ಬೆಂಗಳೂರು(www.thenewzmirror.com):ಇತ್ತೀಚೆಗಷ್ಟೇ ರಾಜ್ಯದ ಎಲ್ಲಾ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಯುಪಿಐ ಪಾವತಿ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಟೆಕ್ನಾಲಜಿ ಆಫ್ ದಿ ಇಯರ್”ಗೋಲ್ಡ್ ಸೇರಿದಂತೆ ಬಿಡಬ್ಲ್ಯೂ ಮಾರ್ಕೆಟಿಂಗ್ ವರ್ಲ್ಡ್ ಮತ್ತು ಬಿಡಬ್ಲ್ಯೂ ಬಿಸಿನೆಸ್ ವರ್ಲ್ಡ್ ಸಹಯೋಗದಲ್ಲಿ ನೀಡುವ ಬಹುಮಾನಗಳಲ್ಲಿ 2 ಗೋಲ್ಡ್ ಅವಾರ್ಡ್‌ಗಳನ್ನು ಕೆಎಸ್‌ಆರ್‌ಟಿಸಿ ಪಡೆದಿದೆ
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಎರಡು ಪ್ರಶಸ್ತಿಗಳನ್ನು ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನದಾಗಿಸಿಕೊಂಡಿದ್ದು ಪ್ರಶಸ್ತಿಗಳ ಭೇಟೆಯನ್ನು ಮುಂದುವರೆಸಿದೆ, ಉತ್ತಮ ಸಾರಿಗೆ ಸೇವೆ ಒದಗಿಸುವ ಜತೆ ಜತೆಯಲ್ಲೇ ತನ್ನ ಸೇವೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನೂ ಗಳಿಸಿಕೊಳ್ಳುತ್ತಿದೆ.
ಪ್ರಶಸ್ತಿಗಳು:
1. ಯುಪಿಐ ಸೌಲಭ್ಯದೊಂದಿಗೆ AWATAR 4.0 ಯೋಜನೆಗೆ “ಟೆಕ್ನಾಲಜಿ ಆಫ್ ದಿ ಇಯರ್” ವಿಭಾಗದಲ್ಲಿ ಗೋಲ್ಡ್ ಅವಾರ್ಡ್.
2. “ಟ್ರಾವೆಲ್, ಟೂರಿಸಂ & ಲೆಷರ್” ವಿಭಾಗದಲ್ಲಿ ಬಸ್‌ಗಳ ಬ್ರಾಂಡಿಂಗ್‌ಗೆ ಗೋಲ್ಡ್ ಅವಾರ್ಡ್.
ಈ ಪ್ರಶಸ್ತಿಗಳನ್ನು ಕೆಎಸ್‌ಆರ್‌ಟಿಸಿ ಪರವಾಗಿ ವೀಣಾ ದೇಸಾಯಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಮತ್ತು ರಾಘವೇಂದ್ರ ಎಸ್.ಎನ್., ವಿಭಾಗೀಯ ಸಂಚಲನಾಧಿಕಾರಿ ಸ್ವೀಕರಿಸಿದರು.ಈ ಪ್ರಶಸ್ತಿಗಳನ್ನು BW Businessworld ಮತ್ತು exchange4media ಗ್ರೂಪ್‌ನ ಹಿರಿಯ ಸಂಪಾದಕರಾದ ರುಹೈಲ್ ಅಮಿನ್ ರವರು ವಿತರಿಸಿದರು.
BW Marketing World, BW Businessworld ಸಹಯೋಗದಲ್ಲಿ ಆಯೋಜಿಸಿದ BW Merit Awards 2025 ಇದರ 2ನೇ ಆವೃತ್ತಿ — ಭಾರತದಲ್ಲಿ ಅತ್ಯುತ್ತಮ ಮಾರ್ಕೆಟಿಂಗ್ ಕೌಶಲ್ಯ, ಸಾಧನೆ ಮತ್ತು ನಾಯಕತ್ವಕ್ಕೆ ನೀಡುವ ಅತ್ಯಮೂಲ್ಯ ಗೌರವವಾಗಿದೆ.
BW Merit Awards 2025 ಪ್ರಶಸ್ತಿಗಳು ತಮ್ಮ ಸಂಸ್ಥೆಗಳ ಬೆಳವಣಿಗೆಯಲ್ಲಿಯೂ ಮತ್ತು ವಿಸ್ತೃತ ಪರಿಸರ ವ್ಯವಸ್ಥೆಯಲ್ಲಿಯೂ ಮಹತ್ತರ ಕೊಡುಗೆ ನೀಡಿದ ವ್ಯಕ್ತಿಗಳನ್ನೂ ಸಂಸ್ಥೆಗಳನ್ನೂ ಗೌರವಿಸುತ್ತದೆ.