ಬೆಂಗಳೂರು(www.thenewzmirror.com):ಸುಮಾರು 10 ವರ್ಷಗಳಿಗೂ ಮೇಲ್ಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದ 14 ಮೃತಾವಲಂಬಿತರುಗಳಿಗೆ ಇಂದು ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ನೀಡಲಾಯಿತು.
ಇಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 14 ಮೃತಾವಲಂಬಿತರುಗಳಿಗೆ ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ವಿತರಣೆ ಮಾಡಿದರು.ಆ ಮೂಲಕ ಸಾರಿಗೆ ಸಿಬ್ಬಂದಿಯ ಕುಟುಂಬಗಳಿಗೆ ಜೀವನ ಭದ್ರತಾ ಖಾತ್ರಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಕಳೆದ 1 ವರ್ಷದಲ್ಲಿ ಒಟ್ಟಾರೆ 212 ಮೃತಾವಲಂಬಿತರುಗಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದೆ.
ಕರಾಸಾ ಪೇದೆ (Security Guard) 107
ಕಚೇರಿ ಸಹಾಯಕ (ಸ್ವಚ್ಚತೆ) 46
ತಾಂತ್ರಿಕ ಸಹಾಯಕ 37
ಚಾಲಕ / ನಿರ್ವಾಹಕ / ಚಾಲಕ ಕಂ ನಿರ್ವಾಹಕ 22 ಒಟ್ಟು 212 , ಈ ದಿನ ನೀಡಿರುವ ಆದೇಶ ಸೇರಿ 226 ಅನುಕಂಪದ ನೌಕರಿ
ಕರಾಸಾ ಪೇದೆ (Security Guard) ಹುದ್ದೆಗಳಿಗೆ 50 ಮೃತಾವಲಂಬಿತರುಗಳಿಗೆ ಮುಂದಿನ ಒಂದು ವಾರದಲ್ಲಿ ದೇಹ ದಾರ್ಢ್ಯತೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸುವ ಮೂಲಕ ಅನುಕಂಪದ ನೇಮಕಾತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕರಾದ (ಸಿ : ಜಾ) ಡಾ. ನಂದಿನಿದೇವಿ ಕೆ ಹಾಗೂ ನಿರ್ದೇಶಕರು (ಮಾಹಿತಿ ತಂತ್ರಜ್ಞಾನ),ಇಬ್ರಾಹಿಂ ಮೈಗೂರ್ ಉಪಸ್ಥಿತರಿದ್ದರು.