ಬೆಂಗಳೂರು, ( www.thenewzmirror.com);
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರು ಜೀವನ ನಡೆಸೋದು ಕಷ್ಟ ಆಗುತ್ತಿದೆ. ಗ್ಯಾರಂಟಿಗಳನ್ನ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸವನ್ನ ಮಾಡುತ್ತಲೇ ಬರುತ್ತಿದೆ. ಈಗಾಗಲೇ ಬಸ್ ಪ್ರಯಾಣ ದರ, ಮೆಟ್ರೋ ದರ, RTO ದರ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದ್ದ ಸರ್ಕಾರ ಏಪ್ರಿಲ್ 1 ರಿಂದ ಮತ್ತಷ್ಟು ಹೊರ ವಿಧಿಸೋಕೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಜೀವನ ದುಬಾರಿಯಾಗುತ್ತಿದೆ. ಜನರಿಗೆ ಫ್ರೀ ಫ್ರೀ ಫ್ರೀ ಅಂತ ಹೇಳಿದ್ದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹಾಕುತ್ತಿದೆ. ಕಳೆದೊಂದು ವಾರದಲ್ಲಿ ಒಂದೇ ದಿನ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿತ್ತು. ಅತ್ತ ಬಸ್ ಹಾಗೂ ಮೆಟ್ರೋ ದರವೂ ಏರಿಕೆಯಾಗಿತ್ತು. ಅದರಲ್ಲೂ ನಾಳೆಯಿಂದ ಅಂದರೆ ಏಪ್ರಿಲ್ 1ರಿಂದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹಾಲು, ಮೊಸರು, ಕಾಫಿ, ವಿದ್ಯುತ್ ಎಲ್ಲವೂ ದುಬಾರಿಯಾಗಲಿದೆ. ಈಗಾಗಲೇ ಹಾಲಿನ ದರ ಏರಿಕೆ ಮಾಡಿದ್ದ ಸರ್ಕಾರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ, ಪ್ರತಿ ಲೀಟರ್ ಗೆ 4 ರೂ ಹೆಚ್ಚಿಸಿದ್ದ ಸರ್ಕಾರ, ಇದರ ಜತೆಗೆ ಬೆಂಗಳೂರಿನ ಕನಿಜನತೆಗೆ ಕಸಕ್ಕೂ ಸೆಸ್ ವಿಧಿಸೋಕೆ ಹೊರಟಿದೆ.
ಯಾವುದೆಲ್ಲ ದುಬಾರಿ?
ಹಾಲು – ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ
ಮೊಸರು – ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ
ವಿದ್ಯುತ್ – ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ
ಕಸದ ಸೆಸ್ (ಮಾಸಿಕ) – ಕನಿಷ್ಠ 10 ರೂ. ಹೆಚ್ಚಳ
ಹೊಸ ವಾಹನ ಖರೀದಿಗೆ ಹೆಚ್ಚುವರಿ ಸೆಸ್
ಮುದ್ರಾಂಕ ಶುಲ್ಕ – 50ರೂ.ನಿಂದ 500ರೂ.ಗೆ ಹೆಚ್ಚಳ
ಅಫಿಡವಿಟ್ ಶುಲ್ಕ – 20 ರೂ.ನಿಂದ 100 ರೂ. ಏರಿಕೆ
ಟೋಲ್ ಸಂಗ್ರಹ – ಶೇಕಡಾ 3 ರಿಂದ ಶೇಕಡಾ 5 ರಷ್ಟು ಹೆಚ್ಚಳ