ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ದೇಶ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು: ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ ಸಿಂಧ್ಯಾ

RELATED POSTS

ಬೆಂಗಳೂರು(www.theñewzmirror.com):ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ನಮ್ಮ ದೇಶ, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಅವರು ಕರೆ ನೀಡಿದರು.

ಇಂದು ನಾಗರಬಾವಿಯ ವಿಟಿಯು-ವಿ.ಆರ್.ಐ.ಎಫ್- ಟಿ.ಸಿ.ಓ.ಇ ಹಬ್ ಅಂಡ್ ಸ್ಪೋಕ್ ಸೆಂಟರ್ ಆಫ್ ಎಕ್ಸೆಲೆನ್ಸ್‍ನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ವಿಶ್ವವಿದ್ಯಾಲಯದಲ್ಲಿ ವಿಪುಲವಾದ ಅವಕಾಶಗಳಿವೆ. ನವೀನ ತಾಂತ್ರಿಕತೆಯನ್ನು ವಿದ್ಯಾರ್ಥಿಗಳು ಬಳಸಿಕೊಳ್ಳುವುದರ ಮೂಲಕ ಸದುಪಯೋಗಪಡಿಸಿಕೊಂಡು ತಮ್ಮ ಕನಸನ್ನು ನನಸಾಗಿಕೊಳ್ಳಿ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ನಮ್ಮ ದೇಶಕ್ಕೆ ಉತ್ತಮ ಕೊಡುಗೆ ನೀಡಿ. ನಿಮ್ಮ ಆಲೋಚನೆಗಳನ್ನು ವಿಸ್ತರಿಸಿಕೊಂಡು ಇಂದಿನ ಕಾಲದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ರೀತಿಯಲ್ಲಿ ನವೋದ್ಯಮ ಆರಂಭವಾಗಲಿ. ಇದು ಭಾರತದ ಅಭಿವೃದ್ಧಿಗೂ ಸಹಕಾರಿಯಾಗಿರಲಿ ಎಂದು ತಿಳಿಸಿದರು.

ಗುರು ಪೂರ್ಣಿಮಯ ದಿನ ಕಾರ್ಯಕ್ರಮದ ಉದ್ಘಾಟನೆ ಮಾಡಿರುವುದು ನನಗೆ ಸಂತಸವಾಗಿದೆ. ಗುರು ಪೂರ್ಣಿಮ ದಿನ ಮಹತ್ವದ ದಿನವಾಗಿದ್ದು ಶಿಷ್ಯರು ತಮ್ಮ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಶುಭ ದಿನ. ಗುರುಗಳು ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಹೊರತೆಗೆದು ಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುತ್ತಾರೆ. ನನ್ನ ಜೀವನದಲ್ಲಿ 3 ಗುರು ಗುರುಗಳಿದ್ದಾರೆ. ಜೀವದಾತ, ಜ್ಞಾನದಾತ, ಅನ್ನದಾತ. ವೈದ್ಯರು ಜನನ ನೀಡುತ್ತಾರೆ. ಗುರುಗಳು ಜ್ಞಾನ ನೀಡುತ್ತಾರೆ. ರೈತರು ಅನ್ನವನ್ನು ನೀಡುತ್ತಾರೆ ಎಂದು ತಿಳಿಸಿದರು.

ಸರ್. ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಮಾಡಿದ ಸಾಧನೆ ಎಂದೆಂದಿಗೂ ಚಿರಸ್ಮರಣೀಯ. ಅವರ ಸಾಧನೆ ಯಾವಾಗಲು ಶಾಶ್ವತವಾಗಿದೆ. ವಿಶ್ವೇಶ್ವರಯ್ಯನವರು ದೂರದೃಷ್ಟಿಯನ್ನಿಟ್ಟುಕೊಂಡು ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪ್ರಶಂಸಿದರು.

ಸರ್.ಎಂ. ವಿಶ್ವೇಶ್ವರಯ್ಯ ಅವರಿಗೂ ನಮ್ಮ ಮನೆತನಕ್ಕೂ ಸಂಬಂಧವಿದೆ. 1903ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಪುಣೆಯಲ್ಲಿನ ಖಡಕವಾಸಲ ಅಣಿಕಟ್ಟು ನಿರ್ಮಾಣಕ್ಕೆ ತಾಂತ್ರಿಕ ನೆರವು ನೀಡಿದರು. ಇದನ್ನು ನೋಡಿ ನಮ್ಮ ಮನೆತನದವರಾದ ಮಾಧವರಾವ್ ಸಿಂಧ್ಯ ಅವರು ಗ್ವಾಲಿಯರ್ ಅಣಿಕಟ್ಟು ನಿರ್ಮಾಣ ಮಾಡುವ ಸಂಬಂಧ ಅವರ ತಾಂತ್ರಿಕ ಸಲಹೆ ಮತ್ತು ನೆರವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ಸರ್. ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಮಾಡಿದ ಸಾಧನೆ ಎಂದೆಂದಿಗೂ ಚಿರಸ್ಮರಣೀಯ. ಅವರ ಸಾಧನೆ ಯಾವಾಗಲು ಶಾಶ್ವತವಾಗಿದೆ. ವಿಶ್ವೇಶ್ವರಯ್ಯನವರು ದೂರದೃಷ್ಟಿಯನ್ನಿಟ್ಟುಕೊಂಡು ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪ್ರಶಂಸಿದರು.

ಸರ್.ಎಂ. ವಿಶ್ವೇಶ್ವರಯ್ಯ ಅವರಿಗೂ ನಮ್ಮ ಮನೆತನಕ್ಕೂ ಸಂಬಂಧವಿದೆ. 1903ರಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಪುಣೆಯಲ್ಲಿನ ಖಡಕವಾಸಲ ಅಣಿಕಟ್ಟು ನಿರ್ಮಾಣಕ್ಕೆ ತಾಂತ್ರಿಕ ನೆರವು ನೀಡಿದರು. ಇದನ್ನು ನೋಡಿ ನಮ್ಮ ಮನೆತನದವರಾದ ಮಾಧವರಾವ್ ಸಿಂಧ್ಯ ಅವರು ಗ್ವಾಲಿಯರ್ ಅಣಿಕಟ್ಟು ನಿರ್ಮಾಣ ಮಾಡುವ ಸಂಬಂಧ ಅವರ ತಾಂತ್ರಿಕ ಸಲಹೆ ಮತ್ತು ನೆರವನ್ನು ಪಡೆದಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸರ್.ಎಂ. ವಿಶ್ವೇಶ್ವರಯ್ಯ ಅವರ ಸಾಧನೆಯನ್ನು ಮಾದರಿಯಾಗಿಸಿಕೊಂಡು ಉತ್ತಮ ಕೊಡುಗೆಯನ್ನು ವಿಶ್ವವಿದ್ಯಾಲಯಕ್ಕೆ ಹಾಗೂ ದೇಶಕ್ಕೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿಟಿಯು ವ್ಯಾಪ್ತಿಯಲ್ಲಿರುವ 210ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿದ್ದು, 20 ಸಾವಿರಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು, 4 ಲಕ್ಷಕ್ಕೂ ಹೆಚ್ಚಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ಹೊಂದಿದ್ದು ಮಿನಿ ಸಿಟಿಯಾಗಿ ಕಾಣುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಉದಯೋನ್ಮುಖ ಕ್ಷೇತ್ರಗಳಾದ 5ಜಿ, 6ಜಿ ಕಮ್ಯೂನಿಕೇಷನ್, ಕೃತಕ ಬುದ್ಧಿಮತ್ತೆ (ಎಐ), ಮಷಿನ್ ಲನಿರ್ಂಗ್ (ಎಂಎಲ್), ಆಗ್ಮೆಟೆಂಡ್ ಅಂಡ್ ವರ್ಚುವಲ್ ರಿಯಾಲಿಟಿ (ಎಆರ್. ವಿಆರ್), ಕ್ವಾಟಂ ಕಂಪ್ಯೂಟಿಂಗ್, ಹೆಲ್ತ್ ಕೇರ್ ಮತ್ತು ಇತರೆ ಪ್ರಮುಖ ತಂತ್ರಜ್ಞಾನದ ಕುರಿತು ಸಂಶೋಧನೆ ನಡೆಯುತ್ತಿರುವುದು ಸಂತಸದ ವಿಷಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದಿನ ಸಿಲಿಕಾನ್ ಸಿಟಿಯಾದ ಬೆಂಗಳೂರು ಮುಂದಿನ ದಿನಗಳಲ್ಲಿ ಸಿಲಿಕಾನ್ ವ್ಯಾಲಿಗೆ ಮಾದರಿಯಾಗಲಿದೆ. ಬೆಂಗಳೂರಿನಲ್ಲಿ ಉದ್ಯಮ ಪ್ರಾರಂಭಿಸಲು ಅವಕಾಶಗಳು ಹೆಚ್ಚಾಗಿದ್ದು, ಉದ್ದಿಮೆಗಳಲ್ಲಿ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.

ಹನ್ನೊಂದು ವರ್ಷದ ಹಿಂದೆ ಮೊಬೈಲ್‍ನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ರಫ್ತು ಮಾಡುತ್ತೇವೆ. ಸ್ವಂತ ಆತ್ಮನಿರ್ಭರ್ 4ಜಿ ಟೆಕ್ನಾಲಜಿಯಲ್ಲಿ ಜಗತ್ತಿನ 5ನೇ ಸ್ಥಾನವನ್ನು ನಮ್ಮ ದೇಶವು ಪಡೆದಿದೆ. ಭವಿಷ್ಯದಲ್ಲಿ 6 ಜಿ ಬರಲಿದೆ. ನಾವು ತಂತ್ರಜ್ಞಾನ ಕ್ಷೇತ್ರದ ಬೆಳೆವಣಿಗೆ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ಇಂದು ಮಾಹಿತಿ ತಂತ್ರಜ್ಞಾನದ ಕ್ರಾಂತಿ ಆಗಬೇಕಿದೆ. 11 ವರ್ಷದ ಹಿಂದೆ 60 ಬಿಲಿಯನ್ ಇದ್ದ, ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಇಂದು 940 ಬಿಲಿಯನ್‍ಗೆ ತಲುಪಿದೆ ಎಂದರು.

ಡಿಜಿಟಲ್ ಸೌಲಭ್ಯಗಳು ಸುಲಭವಾಗಬೇಕು ಸಾರ್ವಜನಿಕರ ಜೀವನ ಶೈಲಿಯಲ್ಲಿ ಬದಲಾವಣೆ ತರಬೇಕು. ಭಾರತದ ಸಾಧನೆಯು ಸೇವಾವಲಯದಲ್ಲಿ ಉತ್ತಮವಾಗಿದೆ. ಉತ್ಪನ್ನಗಳ ಅಭಿವೃದ್ಧಿಯ ಕಡೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಸಂಶೋಧನೆ ಮತ್ತು ನವೋದ್ಯಮ, ಭವಿಷ್ಯದ ಪೀಳಿಗೆ ತಂತ್ರಜ್ಞಾನಕ್ಕೆ ಸಾಮಥ್ರ್ಯ ನಿರ್ಮಾಣ ಮಾಡಲಿದೆ : ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್

ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆಯ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಈ ಕೇಂದ್ರವನ್ನು ವಿಟಿಯು 1 ಲಕ್ಷ ಚದರ ಅಡಿಯಲ್ಲಿರುವ ವಿಶಾಲವಾದ ಕೇಂದ್ರದಲ್ಲಿ ನಿರ್ಮಾಣ ಮಾಡಿದೆ. ಇದು ಸಂಶೋಧನೆ ಮತ್ತು ನವೋದ್ಯಮ, ಭವಿಷ್ಯದ ಪೀಳಿಗೆ ತಂತ್ರಜ್ಞಾನಕ್ಕೆ ಸಾಮಥ್ರ್ಯ ನಿರ್ಮಾಣ ಮಾಡಲಿದೆ. ಈ ಸೆಂಟರ್ ಆಫ್ ಎಕ್ಸಾಲೆನ್ಸ್ (ಸಿಒಇ) ವಿಟಿಯು, ವಿಶ್ವೇಶ್ವರಯ್ಯ ಸಂಶೋಧನೆ ಮತ್ತು ನಾವೀನ್ಯತೆಯ ಫೌಂಡೇಶನ್ (ವಿಆರ್‍ಐಎಫ್), ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ (ಟಿಸಿಒಇ) ಇಂಡಿಯಾ ನಡುವೆ ಒಂದು ಕಾರ್ಯತಂತ್ರದ ಪಾಲುದಾರಿಕೆಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಉದಯೋನ್ಮುಖ ಕ್ಷೇತ್ರಗಳಾದ 5ಜಿ, 6ಜಿ ಕಮ್ಯೂನಿಕೇಷನ್, ಕೃತಕ ಬುದ್ಧಿಮತ್ತೆ (ಎಐ), ಮಷಿನ್ ಲನಿರ್ಂಗ್ (ಎಂಎಲ್), ಆಗ್ಮೆಟೆಂಡ್ ಅಂಡ್ ವರ್ಚುವಲ್ ರಿಯಾಲಿಟಿ (ಎಆರ್.ವಿಆರ್), ಕ್ವಾಟಂ ಕಂಪ್ಯೂಟಿಂಗ್, ಹೆಲ್ತ್ ಕೇರ್ ಮತ್ತು ಇತರೆ ಪ್ರಮುಖ ತಂತ್ರಜ್ಞಾನದ ಕುರಿತು ಸಂಶೋಧನೆ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಇಂದೊಂದು ಉತ್ತಮವಾದ ಕೇಂದ್ರವಾಗಲಿದೆ ಎಂದರು.

ಹಬ್ ಅಂಡ್ ಸ್ಪೋಕ್ :

ರಾಷ್ಟ್ರೀಯ ನಾವೀನ್ಯತೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಈ ಕೇಂದ್ರವು ವಿಟಿಯುನ ವಿಸ್ತಾರವಾದ ಶೈಕ್ಷಣಿಕ ಜಾಲವನ್ನು ಬಳಕೆ ಮಾಡಿಕೊಳ್ಳಲಿದೆ. ವಿಶ್ವೇಶ್ವರಯ್ಯ ತಾಂತ್ರಿಕಾ ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ 210ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿದ್ದು, 20 ಸಾವಿರಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು, 4 ಲಕ್ಷಕ್ಕೂ ಹೆಚ್ಚಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಈ ಸಂಶೋಧನಾ ಮತ್ತು ನಾವೀನ್ಯತೆ ಕೇಂದ್ರದ ಸದ್ಭಳಕೆ ಮಾಡಿಕೊಳ್ಳಲಿದ್ದಾರೆ.

ಟಿಸಿಒಇ ತಂತ್ರಜ್ಞಾನ ಚಾಲಿತ ಉದ್ಯಮಶೀಲತೆ ಮತ್ತು ದೊಡ್ಡ ಪ್ರಮಾಣದ ಕೌಶಲ್ಯ ಅಭಿವೃದ್ಧಿಯನ್ನು ಸುಗಮಗೊಳಿಸಲು ದೃಢವಾದ ಇಂಟರ್‍ಫೇಸ್ ಆಗಿ ಜೊತೆಯಾಗಲಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಿಂದ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ : ಕುಲಪತಿ ಡಾ. ಎಸ್. ವಿದ್ಯಾಶಂಕರ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ  ಕುಲಪತಿಗಳಾದ  ಡಾ.ಎಸ್.ವಿದ್ಯಾಶಂಕರ್ ಅವರು ಮಾತನಾಡಿ,  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿ ಕೊಟ್ಟಿದೆ. ಇದು ಹೊಸ ಸಂಶೋಧನಾ ಕೇಂದ್ರವಾಗಿದ್ದು, ಹಲವು ಕಂಪನಿಗಳು ಸ್ಟಾರ್ಟ್ ಆಪ್ ಆರಂಭಿಸಬಹುದು. ಇದಕ್ಕೆ ಬೇಕಾದ ಸೌಲಭ್ಯವನ್ನು ನಾವು ನೀಡುತ್ತೇವೆ ಎಂದು ತಿಳಿಸಿದರು.

ಈ ಪ್ರಾದೇಶಿಕ ಕಚೇರಿಯಲ್ಲಿ ನಾವೀನ್ಯತೆ ಕೇಂದ್ರದ ಹೈಲೈಟ್ಸ್, ಪ್ರಯೋಗಾಲಯದ ವ್ಯವಸ್ಥೆ, ವೀಡಿಯೋ ಕಾನ್ಫರೆನ್ಸ್‍ಗೆ ಪ್ರತ್ಯೇಕ ಕೊಠಡಿ, ಗೃಹಿಣಿಯರ ಅನುಕೂಲಕ್ಕಾಗಿ ಡೇ ಕೇರ್, ಅತ್ಯಾಧುನಿಕ ಕೆಫಿಟೇರಿಯಾ, ವಿಟಿಯು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅವಕಾಶ ಹಾಗೂ ಇಂಟರ್ನ್‍ಶಿಪ್‍ಗೂ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist