ಬೆಂಗಳೂರು, (www.thenewzmirror.com) :
ಸಾರಿಗೆ ಇಲಾಖೆಯಲ್ಲಿ ದಿನ ಬೆಳಗಾದಂತೆ ಒಂದಲ್ಲಾ ಒಂದು ಹಗರಣ ಬೆಳಕಿಗೆ ಬರುತ್ತಿದೆ. ಈ ಹಿಂದೆ ನಕಲಿ ಸ್ಮಾರ್ಟ್ ಕಾರ್ಡ್ ಗಳನ್ನ ನೀಡುತ್ತಿದ್ದ ಆರೋಪದಡಿ ಸುದ್ದಿಯಲ್ಲಿದ್ದ ಇಲಾಖೆ ಇದೀಗ ಮತ್ತೊಂದು ಹಗರಣದ ಮೂಲಕ ಸುದ್ದಿಯಾಗಿದೆ ಅದೂ ಕೂಡ ವೆಹಿಕಲ್ ಟ್ರಾನ್ಸ್ ಫರ್ ವಿಚಾರದಲ್ಲಿ.
ಹೊರ ರಾಜ್ಯದಲ್ಲಿ ನೋಂದಣಿ ಆಗಿದ್ದ ವಾಹನವನ್ನ ನಮ್ಮ ರಾಜ್ಯಕ್ಕೆ ವರ್ಗಾವಣೆ ಮಾಡ್ಬೇಕು ಅಂದ್ರೆ ಇಂತಿಷ್ಟು ಅಂತ ತೆರಿಗೆ ಕಟ್ಟಬೇಕು.., ಆದ್ರೆ ಬೆಂಗಳೂರು ವಲಯದಲ್ಲಿರೋ ಕೆಲ ಹಿರಿಯ ಅಧಿಕಾರಿಗಳ ಕೃಪಾ ಕಟಾಕ್ಷದಿಂದ ತೆರಿಗೆ ಕಟ್ಟದೆನೇ ವರ್ಗಾವಣೆ ಆಗ್ತಿದೆ.., ಇದಕ್ಕೆ ಬೆಂಗಳೂರು ವಲಯದ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ಸಾಥ್ ಕೊಡುತ್ತಿದ್ದಾರೆ ಅನ್ನುವ ಅನುಮಾನ ಮೂಡುತ್ತಿದೆ.
ಹೀಗೆ ಮಾಡೋದ್ರಿಂದ ಸಾರಿಗೆ ಇಲಾಖೆಗೆ ಆದಾಯನೂ ಬರುತ್ತೆ. ಆದ್ರೆ ಸ್ಮಾರ್ಟ್ ಕಾರ್ಡ್ ನೀಡುವ ಜವಾಬ್ದಾರಿ ಹೊತ್ತ ಕಂಪನಿ ಜತೆ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿ ಕೋರಮಂಗಲ, ಇಂದಿರಾನಗರ, ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಚೇರಿಯಲ್ಲಿ ತೆರಿಗೆ ಕಟ್ಟಿಸಿಕೊಳ್ಳದೇ 100 ಕ್ಕೂ ಹೆಚ್ಚು ವಾಹನಗಳನ್ನ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಹೇಗೆ ಆಗುತ್ತೆ ಅಕ್ರಮ..?
ಸಾಮಾನ್ಯವಾಗಿ ದೆಹಲಿ ನೋಂದಣಿ ಇರುವ ಒಂದು ವಾಹನ ಆ ರಾಜ್ಯದ ತೆರಿಗೆ ಕಟ್ಟಿ ಅಲ್ಲಿ ಓಡಿಸಲು ಅನುಮತಿ ಪಡೆದಿರುತ್ತೆ. ಅದೇ ವಾಹನ ನಮ್ಮ ರಾಜ್ಯದಲ್ಲಿ ಶಾಶ್ವತವಾಗಿ ಓಡಾಡ್ಬೇಕು ಅಂದ್ರೆ ನಮ್ಮ ರಾಜ್ಯದಲ್ಲಿ ಆ ಮಾದರಿಯ ವಾಹನಕ್ಕೆ ಎಷ್ಟು ತೆರಿಗೆ ಕಟ್ಟಬೇಕು ಅನ್ನೋದನ್ನ ಲೆಕ್ಕ ಹಾಕಿ ಅಷ್ಟು ತೆರಿಗೆ ಕಟ್ಟಬೇಕು. ಪೂರ್ಣ ಪ್ರಮಾಣದ ಟ್ಯಾಕ್ಸ್ ಕಟ್ಟಿದ ಮೇಲೆ ವೆಹಿಕಲ್ ಟ್ರಾನ್ಸ್ ಫರ್ ಮಾಡಬೇಕು.
ಇದರ ಹಿಂದೆ ಎರಡು ಎರಡು ಹುದ್ದೆ ನಿಭಾಯಿಸುತ್ತಿರುವ ಸಾರಿಗೆ ಇಲಾಖೆ ಜಂಟಿ ಆಯುಕ್ತ ಹಾಲಸ್ವಾಮಿ ಹಾಗೂ ಸ್ಮಾರ್ಟ್ ಕಾರ್ಡ್ ನೀಡುವ ಜವಾಬ್ದಾರಿ ಹೊತ್ತಿರುವ ರೋಸ್ ಮಾರ್ಟ್ ಕಂಪನಿ ಜತೆ ಗೂಡ ಅಕ್ರಮ ನಡೀತಾ ಇದೆ ಅನ್ನುವ ಗುಮಾನಿನೂ ಹರಿದಾಡುತ್ತಿದೆ.
ಅಚ್ಚರಿ ಏನಂದ್ರೆ ಈ ದಂಧೆ ಆಯಾ ಸಾರಿಗೆ ಕಚೇರಿಯ ಆರ್ ಟಿಓ ಗಮನಕ್ಕೆ ತಾರದೆನೇ ಆಗ್ತಿತ್ತು ಅನ್ನೋದು ಮತ್ತೊಂದು ವಿಚಾರ. ಯಾವಾಗ ತನ್ನ ಕಚೇರಿಯಲ್ಲೇ ಈ ರೀತಿ ವಂಚನೆ ನಡೀತಿದೆ ಅನ್ನೋದು ತಿಳಿತೋ ತಕ್ಷಣವೇ ಇಂದಿರಾನಗರ ಆರ್ ಟಿಓ ಪೊಲೀಸ್ ಠಾಣೆಗೆ ದೂರು ಕೊಟ್ಟು ತನಿಖೆಗೆ ಮನವಿ ಮಾಡಿದ್ದಾರೆ.