ಬೆಂಗಳೂರು,(www.thenewzmirror.com);
ಇತರ ಈಚಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವೇ ಇಲ್ಲದಂತಾಗಿದೆ. ನಿಯಮ್ಳು ಇರುವುದೇ ಬ್ರೇಕ್ ಮಾಡೋದಿಕ್ಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿಯೇ ಸಾರಿಗೆ ಇಲಾಖೆ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಮಾಡುತ್ತಿದೆ.
ಅದೇ ರೀತೀ ಹೊಸಕೋಟೆ ಟೋಲ್ ಬಳಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕೆ.ಆರ್.ಪುರ ಹಾಗೂ ಲ್ಯಾಂಕ್ ಹೊಸಕೋಟೆ ಹೈವೆ ಲಿಮಿಟೆಡ್, ಹೊಸಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ತಪಾ ಸಪ್ತಾಹ-2023 ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಲಾಯ್ತು.
ಕೆ.ಆರ್ ಪುರಂ RTO ಪ್ರಕಾಶ್
ಸ್ವಚ್ಛತಾ ಪಖ್ವಾಡ” ಎಂಬ ದ್ಯೇಯ ವಾಕ್ಯದೊಂದಿಗೆ ಹಾಗೂ ಭಾರಿ ವಾಹನಗಳು ರಸ್ತೆಯ ಎಡಬದಿಯಲ್ಲಿ ಮತ್ತು ವೇಗವಾಗಿ ಚಲಿಸುವ ವಾಹನಗಳು ರಸ್ತೆಯ ಬಲಭಾಗದಲ್ಲಿ ಕಡ್ಡಾಯವಾಗಿ ಚಲಿಸುವಂತೆ ಜಾಗೃತಿ ಮೂಡಿಲಾಯಿತು. ಟೋಲ್ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಇದರ ಅರಿವು ಮೂಡಿಸಲಾಯಿತು.
ಸಾರಿಗೆ ಇಲಾಖೆಯ ಅಪರ ಆಯುಕ್ತ (ಪ್ರವರ್ತನ)(ದಕ್ಷಿಣ) ಮಲ್ಲಿಕಾರ್ಜುನ್ ಸಿ., ರಾಜೇಂದ್ರ ನವರತ್ನ, ಎ.ಜಿ.ಎಂ., ಲ್ಯಾಂಕ್ ಹೊಸಕೋಟೆ ಹೈವೆ ಲಿಮಿಟೆಡ್ ಕೆ.ಆರ್. ಪುರಂ ಕಚೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್. ಎಸ್. ಪ್ರಕಾಶ್ ಈ ವೇಳೆ ಹಾಜರಿದ್ದರು.
ರಸ್ತೆ ಸುರಕ್ತಪಾ ಸಪ್ತಾಹದಲ್ಲಿ ನಿಯಮ ಉಲ್ಲಂಘಿಸಿ ಚಲಿಸುವ ಚಾಲಕರಿಗೆ ಹೂಗುಚ್ಛ ನೀಡಿ ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಅರಿವು ಮೂಡಿಸಲಾಯಿತು.
ಪಿ.ಉಮೇಶ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೆ.ಆರ್.ಪುರ, ಮತ್ತು ಪೊಲೀಸ್ ಇಲಾಖಾ ಸಿಬ್ಬಂದಿ, ಟೋಲ್ ಅಧಿಕಾರಿ,ಸಿಬ್ಬಂದಿ ಹಾಗೂ ಸಾರ್ವಜನಿಕರು, ಚಾಲಕರು ಹಾಜರಿದ್ದರು.