ನೀರಿನ ದರ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಬೆಂಗಳೂರು ಜಲಮಂಡಳಿ ಹೊಸ ಟ್ಯಾರಿಫ್ ಮಾಹಿತಿ ಇಲ್ಲಿದೆ..!

RELATED POSTS

ಬೆಂಗಳೂರು(www.thenewzmirror.com): ಹನ್ನೊಂದು ವರ್ಷಗಳ ನಂತರ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ, ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವುದನ್ನ ಮನಗಾಣಿಸುವ ಅಂಶಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಏ.10ರಂದು ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇಂದು ಬೆಂಗಳೂರು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 11 ವರ್ಷಗಳಲ್ಲಿ ಬೆಂಗಳೂರು ನಗರ ಕೇವಲ ವ್ಯಾಪ್ತಿಯಷ್ಟೇ ಅಲ್ಲ ಜನಸಂಖ್ಯೆಯಲ್ಲೂ ಅಗಾಧ ಬೆಳವಣಿಗೆಯನ್ನು ಕಂಡಿದೆ. ಸರಕಾರದಿಂದ ಹಣಕಾಸಿನ ಸಹಾಯವಿಲ್ಲದೇ ಸ್ವಾಯತ್ತ ಸಂಸ್ಥೆಯಾಗಿರುವ ಮಂಡಲಿಗೆ ಕುಡಿಯುವ ನೀರಿಗೆ ವಿಧಿಸುವ ಶುಲ್ಕವೇ ಪ್ರಮುಖ ಆದಾಯವಾಗಿದೆ. ಕಳೆದ 10 ವರ್ಷಗಳಲ್ಲಿ ವಿದ್ಯುತ್ ವೆಚ್ಚವು ಶೇಕಡಾ 107% ರಷ್ಟು ಹೆಚ್ಚಾಗಿದೆ. ಹಾಗೆಯೇ ನಿರ್ವಹಣಾ ವೆಚ್ಚದಲ್ಲಿ ಶೇಡಕಾ 122.5 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಬೆಂಗಳೂರು ಜಲಮಂಡಳಿಯ ಮಾಸಿಕ ವೆಚ್ಚ 200 ಕೋಟಿ ರೂಪಾಯಿಗಳು. ಆದರೆ, ಪ್ರತಿ ತಿಂಗಳು ಸಂಗ್ರಹಣೆ ಆಗುತ್ತಿರುವುದು ಕೇವಲ 120 ಕೋಟಿ ರೂಪಾಯಿಗಳು ಮಾತ್ರ. ಪ್ರತಿ ತಿಂಗಳು ಸುಮಾರು 80 ಕೋಟಿ ರೂಪಾಯಿಗಳ ಆರ್ಥಿಕ ಕೊರತೆಯನ್ನ ಬೆಂಗಳೂರು ಜಲಮಂಡಳಿ ನಿಭಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನೀರಿನ ದರವನ್ನು ಏರಿಸಲು ಉದ್ದೇಶಿಸಲಾಗಿದ್ದು , ಏ.10ರಂದು ಅಧಿಕೃತ ಘೋಷಣೆ ಹೊರಡಿಸಲಾಗುವುದು *ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ನೀರಿನ ದರ ಹೆಚ್ಚಳದ ಪ್ರಮಾಣ:

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸಲು ನೀರಿನ ದರವನ್ನು ಏರಿಕೆ ಮಾಡಲಾಗಿದೆ. ಕಡಿಮೆ ನೀರು ಬಳಕೆಯನ್ನು ಉತ್ತೇಜಿಸುವುದು ಹಾಗೆಯೇ ನೀರಿನ ಮರುಬಳಕೆಯನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಯಾರಿಗೂ ಹೊರೆಯಾಗದಂತಹ ನಿರ್ಧಾರವನ್ನು ಕೈಗೊಳ್ಳಲಾಗಿದೆ. 

 ಪರಿಷ್ಕೃತ ನೀರಿನ ದರದ ವಿವರ:

ಗೃಹಬಳಕೆಗೆ:

– 0-8000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.15 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ  ಲೀಟರ್ ಗೆ ಪ್ರಸ್ತುತ ದರ ರೂ.7ರಿಂದ ರೂ.8.50 ಪೈಸೆ(ಅಂದರೇ ರೂ.1.50)ಯಷ್ಟು ಹೆಚ್ಚಳವಾಗಲಿದೆ.

– 8001- 25000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.30 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

ಉದಾಹರಣೆಗೆ ಈ ಸ್ಲ್ಯಾಬ್ ನಡಿಯಲ್ಲಿ ಪ್ರತಿ 1 ಸಾವಿರ  ಲೀಟರ್ ಗೆ ಪ್ರಸ್ತುತ ದರ ರೂ.11ರಿಂದ ರೂ.14ಕ್ಕೆ (ಅಂದರೇ ರೂ.3)ಹೆಚ್ಚಳವಾಗಲಿದೆ.

– 25001 – 50000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.80 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

– 50001 – 100000 ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ

– 100001 ರಿಂದ ಹೆಚ್ಚು ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್  ಗೆ 1.00 ಪೈಸೆ ಹೆಚ್ಚಳ

ಡೊಮೆಸ್ಟಿಕ್ ಹೈ-ರೈಸ್:

– 0-2,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.30 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

– 2,00,001-5,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.60 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

– 5,00,001-10,00,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 1.00 ಪೈಸೆ ಹೆಚ್ಚಳ

ನಾನ್ ಡೊಮೆಸ್ಟಿಕ್ -ಗೃಹೇತರ ಬಳಕೆ:

– ಕೈಗಾರಿಕೆಗಳಿಗೆ/ಬಲ್ಕ್ ಸಪ್ಲೇ ಬಳಕೆಯ ಸ್ಲಾಬ್: ಪ್ರತಿ ಲೀಟರ್ ಗೆ 0.90 ಪೈಸೆ ಹೆಚ್ಚಳ(1ಪೈಸೆಗಿಂತ ಕಡಿಮೆ)

– 0 – 10,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್  ಗೆ 1.00 ಪೈಸೆ ಹೆಚ್ಚಳ

– 10,001 – 25,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.30 ಪೈಸೆ ಹೆಚ್ಚಳ

– 25,001 – 50,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.50 ಪೈಸೆ ಹೆಚ್ಚಳ

– 50,001 – 75,000 ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.90 ಪೈಸೆ ಹೆಚ್ಚಳ

– 760001 – 1 ಲಕ್ಷ ಸಾವಿರ ಲೀಟರ್ ಬಳಕೆಯ ಸ್ಲಾಬ್: ಪ್ರತಿ ಲೀಟರ್ಗೆ 1.10 ಪೈಸೆ ಹೆಚ್ಚಳ

– 1 ಲಕ್ಷ ಮತ್ತು ಅದಕ್ಕೂ ಹೆಚ್ಚು ಬಳಕೆ ಸ್ಲಾಬ್: ಪ್ರತಿ ಲೀಟರ್ಗೆ 1.20 ಪೈಸೆ ಹೆಚ್ಚಳ

ಒಮ್ಮೆಲೆ ದರ ಹೆಚ್ಚಳದ ಮೂಲಕ ಜನರಿಗೆ ಹೊರೆಯಾಗುವದನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ ಪ್ರತಿ ವರ್ಷ ಏಪ್ರಿಲ್ ತಿಂಗಳ ಒಂದರಂದು ನೀರಿನ ದರವನ್ನು ಶೇಕಡಾ 3 ರಷ್ಟು ಹೆಚ್ಚು ಮಾಡಲು ಜಲಮಂಡಳಿಯಲ್ಲಿ ತೀರ್ಮಾನಿಸಲಾಗಿದೆ.

ನಷ್ಟದತ್ತ ಸಾಗುತ್ತಿದ್ದ ಮಂಡಳಿಯ ದಿನ ನಿತ್ಯದ ಖರ್ಚುವೆಚ್ಚಗಳನ್ನು ಸರಿದೂಗಿಸುವ ಜೊತೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಮಧ್ಯಮ,ಬಡ ವರ್ಗದ ಜನರಿಗೆ ಹೆಚ್ಚಿನ ಹೊರೆಯಾಗದಂತೆ ಏರಿಕೆ ಮಾಡಲು ಉದ್ದೇಶಿಸಲಾಗಿದ್ದು, ಶುದ್ದ ನೀರಿನ ಅಸಮರ್ಪಕ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ . ಮೇ ತಿಂಗಳ ಬಿಲ್ ನಲ್ಲಿ ಈ ದರ ಏರಿಕೆ ಅನ್ವಯವಾಗಲಿದ್ದು ಏ.10ರಂದು ಅಧಿಕೃತವಾಗಿ ಆದೇಶ ಹೊರಡಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist