ಗೃಹ ಇಲಾಖೆಯನ್ನು ಕರಾವಳಿಯ ಜೆಹಾದಿಗಳ‌‌‌ ಕಾಲ ಬುಡದಲ್ಲಿ ಅಡವಿಡುತ್ತೀರಾ: ಪರಮೇಶ್ವರ್ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ

RELATED POSTS

ಬೆಂಗಳೂರು(www.thenewzmirror.com) :ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರ ಜತೆ ಕಾನೂನು- ಸುವ್ಯವಸ್ಥೆ ಸಭೆ ನಡೆಸಲು ಬಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮುಸ್ಲಿಂ ಮುಖಂಡರ ಜತೆಗೆ ಸಭೆ‌ ನಡೆಸುವ ಮೂಲಕ ಪ್ರಕರಣದ ಹಾದಿ ತಪ್ಪಿಸಲು ಮುಂದಾಗಿದ್ದಾರೆ. ಅವಳಿ ಜಿಲ್ಲೆಯಲ್ಲಿ ಸರ್ಕಾರ ಪ್ರಾರಂಭಿಸುವ ಆಂಟಿ ಕಮ್ಯುನಲ್ ಫೋರ್ಸ್ ಹಿಂದುತ್ವದ ದಮನಕ್ಕೆ ಬಳಕೆಯಾಗಲಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪರಮೇಶ್ವರ ಅವರು, ಪೊಲೀಸ್ ಅಧಿಕಾರಿಗಳ ಜತೆಗೆ ಸಭೆ ನಡೆಸುವುದಕ್ಕೆ ಮುನ್ನ ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಮುಸ್ಲಿಂ ಮುಖಂಡರು ಮೇಜು ಗುದ್ದಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ಇವರ ವರ್ತನೆ ತಲುಪಿದೆ. ಗೃಹ ಸಚಿವರು ಹಂತಕರ ರಾಗಕ್ಕೆ ತಾಳ ಹಾಕಲು ಹೊರಟಿದ್ದಾರೆ. ಗೃಹ ಇಲಾಖೆಯನ್ನು ಕರಾವಳಿಯ ಜೆಹಾದಿಗಳ‌‌‌ ಕಾಲ ಬುಡದಲ್ಲಿ ಅಡವಿಡುತ್ತೀರಾ ? ಎಂದು ಪ್ರಶ್ನಿಸಿದ್ದಾರೆ.

ಆಂಟಿ ಕಮ್ಯುನಲ್ ಪೋರ್ಸ್ ರಚನೆ ಮಾಡುವುದರ ಉದ್ದೇಶ ಸ್ಪಷ್ಟವಾಗಿದೆ. ಹಿಂದುತ್ವದ ಪರವಾಗಿರುವ ಧ್ವನಿಯನ್ನು ಪೊಲೀಸ್ ಬಲ ಬಳಸಿ ದಮನಿಸುವುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರಕ್ಕೆ ಶಾಂತಿಯ ಬದಲು ಪಿಎಫ್ ಐ ಉಗ್ರರ ಹಿತಾಸಕ್ತಿ ರಕ್ಷಣೆ ಮಾಡುವುದೇ ಆದ್ಯತೆಯಾಗಿದೆ ಎಂದು ಟೀಕಿಸಿದ್ದಾರೆ.

ಪ್ರತಿಕಾರವಲ್ಲವೇ ? :

ನಿನ್ನೆಯಷ್ಟೇ ಸ್ಪೀಕರ್ ಯು.ಟಿ.ಖಾದರ್ ಅವರು ಫಾಜಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಆದರೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲಾ ಫಾಜಿಲ್ ಸೋದರನೇ ಈ ಕೊಲೆಗೆ ಐದು ಲಕ್ಷ ರೂ.ಸುಪಾರಿ ನೀಡಿದ್ದಾನೆ ಎಂದು ಹೇಳಿದ್ದಾರೆ. ಹಾಗಾದರೆ ಯಾವುದು ಸತ್ಯ ? ಪಾಜಿಲ್ ಸೋದರ ಸುಪಾರಿ ಕೊಟ್ಟಿದ್ದೇ ನಿಜವಾದರೆ ಸ್ಪೀಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist