ಬೆಂಗಳೂರು, (www.thenewzmirror.com) ;
ಬಹು ನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿದೆ. ಪಾಲಿಕೆ ಸದಸ್ಯರಿಲ್ಲದೆ ಅಧಿಕಾರಿಗಳೇ ಮಂಡನೆ ಮಾಡಿರುವ ಐದನೇ ಬಜೆಟ್ ಇದಾಗಿದ್ದು, ಬಿಬಿಎಂಪಿ ಇತಿಹಾಸದಲ್ಲೇ ದಾಖಲೆ ಪ್ರಮಾಣದ ಅಂದರೆ 19 ಕೋಟಿ ಅಯವ್ಯಯ ಮಂಡನೆ ಮಾಡಿದ್ದು, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಮಂಡಿಸಲಾದ ಎರಡನೇ ಬಜೆಟ್ ಎನ್ನುವ ಖ್ಯಾತಿಗೆ ಒಳಗಾಗಿದೆ.
ಬಿಬಿಎಂಪಿ ಅಧಿಕಾರಿಗಳು ಅಳೆದು ತೂಗಿ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, ಡಿಕೆ ಶಿವಕುಮಾರ್ ಅವ್ರ ಬ್ರ್ಯಾಂಡ್ ಬೆಂಗಳೂರಿಗೆ ಪೂರಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಬೃಹತ್ ಗಾತ್ರದ ಅಯವ್ಯಯವನ್ನ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಟೌನ್ ಹಾಲ್ ನಲ್ಲಿ ಮಂಡಿಸಿದ್ರು.
ಸತತ ಮೂರು ಬಾರಿ ಬಜೆಟ್ ಮಂಡನೆಗೆ ದಿನಾಂಕ ಫಿಕ್ಸ್ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮುಂದೂಡಿ ಮುಂದೂಡಿ ಅಂತಿಮವಾಗಿ ಇಂದು ಟೌನ್ ಹಾಲ್ ನಲ್ಲಿ ಪಾಲಿಕೆ ಸದಸ್ಯರುಗಳು ಇಲ್ಲದೆ ಅಧಿಕಾರಿಗಳು ಅಯವ್ಯಯ ಮಂಡಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು, ಆರೋಗ್ಯ ಬೆಂಗಳೂರು ಸೇರಿದಂತೆ ವಿವಿಧ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ.
ಬಿಬಿಎಂಪಿ ಇತಿಹಾಸದಲ್ಲಿ ಇದೂವರೆಗೂ 12 ರಿಂದ 13 ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ದಾಖಲೆಯಾಗಿತ್ತು. ಆದ್ರೆ ಈ ಬಾರಿ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಹತ್ರತ್ರ 20 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದು, ಇದರಲ್ಲಿ ಶೇಕಡಾ 62 ರಷ್ಟು ಬೆಂಗಳೂರು ಅಭಿವೃದ್ಧಿಗೆ ನೀಡಲಾಗಿದೆ. ಆ ಮೂಲಕ ಬಜೆಟ್ ಗಾತ್ರ 19,927.08 ಕೋಟಿ ಮುಟ್ಟಿದೆ.
ಈ ಬಾರಿಯ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಬರೋಬ್ಬರಿ 12,952 ಕೋಟಿ ಸೀಮಿತವಾಗಿದೆ. ಇಷ್ಟು ಬೃಹತ್ ಗಾತ್ರದ ಬಜೆಟ್ ನಲ್ಲಿ 4,900 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹದ ಗುರಿ, ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ತೃತೀಯ ಲಿಂಗಿ ಸಮುದಾಯಕ್ಕೆ ಎಲೆಕ್ಟ್ರಾನಿಕ್ ವಾಹನ ಖರೀದಿಗೆ ಪಾಲಿಕೆ ಧನಸಹಾಯ ನೀಡಲಿದ್ದು. ಇದಕ್ಕೆ ಪಾಲಿಕೆ ಬಜೆಟ್ ನಲ್ಲಿ 10 ಕೋಟಿ ಮೀಸಲಿಸಿದೆ. ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ, ಸುರಂಗ ಮಾರ್ಗಕ್ಕೆ 42 ಸಾವಿರ ಕೋಟಿ. ಎಲಿವೇಟೆಡ್ ಕಾರಿಡಾರ್ ಹಾಗೂ ಗ್ರೇಡ ಸಪರೇಟರ್ ಗಳ ನಿರ್ಮಾಣಕ್ಕೆ 13,200 ಕೋಟಿ ಹಾಗೂ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ 9 ಸಾವಿರ ಕೋಟಿ, ರಾಜಕಾಲುವೆ ಹಾಗೂ ಸಂಪರ್ಕ ರಸ್ತೆಗೆ 3 ಸಾವಿರ ಕೋಟಿ, ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ 6 ಸಾವಿರ ಕೋಟಿ, ಸ್ಕೈಡೆಕ್ ನಿರ್ಮಾಣ 400 ಕೋಟಿ ಮೀಸಲಿಡಲಾಗಿದೆ.



ಬಿಬಿಎಂಪಿ ಬಜೆಟ್ ಹೈಲೇಟ್ಸ್ !
- ಈ ಬಾರಿ 5716 ಕೋಟಿ ಆಸ್ತಿ ತೆರಿಗೆ ನಿರೀಕ್ಷೆ
- ಎಲ್ಲಾ ಖಾತಾಗಳನ್ನ ಡಿಜಿಟಲೀಕರಣ ಮಾಡುವ ಮೂಲಕ ಇ-ಖಾತಾ ವ್ಯವಸ್ಥೆ ಜಾರಿಗೆ ಸಿದ್ಧತೆ
- ಎಲ್ಲಾ ಖಾತಾಗಳಿಗೂ GPS ಆಧಾರಿತ ಐಡಿ ನೀಡಲು ತೀರ್ಮಾನ
- ಬಿಬಿಎಂಪಿ ಆಸ್ತಿಗಳನ್ನ ಗುತ್ತಿಗೆ ನೀಡುವ ಮೂಲಕ 210 ಕೋಟಿ ಆದಾಯ ನಿರೀಕ್ಷೆ
- ಜಾಹೀರಾತಿನಿಂದ 750 ಕೋಟಿ ನಿರೀಕ್ಷೆ
- ಟೌನ್ ಪ್ಲಾನಿಂಗ್ ನಿಂದ 805 ಕೋಟಿ ನಿರೀಕ್ಷೆ
- ಆಡಳಿತದಲ್ಲಿ ಪಾರದರ್ಶಕತೆ ತಂದು ಕೌನ್ಸಿಲಿಂಗ್ ಮೂಲಕ ವರ್ಗಾವಣೆ
- 12692 ಪೌರ ಕಾರ್ಮಿಕರನ್ನ ನೇರ ನೇಮಕಾತಿ ಮಾಡಿಕೊಳ್ಳುವ ಜತೆಗೆ 500 ಕೋಟಿ ಮೀಸಲು
- ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ತೃತೀಯ ಲಿಂಗಿ ಸಮುದಾಯಕ್ಕೆ ಎಲೆಕ್ಟ್ರಾನಿಕ್ ವಾಹನ ಖರೀದಿಗೆ ಪಾಲಿಕೆ ಧನಸಹಾಯ ನೀಡಲಿದ್ದು. ಇದಕ್ಕೆ ಪಾಲಿಕೆ ಬಜೆಟ್ ನಲ್ಲಿ 10 ಕೋಟಿ ಮೀಸಲಿಸಿದೆ.
- ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕೆ 10 ಕೋಟಿ
- ಹೊಲಿಗೆ ತರಬೇತಿ, ಲೈಬ್ರರಿಗೆ ಪುಸ್ತಕ ಪೂರೈಕೆಗೆ 1 ಕೋಟಿ
- ಬಿಬಿಎಂಪಿ ಎಲ್ಲ ಇಲಾಖೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡೋಕೆ BBMP ಮಾಸಿಕ – ಇ ನಿಯತಕಾಲಿಕೆ ಪ್ರಾರಂಭಕ್ಕೆ ಸಿದ್ಧತೆ
- ಬ್ರ್ಯಾಂಡ್ ಬೆಂಗಳೂರಿಗೆ ಟ್ರಾಫಿಕ್ ಫ್ರೀ ಮಾಡಲು 880 ಕೋಟಿ ಮೀಸಲು
- ಸ್ಕೈಡೆಕ್ ನಿರ್ಮಾಣದ ಗುರಿ ಇಟ್ಟುಕೊಂಡಿದೆ ಇದಕ್ಕಾಗಿ 400 ಕೋಟಿ
- ಸಂಚಾರ ದಟ್ಟಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ರಮ (ಹೆಬ್ಬಾಳದಿಂದ ಹೊಸೂರು ರಸ್ತೆ ಸಿಲ್ಕ್ ಬೋರ್ಡ್, ಕೆಆರ್ ಪುರಂ ಟು ಮೈಸೂರು ರಸ್ತೆ)
- 100 ಕಿಲೋ ಮೀಟರ್ ಉದ್ದದ ರಸ್ತೆಯನ್ನ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಮಾಡಲು ತೀರ್ಮಾನ
- ಮಳೆ ನೀರು ಚರಂಡಿ ಪಕ್ಕದಲ್ಲಿ 300 ಕಿಲೋ ಮೀಟರ್ ಅಭಿವೃದ್ಧಿಗೆ 3000 ಕೋಟಿ ಮೀಸಲು
- 200ಕಿಲೋ ಮೀಟರ್ ವೈಟ್ ಟಾಪಿಂಗ್1700 ಕೋಟಿ
- ಪರಿಷ್ಕೃತ ಮಾಸ್ಟರ್ ಪ್ಲಾನ್ ಯೋಜನೆಯಡಿ 118 ರಸ್ತೆಗಳ ಅಭಿವೃದ್ಧಿ ಇದಕ್ಕಾಗಿ 694 ಕೋಟಿ ಅನುದಾನ
- 225 ವಾರ್ಡ್ ಗಳ ಅಭಿವೃದ್ಧಿಗೆ 675 ಕೋಟಿ ಮೀಸಲು
- ಬೆಂಗಳೂರಿನ 4 ದಿಕ್ಕಿನಲ್ಲಿ ಕಸ ಸುರಿಯೋಕೆ ಜಾಗ ಗುರ್ತಿಸಲು ತೀರ್ಮಾನ
-ಕಟ್ಟಡದ ತಾಜ್ಯ ವೈಜ್ಞಾನಿಕ ನಿರ್ವಹಣೆಗೆ ಹೊಸ ಪ್ಲಾನ್ - ಕಸ ಸುರಿಯುವ ಬ್ಲಾಕ್ ಸ್ಪಾಟ್ ಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ
- ಕಸದ ಡಂಪಿಂಗ್ ಯಾರ್ಡ್ ಗಳಾದ ಬೆಳ್ಳಲ್ಲಿ, ಮಿಟಗಾನಹಳ್ಳಿ, ಬಾಗಲೂರು, ಬೈಯ್ಯಪ್ಪನಹಳ್ಳಿ, ಕಣ್ಣೂರು, ಗಳಲ್ಲಿ ಲೆಚೆಟ್ ತ್ಯಾಜ್ಯಾ ಸಂಸ್ಕರಣೆಗೆ 475 ಕೋಟಿ
- ತ್ಯಾಜ್ಯ ಭೂಭರ್ತಿ ಸ್ಥಳಗಳ ನಿರ್ವಹಣೆಗೆ 100 ಕೋಟಿ
- ಘನತ್ಯಾಜ್ಯ, ಕಸ ನಿರ್ವಹಣೆಗೆ 1400 ಕೋಟಿ ಮೀಸಲು
- ೫ ಲಕ್ಷ ಸಸಿ ನೆಡಲು 51 ಕೋಟಿ ಮೀಸಲು
- ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ರೂ ಅನುದಾನ.
- ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಹೊಸ ಆಸ್ಪತ್ರೆಗಳ ನಿರ್ಮಾಣ,
- ಯೋಜನೆ ಕಾರ್ಯನಿಯೋಜನೆಗಾಗಿ 144 ಎಲೆಕ್ಟ್ರಿಕ್ ವಾಹನ, ಎಮರ್ಜೆನ್ಸಿ ವೇಳೆ ತುರ್ತು ಆರೈಕೆಗೆ 26 BLS ಆ್ಯಂಬುಲೆನ್ಸ್ಗಳ ಖರೀದಿ.
- ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರಿನಲ್ಲಿ 7 ಫಿಸಿಯೋಥೆರಪಿ ಕೇಂದ್ರಗಳ ಸ್ಥಾಪನೆ.
- ಬೀದಿ ನಾಯಿಗಳ ನಿರ್ವಹಣೆಗೆ 60 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 75,000 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ, 1,80,000 ನಾಯಿಗಳಿಗೆ ವ್ಯಾಕ್ಸಿನ್ ಹಾಕಲು ಯೋಜನೆಗೆ
- ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಎಬಿಸಿ ಕೇಂದ್ರ ಸ್ಥಾಪನೆಗೆ 7 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
- ಒಟ್ಟು ಆದಾಯ 19,930.64 ಕೋಟಿ
- ಒಟ್ಟು ವೆಚ್ಚ 19,927.08 ಕೋಟಿ