ಉಗ್ರರ ದಾಳಿಗೂ ಮುನ್ನ ಪತ್ನಿ ಜೊತೆ ನೃತ್ಯ ಮಾಡಿದ್ದ ಲೆಫ್ಟಿನೆಂಟ್; ವೀಡಿಯೋ ವೈರಲ್ |WATCH VIDEO

Lieutenant danced with his wife before the terrorist attack; Video goes viral

ಶ್ರೀನಗರ, (www.thenewzmirror.com);

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ನವಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. ಅವರ ಜೀವ ಹೋಗೋಕೂ ಮುನ್ನ ಪತ್ನಿ ಜತೆ ಮಾಡಿದ್ದ ಕೊನೆ ಕ್ಷಣದ ವೀಡಿಯೋ ಇದೀಗ ವೈರಲ್ ಆಗಿದೆ.

RELATED POSTS

ಏಪ್ರಿಲ್ 16 ರಂದು ಮದುವೆಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪತ್ನಿ ಜೊತೆ ಹನಿಮೂನ್ ಗಾಗಿ ಕಾಶ್ಮೀರಕ್ಕೆ ಬಂದಿದ್ದರು. ಮದುವೆಯಾಗಿ ಇನ್ನೂ ಪತ್ನಿಯ ಕೈಯಲ್ಲಿದ್ದ ಮೆಹಂದಿ ಆರಿರಲಿಲ್ಲ. ಆಗಲೇ ಆಕೆಯ ಕುಂಕುಮವೇ ಅಳಿಸಿ ಹೋಗಿದೆ.

17 ಸೆಕೆಂಡಿನ ವೀಡಿಯೋದಲ್ಲಿ ವಿನಯ್ ಅವರ ಪತ್ನಿ ಹಿಮಾಂಶಿ ಅವರ ಜತೆ ಐಓಲ್ ಎಬ ಹಾಡಿಗೆ ನೃತ್ಯ ಮಾಡುತ್ತಿರೋದನ್ನ ನೋಡಬಹುದು. ಪತ್ನಿಯನ್ನು ಎತ್ತಿ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಸುಂದರ ಕ್ಷಣ ಅದಾಗಿತ್ತು. ಆದರೆ ಈ ಸಂತೋಷ ಕೆಲವೇ ಕ್ಷಣ ಮಾತ್ರ ಇತ್ತು.

ಈ ವಿಡೀಯೋ ಮಾಡಿ ಮುಗಿಸುತ್ತಾ ಇದ್ದಂತೆ ಸೈನಿಕರ ವೇಷದಲ್ಲಿ  ಬಂದ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ.

ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗಿರುವ ಈ ವಿಡೀಯೋದಲ್ಲಿ ಇದು ವಿನಯ್ ನರ್ವಾಲ್ ಅವರ ಕೊನೆಯ ವೀಡಿಯೊ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೆಫ್ಟಿನೆಂಟ್ ಅವರ ಪತ್ನಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಪತಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.

ನಾವು ಪ್ರತಿದಿನ ಅವರ ಬಗ್ಗೆ ಹೆಮ್ಮೆಪಡುತ್ತೇವೆ.ನಾವು ಅವರ ಬಗ್ಗೆ ಹೆಮ್ಮೆ ಪಡಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist