ಬೆಂಗಳೂರು(www.thenewzmirror.com):ಕೆಎಸ್ಆರ್ಟಿಸಿ ಪ್ರೀಮಿಯಂ ಸೇವೆ ಒದಗಿಸುವ ಬಸ್ಸುಗಳಲ್ಲಿ ಜಾರಿಯಲ್ಲಿದ್ದ ಪ್ರಯಾಣ ದರದಲ್ಲಿನ ರೌಂಡಪ್ ವ್ಯವಸ್ಥೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಚಿಲ್ಲರೆ ಸಮಸ್ಯೆಯಿಂದ ಜಾರಿಗೊಳಿಸಲಾಗಿದ್ದ ವ್ಯವಸ್ಥೆಗೆ ಯುಪಿಐ ಪಾವತಿ ವ್ಯವಸ್ಥೆ ಪರಿಹಾರ ಕಲ್ಪಿಸಿರುವುದರಿಂದಾಗಿ ಕೆಎಸ್ಆರ್ಟಿಸಿ ರೌಂಡಪ್ ವ್ಯವಸ್ಥೆ ವಾಪಸ್ ಪಡೆದಿದೆ.
ರೌಂಡಪ್ ವ್ಯವಸ್ಥೆಯು ಪ್ರತಿಷ್ಟಿತ ಸಾರಿಗೆಗಳಲ್ಲಿ ( Premium Service buses 400 ಬಸ್ಸುಗಳಲ್ಲಿ ಮಾತ್ರ) ಜಾರಿಯಲ್ಲಿದ್ದು, ಅದರಲ್ಲೂ ETM ಮತ್ತು ಅವತಾರ್ ಕೌಂಟರ್ ಗಳಲ್ಲಿ ಪಡೆಯುವ ಟಿಕೇಟ್ ಗೆ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿತ್ತು. ಅಂದರೆ ಉದಾ: ಪ್ರಯಾಣ ದರ ರೂ.101 ರಿಂದ 105 ರವರೆಗೂ ಇದ್ದಲ್ಲಿ ರೂ.100 ಪ್ರಯಾಣಿಕರಿಂದ ಪಡೆಯಲಾಗುತ್ತದೆ ಅದೇ ರೀತಿ ರೂ.106 ರಿಂದ ರೂ.109 ಇದ್ದಲ್ಲಿ ಪ್ರಯಾಣಿಕರಿಂದ ರೂ.110 ಪಡೆಯಲಾಗುತ್ತಿತ್ತು. ಈಗ ನಿಗಮದಲ್ಲಿ UPI ಯಶಸ್ವಿ ಅನುಷ್ಟಾನವಾಗಿರುವುದರಿಂದ ರೌಡಂಪ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದ್ದು, ತಂತ್ರಾಂಶದಲ್ಲಿ ಈ ಸಂಬಂಧ ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ಸಾರಿಗೆ ನಿಗಮ ಪ್ರಕಟಣೆ ಮೂಲಕ ತಿಳಿಸಿದೆ.