Mobile News | ಜನಪ್ರಿಯ ಸ್ಮಾರ್ಟ್‌ಫೋನ್‌ ರಿಯಲ್‌ಮಿಯಿಂದ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಬಿಡುಗಡೆ

Realme launches new premium smartphone realme GT 7 series

ನವದೆಹಲಿ/ಬೆಂಗಳೂರು (www.thenewzmirror.com);

ಸ್ಮಾರ್ಟ್ ಫೋನ್ ಗಳಲ್ಲಿ ಅಗ್ರಸ್ಥಾನಗಳಿಸಿರುವ ರಿಯಲ್ ಮಿ ತನ್ನ ಹೊಚ್ಚ ಹೊಸ ಸರಣಿಯನ್ನು ದೇಶಾದ್ಯಂತ ಬಿಡುಗಡೆ ಮಾಡಿದೆ. ಅನೇಕ ವಿಶೇಷತೆಗಳನ್ನು ಒಳಗೊಂಡಿರುವ ರಿಯಲ್‌ ಮಿ ಜಿಟಿ 7 ಸರಣಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

RELATED POSTS

Realme ತನ್ನ ಹೊಸ GT 7 ಸರಣಿಯನ್ನು — GT 7, GT 7T ಮತ್ತು GT 7 ಡ್ರೀಮ್ ಆವೃತ್ತಿ ಸೇರಿ — ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದ ಸಹಯೋಗದೊಂದಿಗೆ ಭಾರತ ಮತ್ತು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್‌ಗಳು ಉನ್ನತ ಶ್ರೇಣಿಯ ಕಾರ್ಯಕ್ಷಮತೆ, 120W ವೇಗದ ಚಾರ್ಜಿಂಗ್, 7,000mAh ಬ್ಯಾಟರಿ, ಮತ್ತು AI ಆಧಾರಿತ ಫೀಚರ್‌ಗಳನ್ನು ಒಳಗೊಂಡಿವೆ.


Realme GT 7 ನಲ್ಲಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 9400e ಚಿಪ್‌ಸೆಟ್, 6.78-ಇಂಚಿನ 1.5K AMOLED ಡಿಸ್ಪ್ಲೇ, 50MP + 50MP + 8MP ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಮತ್ತು 32MP ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್‌ IP69 ರೇಟಿಂಗ್ ಹೊಂದಿದ್ದು, ಬ್ಲೂಟೂತ್ 5.4, NFC, Wi-Fi 7, ಮತ್ತು ಡ್ಯುಯಲ್-ಬ್ಯಾಂಡ್ GPS ಬೆಂಬಲಿಸುತ್ತದೆ.

ಹೊಸ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌, ಇಂದಿನ ಯುವಕರಿಗೆ ಹೊಂದುವ ಪರಿಪೂರ್ಣ ಆವೃತ್ತಿಯಾಗಿದೆ. ಇದರ ಜತೆಗೆ ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡುವ ಸರಣಿಯಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ರಿಯಲ್ ಮಿ GT7 ಹೊಂದಿದೆ ಎಂದು ಹೇಳುತ್ತಾರೆ ರಿಯಲ್ ಮಿ ವಕ್ತಾರರು.

120W ಅಲ್ಟ್ರಾ ಚಾರ್ಜ್ ವೇಗದ ಚಾರ್ಜಿಂಗ್‌ ಸಾಮರ್ಥ್ಯದೊಂದಿಗೆ 7000mAh ಟೈಟಾನ್ ಬ್ಯಾಟರಿ ಹೊಂದಿದ್ದು, ಜಸ್ಟ್  14 ನಿಮಿಷದಲ್ಲಿ ಶೇ 50 ರಷ್ಟು, ಹಾಗೆನೇ ಕೇವಲ 40 ನಿಮಿಷದಲ್ಲಿ ಶೇ 100 ಚಾರ್ಜ್‌ ಆಗಲಿದೆ.

ಸೋನಿ IMX 906 ಕ್ಯಾಮೆರಾವನ್ನು ಹೊಂದಿರುವ ಎಐ ಟ್ರಾವೆಲ್ ಸ್ನ್ಯಾಪ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದೆ. ಸೋನಿ IMX 906 ಚಾಲಿತ ಎಐ ಟ್ರಾವೆಲ್ ಸ್ನ್ಯಾಪ್‌ ಕ್ಯಾಮೆರಾವನ್ನು ಹೊಂದಿರುವ ಹೊಸ ಸ್ಮಾರ್ಟ್‌ಫೋನ್ 4K ಅಂಡರ್‌ವಾಟರ್ ವಿಡಿಯೋ ಮೋಡ್ ಹೊಂದಿರುವ ವಿಶ್ವದ ಮೊತ್ತಮೊದಲ ಫೋನ್ ಆಗಿದೆ. ಇದು ಡಾಲ್ಬಿ ಮಿಷನ್‌ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಮತ್ತು 30fps ನಲ್ಲಿ 8K ಹಾಗೂ 120fps ನಲ್ಲಿ 4K ವಿಡಿಯೊ ರೆಕಾರ್ಡಿಂಗ್‌ ಸಾಮರ್ಥ್ಯವಿದೆ. 8GB+256GB, 12GB+256GB ಮತ್ತು 12GB+512GB ತ್ರಿವಿಧ ಆವೃತ್ತಿಗಳಲ್ಲಿ ಲಭ್ಯವಿರುವ ಈ ಸಾಧನದ ಆರಂಭಿಕ ಬೆಲೆ ₹28,999 ಆಗಿದ್ದು, 2025ರ ಮೇ 30 ರಂದು ಮಾರಾಟ ಆರಂಭವಾಗಲಿದೆ.

ಈ ಸ್ಮಾರ್ಟ್ ಫೋನ್ ಮೀಡಿಯಾಟಿಕ್ ಡೈಮೆನ್ಸಿಟಿ 9400 ಇ ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸೋ ದೇಶದ ಮೊದಲ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಗೆ ಇದು ಸಾಕ್ಷಿಯಾಗಲಿದೆ. ಇದರ ಜತೆಗೆ ಮಲ್ಟಿಟಾಸ್ಕಿಂಗ್‌ ಮತ್ತು ಗೇಮಿಂಗ್-ದರ್ಜೆಯ ಕಾರ್ಯಕ್ಷಮತೆ ಹೊಂದಿದಲ್ಲದೆ, ದೈನಂದಿನ ಕಾರ್ಯಗಳನ್ನು ನಿಗದಿಪಡಿಸಲು ಮತ್ತು ನಿರ್ವಹಿಸಲು ಅನುವಾಗುವಂತೆ ಸ್ಮಾರ್ಟ್ ಶೆಡ್ಯೂಲ್‌ ರೂಪಿಸುವ ಎಐ ಪ್ಲಾನರ್‌ ಹೊಂದಿರುವುದು ಮತ್ತೊಂದು ವಿಶೇಷವಾಗಿದೆ.

ಇತರ ವೈಶಿಷ್ಟ್ಯತೆಗಳು

• ಸೋನಿ IMX 906 ಚಾಲಿತ ಎಐ ಟ್ರಾವೆಲ್ ಸ್ನ್ಯಾಪ್‌ ಕ್ಯಾಮೆರಾ
• ವಿಶ್ವದ ಮೊದಲ 4K ಅಂಡರ್‌ವಾಟರ್ (ಅಡಿಗೇರೆಯಲ್ಲಿಯ) ವಿಡಿಯೊ ಮೋಡ್‌
• ಡಾಲ್ಬಿ ಮಿಷನ್‌ (Dolby Vision) ಸಪೋರ್ಟ್
• ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯ:
• 8K @ 30fps
• 4K @ 120fps
• ಈ ಫೋನ್ ವಿಶೇಷವಾಗಿ ಪ್ರಯಾಣಿಕರು, ಅಡಿಗೇರೆಯ ಫೋಟೋಗ್ರಫಿ ಮತ್ತು ವಿಡಿಯೊ ಎನ್‌ಥುಸಿಯಾಸ್ಟ್‌ಗಳಿಗಾಗಿ ಅತೀ ಸೂಕ್ತವಾಗಿದೆ.
•  4K ಅಂಡರ್‌ವಾಟರ್ ವಿಡಿಯೋ ಮೊಡ್ ಹಾಗೂ ಡಾಲ್ಬಿ ಮಿಷನ್ ಸಪೋರ್ಟ್ ಮಾಡುತ್ತಿರುವುದರಿಂದ ಇದು ಪ್ರಸಕ್ತ ಫೋನ್‌ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಮಾದರಿ ಹಾಗೂ ಬೆಲೆ;
– GT 7:
• 8GB+256GB: ₹39,999 (ಆಫರ್ ಬೆಲೆ: ₹34,999)
• 12GB+256GB: ₹42,999
• 12GB+512GB: ₹46,999

– GT 7T:
• 8GB+256GB: ₹34,999 (ಆಫರ್ ಬೆಲೆ: ₹28,999)
• 12GB+256GB: ₹37,999
• 12GB+512GB: ₹41,999

– GT 7 ಡ್ರೀಮ್ ಆವೃತ್ತಿ:
• 16GB+512GB (Aston Martin Racing Green): ₹49,999
• ಮಾರಾಟ: ಜೂನ್ 13 ರಿಂದ
ಮೇ 30 ರಿಂದ Amazon ಮತ್ತು Realme ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟ ಪ್ರಾರಂಭವಾಗಿದೆ‌.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist