Video News | 9 ತಿಂಗಳ ನಂತರ ಭೂಮಿಗೆ ಸುರಕ್ಷಿತವಾಗಿ ಮರಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್ | ಹೇಗಿತ್ತು ಗೊತ್ತಾ ಆ ಕ್ಷಣ?

Astronaut Sunita Williams returns safely to Earth after 9 months | Do you know what that moment was like?

ಬೆಂಗಳೂರು,(www.thenewzmirror.com) ;

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ 9 ತಿಂಗಳ ನಂತರ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

RELATED POSTS

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ವಿಲಿಯಮ್ಸ್ ಹಾಗೂ ಬ್ಯಾರಿ ಬುಚ್ ವಿಲ್ಮೋರ್ ಇದ್ದ ನೌಕೆ ಹೊರಟಿತ್ತು. ಮಂಗಳವಾರ ಬೆಳಗ್ಗೆ 10.35 ಕ್ಕೆ ಹೊರಟಿದ್ದ ನೌಕೆ ಸತತ 17 ಗಂಟೆಗಳ ಪ್ರಯಾಣದ ಬಳಿಕ ನಿರೀಕ್ಷೆಯಂತೆ ಬುಧವಾರ ಬೆಳಗಿನ ಜಾವ 3.27 ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಇಳಿದಿದೆ‌.

ಬಾಹ್ಯಾಕಾಶ ನೌಕೆಯು ಬೇರ್ಪಡುವ ವೀಡಿಯೊವನ್ನ ನಾಸಾ ಹಂಚಿಕೊಂಡಿದೆ. ಗಗನಯಾತ್ರಿಗಳನ್ನ ಭೂಮಿಗೆ ಮರಳಿ ತರುವ ಜವಾಬ್ದಾರಿಯನ್ನು ಎಲಾನ್‌ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್‌ಗೆ ವಹಿಸಲಾಗಿತ್ತು. ಫಾಲ್ಕನ್ 9 ರಾಕೆಟ್‌ನ ಮೇಲಿರುವ ಡ್ರ್ಯಾಗನ್ ಕ್ಯಾಪ್ಸುಲ್ ಈ ಕಾರ್ಯಾಚರಣೆಗಾಗಿ ಉಡಾವಣೆ ಮಾಡಲಾಗಿತ್ತು.

2024 ರ ಜೂನ್ ನಲ್ಲಿ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು. ಒಂದು ವಾರದ ಮಟ್ಟಿಗೆ ಅಂತ ತೆರಳಿದ್ದ ಗಗನಯಾತ್ರಿಗಳು ತಾಂತ್ರಿಕ ತೊಂದರೆ ಉಂಟಾಗಿದ್ದರಿಂದ ವೇಳಾಪಟ್ಟಿ ಬದಲಾಗುತ್ತಾ 9 ತಿಂಗಳಿಗೆ ವಿಸ್ತರಣೆ ಗೊಂಡಿತ್ತು.
ಗಗನಯಾತ್ರಿಗಳಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿದ್ದ ಹಿನ್ನಲೆಯಲ್ಲಿ ಭೂಮಿಗೆ ವಾಪಾಸ್ಸಾಗುವ ದಿನಾಂಕ ವಿಸ್ತರಣೆ ಆಗುತ್ತಾ ಬರುತ್ತಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ಇದಾದ ಬಳಿಕ‌ ನಾಸಾದ ಸತತ ಪ್ರಯತ್ನದಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist