ಮೈಸೂರು(www.thenewzmirror.com):ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದ ನಡುವೆ ರೈಲು ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ, ರೈಲ್ವೆ ಮಂಡಳಿ ತಿರುಪತಿ ಮತ್ತು ಚಿಕ್ಕಮಗಳೂರು ನಡುವಿನ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಕ್ಕೆ ಅನುಮೋದನೆ ನೀಡಿದೆ.
ಈ ಸೇವೆಯ ಪ್ರಾರಂಭವನ್ನು ಸೂಚಿಸುವಂತೆ, ದಕ್ಷಿಣ ಮಧ್ಯ ರೈಲ್ವೆ ಒಂದು ಬಾರಿ ನಡೆಯುವ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಡೆಸಲಿದೆ. ರೈಲು ಸಂಖ್ಯೆ 07424 ಚಿಕ್ಕಮಗಳೂರು – ತಿರುಪತಿ ಉದ್ಘಾಟನಾ ವಿಶೇಷ ಎಕ್ಸ್‌ಪ್ರೆಸ್ ಜುಲೈ 11, 2025 (ಶುಕ್ರವಾರ) ರಂದು ಚಲಿಸಲಿದ್ದು, ಮಧ್ಯಾಹ್ನ 12:00 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 02:30 ಕ್ಕೆ ತಿರುಪತಿಗೆ ತಲುಪಲಿದೆ. ಈ ರೈಲಿಗೆ ಒಟ್ಟು 18 ಎಲ್ ಹೆಚ್ ಬಿ ಕೋಚ್‌ಗಳು ಇರುತ್ತವೆ.
ನಿಯಮಿತ ರೈಲು ಸೇವೆಗಳು:
1. ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 17 (ಗುರುವಾರ)ರಿಂದ ನಿಯಮಿತ ಸೇವೆ ಪ್ರಾರಂಭವಾಗಲಿದೆ.
2. ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ 2025 ಜುಲೈ 18 (ಶುಕ್ರವಾರ)ರಿಂದ ನಿಯಮಿತ ಸೇವೆ ಆರಂಭವಾಗಲಿದೆ.
ವೇಳಾಪಟ್ಟಿ ಮತ್ತು ನಿಲ್ದಾಣಗಳು: ರೈಲು ಸಂಖ್ಯೆ 17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ರಾತ್ರಿ 21:00 ಗಂಟೆಗೆ ತಿರುಪತಿಯಿಂದ ಹೊರಟು, ಶುಕ್ರವಾರ ಬೆಳಿಗ್ಗೆ 10:30 ಕ್ಕೆ ಚಿಕ್ಕಮಗಳೂರಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲಲಿದೆ:
ಪಕಾಲಾ (21:28/21:30), ಚಿತ್ತೂರು (21:58/22:00), ಕಾಟ್ಪಾಡಿ (23:08/23:10), ಜೋಲಾರಪೇಟೆ (00:28/00:30 – ಶುಕ್ರವಾರ), ಕುಪ್ಪಂ (01:10/01:12), ಬಂಗಾರಪೇಟೆ (01:39/01:41), ವೈಟ್‌ಫೀಲ್ಡ್ (02:10/02:12), ಕೃಷ್ಣರಾಜಪುರಂ (02:23/02:25), ಎಸ್‌ಎಂವಿಟಿ ಬೆಂಗಳೂರು (03:05/03:15), ಚಿಕ್ಕಬಾಣಾವರ (03:50/03:52), ತುಮಕೂರು (04:43/04:45), ತಿಪಟೂರು (05:58/06:00), ಅರಸೀಕೆರೆ (07:30/07:50), ದೇವನೂರು (08:10/08:12), ಕಡೂರು (08:26/08:28), ಬೀರೂರು (08:50/09:10), ಬಿಸಲೇಹಳ್ಳಿ (09:26/09:27), ಹಾಗೂ ಸಖರಾಯಪಟ್ಟಣ (09:39/09:40).
ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರತಿ ಶುಕ್ರವಾರ ಸಂಜೆ 17:30 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಿಗ್ಗೆ 07:40 ಕ್ಕೆ ತಿರುಪತಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು ಈ ನಿಲ್ದಾಣಗಳಲ್ಲಿ ನಿಲ್ಲಲಿದೆ:
ಸಖರಾಯಪಟ್ಟಣ (18:04/18:05), ಬಿಸಲೇಹಳ್ಳಿ (18:17/18:18), ಕಡೂರು (18:28/18:30), ಬೀರೂರು (18:45/19:05), ದೇವನೂರು (19:25/19:27), ಅರಸೀಕೆರೆ (19:50/20:10), ತಿಪಟೂರು (20:30/20:32), ತುಮಕೂರು (21:18/21:20), ಚಿಕ್ಕಬಾಣಾವರ (22:00/22:02), ಎಸ್‌ಎಂವಿಟಿ ಬೆಂಗಳೂರು (00:15/00:30 – ಶನಿವಾರ), ಕೃಷ್ಣರಾಜಪುರಂ (00:40/00:42), ವೈಟ್‌ಫೀಲ್ಡ್ (00:51/00:53), ಬಂಗಾರಪೇಟೆ (01:20/01:25), ಕುಪ್ಪಂ (01:55/01:57), ಜೋಲಾರಪೇಟೆ (03:25/03:30), ಕಟ್ಪಾಡಿ (05:00/05:10), ಚಿತ್ತೂರು (05:43/05:45), ಹಾಗೂ ಪಕಾಲಾ (06:13/06:15).
ಕೋಚ್ ಸಂಯೋಜನೆ: ಈ ರೈಲುಗಳಲ್ಲಿ ಒಟ್ಟು 18 ಎಲ್ ಹೆಚ್ ಬಿ ಕೋಚ್‌ಗಳು ಇರುತ್ತವೆ. ಇವುಗಳಲ್ಲಿ:
2 ಎಸಿ ಟು ಟೈಯರ್ ಕೋಚ್,
4 ಎಸಿ ತ್ರಿ ಟೇಯರ್ ಕೋಚ್, 6 ಸ್ಲೀಪರ್ ಕ್ಲಾಸ್ ಕೋಚ್,
4 ಸಾಮಾನ್ಯ ದ್ವಿತೀಯ ಶ್ರೇಣಿ ಕೋಚ್, 1 ದ್ವಿತೀಯ ಶ್ರೇಣಿಯ ಸಾಮಾನು ಮತ್ತು ಬ್ರೇಕ್ ವ್ಯಾನ್ – ದಿವ್ಯಾಂಗ ಜನರಿಗಾಗಿ ವಿಶಿಷ್ಟ ವಿಭಾಗ,
1 ಸಾಮಾನು/ಜನರೇಟರ್/ಬ್ರೇಕ್ ವ್ಯಾನ್ ಕೋಚ್.
ಈ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಯು ತಿರುಪತಿಯ ದೇವಾಲಯ ನಗರದ ಮತ್ತು ಚಿಕ್ಕಮಗಳೂರಿನ ಕಾಫಿ ನಾಡಿನ ಪ್ರದೇಶದ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅನುಕೂಲಕರ ಸಾರಿಗೆ ಆಯ್ಕೆಯಾಗಿ ಸೇವೆ ನೀಡಲಿದೆ. ಜೊತೆಗೆ, ಮಧ್ಯಂತರ ಪಟ್ಟಣಗಳು ಹಾಗೂ ಜಿಲ್ಲೆಗಳ ಜನತೆಗೂ ಇದರಿಂದ ಲಾಭವಾಗಲಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು
ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಾಲಗೊಂಡ ತಿಳಿಸಿದ್ದಾರೆ.