Good News | ಫಾರ್ಮುಲಾ ಒನ್ ತಂಡದ ಜೊತೆಗೆ ಪಾಲುದಾರಿಕೆ ಘೋಷಿಸಿದ ರಿಯಲ್‌ಮಿ

Realme Partners with Formula One Team in Exciting New Collaboration

ಬೆಂಗಳೂರು, (www.thenewzmirror.com);

ಭಾರತೀಯ ಯುವಕರ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ರಿಯಲ್‌ಮಿ ಇಂದು ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ತಂಡದ ಜೊತೆಗೆ ಅತ್ಯಂತ ಮಹತ್ವದ ಮೂರು ವರ್ಷಗಳ ಪಾಲುದಾರಿಕೆಯನ್ನು ಘೋಷಿಸಿದೆ. ಈ ಸಹಭಾಗಿತ್ವದಲ್ಲಿ ಒಂದು ಮೈಲಿಗಲ್ಲಾಗಿ, ಆಕರ್ಷಕ ಕೋ ಬ್ರ್ಯಾಂಡೆಡ್ ಎಡಿಶನ್ ರಿಯಲ್‌ ಮಿ ಜಿಟಿ 7 ಡ್ರೀಮ್ ಎಡಿಶನ್‌ ಅನ್ನು ಉದ್ಘಾಟನೆ ಮಾಡುವುದಕ್ಕೆ ಸಿದ್ಧವಾಗಿದೆ.

RELATED POSTS

ಯುವ ಬಳಕೆದಾರರ ನಿರೀಕ್ಷೆಗಳನ್ನು ಮೀರುವ ಗುರಿಯನ್ನು ರಿಯಲ್‌ಮಿ ಹಾಕಿಕೊಂಡಿದೆ. ನಿಖರ ಇಂಜಿನಿಯರಿಂಗ್, ಅಧಿಕ ಕಾರ್ಯಕ್ಷಮತೆ ಮತ್ತು ವಿಶಿಷ್ಟ ವಿನ್ಯಾಸಕ್ಕೆ ಹೆಸರಾಗಿರುವ ಆಸ್ಟನ್ ಮಾರ್ಟಿನ್ ಫಾರ್ಮುಲಾ ಒನ್ ಜೊತೆಗೆ ರಿಯಲ್‌ಮಿ ಸಹಭಾಗಿತ್ವ ಸಾಧಿಸಿದ್ದು, ಮುಂದಿನ ತಲೆಮಾರಿಗೆ ಹೋಲಿಕೆ ಇಲ್ಲದ ತಂತ್ರಜ್ಞಾನ ಅನುಭವಗಳನ್ನು ಒದಗಿಸುತ್ತದೆ.

ಈ ಸಹಭಾಗಿತ್ವದ ಬಗ್ಗೆ ಮಾತನಾಡಿದ ರಿಯಲ್‌ಮಿ ಸಿಇಒ ಸ್ಕೈ ಲಿ, “ಜನಪ್ರಿಯ ರೇಸಿಂಗ್ ತಂಡವಾದ ಆಸ್ಟನ್ ಮಾರ್ಟಿನ್ ಅರಾಮ್ಕೋ ಜೊತೆಗೆ ಸಹಭಾಗಿತ್ವ ವಹಿಸುವುದು ನಮ್ಮ ಅನ್ವೇಷಣೆಗೆ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ನಮ್ಮ ಅತ್ಯಂತ ಪರಿಪೂರ್ಣ ಉತ್ಪನ್ನವು ಮಾತ್ರ ಸ್ಕರಾಬ್ ವಿಂಗ್ಸ್‌ ಅನ್ನು ಪಡೆದಿದ್ದು, ತಂಡದ ಜೊತೆಗೆ ನಮ್ಮ ಈ ಹೊಸ ವೇದಿಕೆಯನ್ನು ಬಳಸಿಕೊಂಡು, ವಿಶಿಷ್ಟ ವಿನ್ಯಾಸವನ್ನು ರೂಪಿಸುವ ಮತ್ತು ಅತ್ಯುತ್ತಮ ಕರಕುಶಲತೆಯನ್ನು ಬಳಸುವ ಗುರಿಯನ್ನು ಹೊಂದಿದೆ ಎಂದರು.

ಆಸ್ಟನ್ ಮಾರ್ಟಿನ್ ಅರಾಮ್ಕೋ ಫಾರ್ಮುಲಾ ಒನ್ ತಂಡದ ಲೈಸೆನ್ಸಿಂಗ್ ಮತ್ತು ಸಾಮಗ್ರಿ ವಿಭಾಗದ ಮುಖ್ಯಸ್ಥ ಮ್ಯಾಟ್ ಚಾಂಪಿಯನ್ ಮಾತನಾಡಿ, “ತಂಡಕ್ಕೆ ರಿಯಲ್ ಮಿ ಅನ್ನು ಸ್ವಾಗತಿಸುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ನಮ್ಮ ಪ್ರಥಮ ಕೋ ಬ್ರ್ಯಾಂಡೆಡ್ ಅನ್ನು ನಾವು ಈ ಮೂಲಕ ಉದ್ಘಾಟನೆ ಮಾಡುತ್ತಿದ್ದೇವೆ. ಜಿಟಿ 7 ಡ್ರೀಮ್ ಎಡಿಶನ್ ನವೀನ ವಿನ್ಯಾಸದ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನೂ ನಾವು ಸಂಯೋಜಿಸಿದ್ದೇವೆ. ಭವಿಷ್ಯದ ಮಾದರಿಗಳ ಸಹಭಾಗಿತ್ವದಲ್ಲಿ ಇನ್ನಷ್ಟು ಶ್ರಮಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.

ಈ ಸಹಭಾಗಿತ್ವವು ಉತ್ಸಾಹಕರ ಕೋ ಬ್ರ್ಯಾಂಡೆಡ್ ಸಿರೀಸ್ ರಿಯಲ್‌ಮಿ ಜಿಟಿ 7 ಡ್ರೀಮ್ ಎಡಿಶನ್ ಅನ್ನು ಅನಾವರವಣಗೊಳಿಸಿದೆ. ರಿಯಲ್ ಮಿ ಜಿಟಿ ಸಿರೀಸ್‌ನ ಫ್ಲಾಗ್‌ಶಿಪ್‌ ಪರ್ಫಾರ್ಮೆನ್ಸ್ ಸಂಪ್ರದಾಯವನ್ನು ಈ ಸ್ಮಾರ್ಟ್‌ಫೋನ್ ಮುಂದುವರಿಸುತ್ತದೆ. ಅಷ್ಟೇ ಅಲ್ಲ, ಟು ವಿಂಗ್ ಡಿಸೈನ್ ಮತ್ತು ಕಸ್ಟಮ್ ಆಸ್ಟನ್ ಮಾರ್ಟಿನ್ ಗ್ರೀನ್ ಅನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲ, ಈ ಸಹಭಾಗಿತ್ವದ ಭಾಗವಾಗಿ, ವಾರ್ಷಿಕವಾಗಿ ಎರಡು ಮಾಡೆಲ್‌ಗಳನ್ನು ಎರಡೂ ಸಂಸ್ಥೆಗಳು ಜಂಟಿಯಾಗಿ ವಿನ್ಯಾಸ ಮಾಡಲಿವೆ. ಹೀಗಾಗಿ ಈ ಸಹಭಾಗಿತ್ವ ಇನ್ನಷ್ಟು ಆಕರ್ಷಕ ಮತ್ತು ಅತ್ಯಂಯ ನಿರೀಕ್ಷಿತವಾಗಿರುತ್ತವೆ.

ರಿಯಲ್‌ಮಿ ಜಿಟಿ 7 ಸಿರೀಸ್ ಗ್ಲೋಬಲ್ ಲಾಂಚ್ ಈವೆಂಟ್ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಮೇ 27 ರಂದು ನಡೆಯಲಿದೆ. ಇದರಲ್ಲಿ ಆಕರ್ಷಕ ಜಿಟಿ 7 ಸಿರೀಸ್‌ ಮತ್ತು ಡ್ರೀಮ್ ಎಡಿಶನ್‌ನ ಇನ್ನಷ್ಟು ವಿವರಗಳನ್ನು ಅನಾವರಣಗೊಳಿಸಲಾಗುತ್ತದೆ!

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist