ಬೆಂಗಳೂರು, (www.thenewzmirror.com) ;
ಕೆಎಸ್ಸಾರ್ಟಿಸಿಗೆ 2025 ನೇ ವರ್ಷದಲ್ಲಿ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಸಿಗಲಾರಂಭಿಸಿದೆ. ಸಾರಿಗೆ ಹಾಗೂ ಸಾರಿಗೆ ಸಂಸ್ಥೆ ನಿರ್ವಹಣೆ ವಿಚಾರದಲ್ಲಿ ಯಾವುದೇ ಪ್ರಶಸ್ತಿಯನ್ನ ದೇಶದ ಯಾವುದೇ ಮೂಲೆಯಲ್ಲಿ ನೀಡಿದ್ರೂ ನಮ್ ರಾಜ್ಯದ ಹೆಮ್ಮೆಯ KSRTC ಹೆಸರು ಇದ್ದೇ ಇರುತ್ತೆ.
ಕಳೆದ ಹಲವು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನ ತನ್ನ ತೆಕ್ಕೆಗೆ ಹಾಕಿಕೊಳ್ತಿರೋ ನಿಗಮಕ್ಕೆ ಮತ್ತಷ್ಟು ಪ್ರಶಸ್ರಿಗಳು ಅರಸಿ ಬಂದಿವೆ.

Governance Now ಆಯೋಜಿಸಿದ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕ ಪೈಕಿ KSRTC MD ಅನ್ಬು ಕುಮಾರ್ ಗೆ PSU ಆತ್ಮನಿರ್ಭರ್ ನಾಯಕತ್ವ ಪ್ರಶಸ್ತಿ ಲಭಿಸಿದೆ. ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಸತೀಶ್ ಚಂದ್ರ ದುಬೆ ಪ್ರಶಸ್ತಿಯನ್ನು ವಿತರಿಸಿದ್ರು.
ನಿಗಮದಲ್ಲಿ ಇದೂವರೆಗೂ 1314 ಬಸ್ಸುಗಳು ಪುನಶ್ಚೇತನಗೊಂಡಿವೆ. ಕರ್ನಾಟಕ ಸಾರಿಗೆ 1184 , ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು ಸಹ ಪುನಶ್ಚೇತನಗೊಳಿಸಲಾಗಿದೆ. ಇದರಿಂದ ನಿಗಮಕ್ಕೆ 250 ಕೋಟಿಗೂ ಹೆಚ್ಚು ಉಳಿತಾಯವಾಗಿದೆ. ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ
ಸ್ವಾವಲಂಬನೆಯನ್ನು ಉತ್ತೇಜಿಸುವ ನಿಗಮದ ಯೋಜನೆಯು ಅತ್ಯುತ್ತಮವಾಗಿದೆ.
ಇನ್ನು ಪ್ರಶಸ್ತಿ ವಿತರಣೆ ವೇಳೆ ನಿಗಮದ ಉಪಮುಖ್ಯ ಯಾಂತ್ರಿಕ ಅಭಿಯಂತರ ಬಿ ಎಸ್ ನಾಗರಾಜ ಮೂರ್ತಿ ಉಪಸ್ಥಿತರಿದ್ರು.