ಜಾತಿಗಣತಿ ವರದಿ ನಿಜವೇ ಸುಳ್ಳೇ, ನಕಲಿಯೇ ಎಂದು ಜಯಪ್ರಕಾಶ್ ಹೆಗ್ಡೆ ಬಳಿ ವಿಚಾರಿಸಲಿ: ಡಿಸಿಎಂ ಡಿಕೆ ಶಿವಕುಮಾರ್

RELATED POSTS

ಬೆಂಗಳೂರು(www.thenewzmirror.com):“ಜವಾಬ್ದಾರಿಯುತ ಸ್ಥಾನದಲ್ಲಿರುವ ಆರ್.ಅಶೋಕ್ ಅವರು ಸುಳ್ಳು ಹೇಳಬಾರದು. ಜಾತಿಗಣತಿ ವರದಿ ನಿಜವೇ ಸುಳ್ಳೇ, ನಕಲಿಯೇ ಎಂಬುದರ ಬಗ್ಗೆ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರನ್ನು ಕೇಳಲಿ ಅಥವಾ ಅಧಿಕಾರಿಯಾದ ದಯಾನಂದ್ ಅವರ ಬಳಿ ವಿಚಾರಿಸಿದರೆ ಉತ್ತರ ಸಿಗಬಹುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಅವರು ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವ ಆರ್.ಅಶೋಕ್ ಅವರ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,“ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆ. ಸೀಲ್ ಮಾಡಿದ್ದ ವರದಿಯನ್ನು ಕ್ಯಾಬಿನೆಟ್ ಮುಂದೆ ತಂದು ಅಲ್ಲಿಯೇ ತೆರೆದು ನೋಡಲಾಯಿತು. ಇದನ್ನು ವಿಡಿಯೋ ಚಿತ್ರೀಕರಣ ಕೂಡ ಮಾಡಲಾಗಿದೆ” ಎಂದರು.

ಜಾತಿಗಣತಿ ಅನುಷ್ಠಾನಕ್ಕೆ ಇನ್ನೂ ಒಂದು ವರ್ಷವಾಗಲಿದೆ ಎನ್ನುವ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ಆಂತರಿಕವಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ವಿಚಾರ. ಸಾರ್ವಜನಿಕವಾಗಿ ಚರ್ಚೆ ಮಾಡುವ ಸಂಗತಿ ಇದಲ್ಲ” ಎಂದು ಹೇಳಿದರು.

ತಾಳಿ, ಓಲೆ, ಜನಿವಾರ ಮುಟ್ಟಬಾರದು:

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದರ ಬಗ್ಗೆ ಕೇಳಿದಾಗ, “ಜನಿವಾರ ತೆಗೆಸಿದ್ದು ತಪ್ಪು. ಒಂದಷ್ಟು ಮಂದಿ ಲಿಂಗ, ಉಡುದಾರ ಧರಿಸಿರುತ್ತಾರೆ. ತಾಳಿ, ಓಲೆ, ಜನಿವಾರ ಇವುಗಳನ್ನು ಮುಟ್ಟಬಾರದು. ಇದೆಲ್ಲ ಅವರವರ ಧರ್ಮದ ವಿಚಾರ. ಸರ್ಕಾರ ಇಂತಹ ವಿಚಾರಗಳಿಗೆ ಅವಕಾಶ ಕೊಡುವುದಿಲ್ಲ. ಪೊಲೀಸ್ ಕೆಲಸಕ್ಕೆ ಆಯ್ಕೆ ಮಾಡುವಾಗ ತೆಗೆಸುವ ಪದ್ಧತಿಯಿದೆ. ಆದರೆ ಶಾಲಾ ಕಾಲೇಜುಗಳಲ್ಲಿ ತೆಗೆಯಬಾರದು. ಈ ರೀತಿ ಮಾಡಿದ್ದು ತಪ್ಪು. ಕಣ್ಣಿಗೆ ಕಾಣದ ಬ್ಲೂಟೂತ್ ಸಾಧನಗಳು ಸೇರಿದಂತೆ ಒಂದಷ್ಟು ಸಾಧನಗಳನ್ನು ಬಳಸಿಕೊಂಡು ನಕಲು ಮಾಡಿದ್ದ ಘಟನೆಗಳು ಈ ಹಿಂದೆ ನಡೆದಿತ್ತು. ಇದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist