ಶಕ್ತಿ ಯೋಜನೆಗೆ ಎರಡು ವರ್ಷ:475 ಕೋಟಿ ಮಹಿಳಾ ಪ್ರಯಾಣಿಕರಿಂದ ಉಚಿತ ಪ್ರಯಾಣ…!

RELATED POSTS

ಬೆಂಗಳೂರು(www.thenewzmirror.com): ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಗೆ ಎರಡು ವರ್ಷವಾಗಿದೆ.ಲೋಕಸಭಾ ಚುನಾವಣೆ ನಂತರ ಯೋಜನೆ ರದ್ದಾಗಲಿದೆ ಎನ್ನುವ ವದಂತಿಗಳ ನಡುವೆ ಭರ್ಜರಿ ಎರಡು ವರ್ಷ ಯಶಸ್ವಿಯಾಗಿ ಮುಗಿಸಿದ್ದು, 475 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ತಾನು ನೀಡಿದ್ದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು 2023 ಜೂನ್‌ 11 ರಂದು ಆರಂಭಿಸಿತು. ಈ ಯೋಜನೆ ಇದೀಗ ಎರಡು ವರ್ಷ ಮುಗಿಸಿ ಮುಂದುವರೆದಿದೆ, ಕೆಎಸ್‌ಆರ್‌ಟಿಸಿ,ಬಿಎಂಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ‌ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 475 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

2023 ಜೂನ್ 11 ರಿಂದ 2025 ಜೂನ್‌ 10 ವರೆಗೂ ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲಾ  ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 4,74,82,49,843 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ,ಇವರಿಗೆ ಒಟ್ಟು 11994,37,89,779 (11994 ಕೋಟಿ) ರೂ. ಮೊತ್ತದ ಟಿಕೆಟ್‌ ನೀಡಲಾಗಿದೆ. 

ಆರಂಭದಲ್ಲಿ ಸಾಕಷ್ಟು ಅಡೆತಡೆಗಳು, ಬಸ್ ಗಳ ಕೊರತೆ, ಬಸ್ಸುಗಳಲ್ಲಿ ಹತ್ತಲು ಸಾಧ್ಯವಾಗದ ಸ್ಥಿತಿ ಇದೆ ಎನ್ನುವ ಆರೋಪಗಳು ಕೇಳಿ ಬಂದರೂ ಸಾರಿಗೆ ಸಚಿವರ ಕಾರ್ಯಕ್ಷಮತೆಯ ಕಾರಣದಿಂದಾಗಿ ಆ ಎಲ್ಲ ಸಮಸ್ಯೆಗಳೂ ಬಹುತೇಕ ಪರಿಹಾರಗೊಂಡಿವೆ, ಹೊಸ ಹೊಸ ಬಸ್ ಗಳ ಸೇರ್ಪಡೆ ಮೂಲಕ ನಿಗಮಗಳಿಗೂ ಶಕ್ತಿ ತುಂಬಲಾಗಿದೆ ಹಾಗಾಗಿ ಎರಡು ವರ್ಷವಾದರೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆ ಅಡೆತಡೆಗಳಿಲ್ಲದೆ ಮುನ್ನುಗ್ಗುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist