಂಕ 16-06-2025 80 19-06-2025 ರವರೆಗೆ ನಿಗಮದ ಕೇಂದ್ರ ಕಛೇರಿ, ಶಾಂತಿನಗರ, ಬೆಂಗಳೂರು-27 ಇಲ್ಲಿ ನಡೆಸುವ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳ ಮೆರಿಟ್/ಜೇಷ್ಠತೆ ಅನುಸಾರ ವಿಭಾಗ ಘಟಕಗಳಿಗೆ ನೇರವಾಗಿ ನಿಯೋಜನೆ ಮಾಡಲಾಗುವುದು.
2) ಕೌನ್ಸಿಲಿಂಗ್ ದಿನಾಂಕ ಮತ್ತು ಸಮಯವನ್ನು ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು ಹಾಗೂ ನಿಗಮದ ವೆಬ್-ಸೈಟ್ ಆದ ksrtcjobs.karnataka.gov.in ನಲ್ಲಿ ಪ್ರಕಟಿಸಲಾಗುವುದು.
3) ನೇಮಕಾತಿ ಮತ್ತು ಘಟಕ /ವಿಭಾಗಗಳಿಗೆ ನಿಯೋಜನೆಯು ಸಂಪೂರ್ಣ ಪಾರದರ್ಶಕ ಮತ್ತು ಗಣಕೀಕೃತವಾಗಿರುವುದರಿಂದ ಅಭ್ಯರ್ಥಿಗಳು ಯಾವುದೇ ಆಮಿಷ/ ಅವ್ಯವಹಾರದಲ್ಲಿ ತೊಡಗಬಾರದೆಂದು ಸೂಚಿಸಲಾಗಿದೆ.