ಬೆಂಗಳೂರು, (www.thenewzmirror.com):
ಅಂತರಾಷ್ಟ್ರೀಯ T20 ಕ್ರಿಕೆಟ್ ನಲ್ಲಿ ಪಾಕಿಸ್ತಾನ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಆ ಮೂಲಕ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ ಖ್ಯಾತಿಗೂ ಪಾತ್ರವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T20 ಪಂದ್ಯವನ್ನು 63 ರನ್‌ಗಳಿಂದ ಗೆದ್ದ ನಂತರ, ಪಾಕಿಸ್ತಾನ ಒಂದು ವರ್ಷದಲ್ಲಿ ಅತಿ ಹೆಚ್ಚು T20 ಪಂದ್ಯಗಳನ್ನು ಗೆದ್ದ ವಿಶ್ವದಾಖಲೆ ಮಾಡಿದೆ. ಅಂದರೆ ಈ ವರ್ಷ 2021 ರಲ್ಲಿ ಪಾಕಿಸ್ತಾನದ 18 ನೇ ಟಿ20 ಗೆಲುವು ಸಾಧಿಸಿದಂತಾಗಿದೆ.
ಟಿ20 ಕ್ರಿಕೆಟ್‌ನಲ್ಲಿ ಇತರೆ ಯಾವುದೇ ತಂಡ ಮಡದ ಸಾಧನೆ ಮಾಡಿದ ಖ್ಯಾತಿಗೆ ಪಾಕಿಸ್ತಾನ ಪಾತ್ರವಾಗಿದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ 18 ಟಿ20 ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. 2018ರಲ್ಲಿ ಒಟ್ಟು 17 ಪಂದ್ಯ ಗೆದ್ದಿದ್ದು ದಾಖಲೆಯಾಗಿತ್ತು.