ಬೆಂಗಳೂರು, (www.thenewzmirror.com):
ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಸುದ್ದಿ ಮಾಡುತ್ತಿರೋ ACB ಇದೀಗ ಮತ್ತೆ ಸುದ್ದಿ ಮಾಡುತ್ತಿದೆ. ರಾಜ್ಯದ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳನ್ನ ಪತ್ತೆ ಹಚ್ಚಿದ್ದಾರೆ ಅಧಿಕಾರಿಗಳು ಹಾಗಿದ್ರೆ ಕಳೆದ ಐದು ವರ್ಷದಲ್ಲಿ ACB ಸಾಧಿಸಿದ್ದೇನು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
![](https://thenewzmirror.com/wp-content/uploads/2021/11/ACB.png)
ACB 2016 ರಿಂದ ಇಲ್ಲೀವರೆಗೂ ತಾನು ಮಾಡಿರೋ ಸಾಧನೆಗಳ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಅದರ ಪ್ರಕಾರ
- 2016ರಿಂದ ಇದುವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 1803
- ಚಾರ್ಜ್ ಶೀಟ್ ಸಲ್ಲಿಕೆಯಾದ ಪ್ರಕರಣಗಳು 753
- ವಿಚಾರಣೆ ಮುಕ್ತಾಯವಾಗಿರುವ ಪ್ರಕರಣಗಳ ಸಂಖ್ಯೆ 62
- ವಿಚಾರಣೆ ನಡೆಯುತ್ತಿರುವ ಪ್ರಕರಣಗಳ ಸಂಖ್ಯೆ 682
- ಶಿಕ್ಷೆಗೆ ಗುರಿಯಾದ ಪ್ರಕರಣಗಳು 10
- ಖುಲಾಸೆಯಾದ ಪ್ರಕರಣಗಳು 25
- ಇದುವರೆಗೂ ಬಂಧನವಾದ ಸರ್ಕಾರಿ ನೌಕರರು 1473
- ಸಿಬಿಐಗೆ ವರ್ಗಾವಣೆಯಾದ ಪ್ರಕರಣಗಳು 2
- ಅಮಾನತ್ತಾದ ನೌಕರರ ಸಂಖ್ಯೆ 1335
- ಇಲಾಖಾ ವಿಚಾರಣೆಗೆ ಗುರಿಯಾದ ನೌಕರರು 493
- 17/A ನಡಿ ಕ್ರಮ ಕೈಗೊಳ್ಳಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ 520
- ಸರ್ಕಾರದ ಸಕ್ಷಮ ಪ್ರಾಧಿಕಾರದಲ್ಲಿಬಾಕಿ ಇರುವ ಆದೇಶಗಳ ಸಂಖ್ಯೆ 106
- ನ್ಯಾಯಾಲಯದ ತಡೆಯಾಜ್ಞೆ ಇರುವ ಪ್ರಕರಣಗಳು 87
- ಕ್ಲಾಸ್ 1 ಹಾಗೂ ಅದಕ್ಕಿಂದ ಮೇಲ್ದರ್ಜೆಯ ಅಧಿಕಾರಿಗಳು, ತಾ.ಪ & ಜಿ.ಪಂ, ಎಂಎಲ್ಎ, ಎಂಪಿಗಳ ಮೇಲಿರುವ ಪ್ರಕರಣ 391