ಬೆಂಗಳೂರು, (www.thenewzmirror.com);
2024-25 ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಶೇ. 73.43 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ನಿರೀಕ್ಷೆಯಂತೆ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಶಿಕ್ಷಣ ಸಷಿವ ಮಧುಬಂಗಾರಪ್ಪ ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ 6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,68,439 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ 73.45 ರಷ್ಟು ಫಲಿತಾಂಶ ಬಂದಿದೆ. ಈ ಪೈಕಿ ಶೇ. 77.88 ರಷ್ಟು ಬಾಲಕಿಯರು ತೇರ್ಗಡೆಯಾದರೆ ಶೇ. 68.22 ರಷ್ಟು ಬಾಲಕರು ಪಾಸಾಗಿದ್ದಾರೆ.
ಫಲಿತಾಂಶ ಹೀಗೆ ನೋಡಿ..
* ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
* ಸ್ಕ್ರೀನ್ ಮೇಲೆ ಕಾಣುವ 2nd PUC Result 2025 ಎಂಬಲ್ಲಿ ಕ್ಲಿಕ್ ಮಾಡಿ ಲಿಂಕ್ ಓಪನ್ ಮಾಡಿ.
* ತದನಂತರದಲ್ಲಿ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಪಾಸ್ ವರ್ಡ್ ನಮೂದಿಸಿಕೊಳ್ಳಿ.
* ಆ ಬಳಿಕ ಸಬ್ಮಿಟ್ ಕೊಟ್ಟರೆ ಫಲಿತಾಂಶ ಸ್ಕ್ರೀನ್ ಮೇಲೆ ಕಾಣುತ್ತದೆ. ಈ ಪ್ರತಿಯನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಬಹುದು.
ಕಲಾ ವಿಭಾಗದಲ್ಲಿ 1,53,043 ವಿದ್ಯಾರ್ಥಿಗಳ ಪೈಕಿ 81553 ವಿದ್ಯಾರ್ಥಿಗಳು ಉತಗತೀರ್ಣರಾಗೋ ಮೂಲಕ . ಶೇ 53.29 ರಷ್ಟು ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 2,04,329 ಪೈಕಿ 1,55,425 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.76.07 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 2,80,433 ವಿದ್ಯಾರ್ಥಿಗಳ ಪೈಕಿ 2.31.461 ಉತ್ತೀರ್ಣರಾಗಿ ಶೇ. 82.54ರಷ್ಟು ಫಲಿತಾಂಶ ಬಂದಿದೆ.
ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್ !
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ
ಉಡುಪಿ ಜಿಲ್ಲೆಗೆ ಈ ಬಾರಿಯೂ ಮೊದಲ ಸ್ಥಾನ ಸಿಕ್ಕಿದೆ. ಶೇ 93.90 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನು ಯಾದಗಿರಿಗೆ ಕೊನೆಯ ಸ್ಥಾನ ಲಭಿಸಿದ್ದು ಶೇ 48.45 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಶೇ 93.57ರಷ್ಟು ಫಲಿತಾಂಶ ಲಭಿಸಿದೆ. ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ಶೇ.85.36. ಅದೇ ರೀತಿ ಶೇ. 83.84 ಫಲಿತಾಂಶ ಪಡೆದಿರುವ ಕೊಡಗು ಜಿಲ್ಲೆ 4ನೇ ಸ್ಥಾನಕ್ಕೇರಿದೆ.
ಜಿಲ್ಲೆಗಳ ಶೇಕಾಡಾವರು ಫಲಿತಾಂಶ
1. ಉಡುಪಿ 93.90
2. ದ.ಕನ್ನಡ 93.57
3. ಬೆಂಗಳೂರು ದಕ್ಷಿಣ 85.36
4. ಕೊಡಗು 83.84
5. ಬೆಂಗಳೂರು ಉತ್ತರ 83.31
6. ಉತ್ತರ ಕನ್ನಡ 82.93
7. ಶಿವಮೊಗ್ಗ 79.91
8. ಬೆಂಗಳೂರು ಗ್ರಾ. 79.70
9. ಚಿಕ್ಕಮಗಳೂರು 79.56
10. ಹಾಸನ 77.56
11. ಚಿಕ್ಕಬಳ್ಳಾಪುರ 75.80
12. ಮೈಸೂರು 74.30
13. ಚಾಮರಾಜನಗರ 73.97
14. ಮಂಡ್ಯ 73.27
15. ಬಾಗಲಕೋಟೆ 72.83
16. ಕೋಲಾರ 72.45
17. ಧಾರವಾಡ 72.32
18. ತುಮಕೂರು 72.02
19. ರಾಮನಗರ 69.71
20. ದಾವಣಗೆರೆ 69.45
21. ಹಾವೇರಿ 67.56
22. ಬೀದರ್ 67.31
23. ಕೊಪ್ಪಳ 67.20
24. ಚಿಕ್ಕೋಡಿ 66.76
25. ಗದಗ 66.64
26. ಬೆಳಗಾವಿ 65.37
27. ಬಳ್ಳಾರಿ 64.41
28. ಚಿತ್ರದುರ್ಗ 59.87
29. ವಿಜಯಪುರ 58.81
30. ರಾಯಚೂರು 58.75
31. ಕಲಬುರುಗಿ 55.70
32. ಯಾದಗಿರಿ 48.45
ಇವರೇ ನೋಡಿ ಟಾಪರ್ ಗಳು
ವಿಜ್ಞಾನ ವಿಭಾಗ
ಪ್ರಥಮ ಸ್ಥಾನ- ಎಕ್ಸ್‌ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್, ಮಂಗಳೂರು,
ದ್ವಿತೀಯ ಸ್ಥಾನ-ಆಸ್ತಿ ಶೆಟ್ಟಿ(ಉಡುಪಿ),
ತೃತೀಯ ಸ್ಥಾನ-ಚೈತನ್ಯ ಗಣೇಶ್ ಭಟ್(ಬೆಂಗಳೂರು)
ಕಾಮರ್ಸ್ ವಿಭಾಗ
ಪ್ರಥಮ ಸ್ಥಾನ – ದಕ್ಷಿಣ ಕನ್ನಡದ ಕೆನಾರ ಪಿಯು ಕಾಲೇಜು ವಿದ್ಯಾರ್ಥಿನಿ ದೀಪಶ್ರೀ
ಕಲಾ ವಿಭಾಗ
ಪ್ರಥಮ ಸ್ಥಾನ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಸಂಜನಾ ಬಾಯಿ
ಫಲಿತಾಂಶ ನೋಡುವುದು ಹೇಗೆ?
1. karresults.nic.in ಕರ್ನಾಟಕ ಫಲಿತಾಂಶದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಹೊಸ ಪುಟ ತೆರೆಯುತ್ತದೆ, ಅಲ್ಲಿ ಅಭ್ಯರ್ಥಿಗಳು ಲಾಗಿನ್ ವಿವರಗಳನ್ನು ನಮೂದಿಸಬೇಕಾಗುತ್ತದೆ.
4. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ.
5. ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ಲೋಡ್ ಮಾಡಿ.