ಬೆಂಗಳೂರು,(www.thenewzmirror.com) :
ರಾಜ್ಯದಲ್ಲಿ ಎಂ ಇಎಸ್ ನಿಷೇಧ ಮಾಡಬೇಕು ಅಂತ ಕನ್ನಡ ಪರ ಸಂಘಟನೆಗಳು ಕರೆಕೊಟ್ಟ ಕರ್ನಾಟಕ ಬಂದ್ ವಾಪಾಸ್ ಪಡೆಯಲಾಗಿದೆ. ಹೀಗಂತ ಮಾಹಿತಿ ನೀಡಿದ ವಾಟಾಳ್ ಜನವರಿ 22 ವರೆಗೂ ಕಾಲಾವಕಾಶ ನೀಡಲಾಗಿದೆ ಅಂತ ತಿಳಿಸಿದರು.
ಆ ಮೂಲಕ ವಾಟಾಳ್ ನಾಗರಾಜ್ ಗೆ ಭಾರೀ ಮುಖಭಂಗವಾಗಿದೆ. ಆರಂಭದಿಂದಲೂ ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್ ಮಾಡೋದು ಸರಿಯಲ್ಲ ಅಂತ ಕೂಗು ಕೇಳಿಬಂದಿತ್ತು. ಇದರ ಹೊರತಾಗಿಯೂ ಬಂದ್ ಮಾಡಿಯೇ ತೀರುತ್ತೀವಿ ಅಂತ ಬೆಳಗ್ಗೆ ವಾಟಾಳ್ ಮತ್ತೊಮ್ಮೆ ಘೋಷಣೆ ಮಾಡಿದ್ರು.
ಇದರ ಬೆನ್ನಲ್ಲೇ ಸಿಎಂ ಕೂಡ ಕರ್ನಾಟಕ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಂಜೆ ಸಿಎಂ ಅವ್ರನ್ನಭೇಟಿ ಮಾಡಿದ ಬಳಿಕ ವಾಟಾಳ್ ಈ ತೀರ್ಮಾನ ಕೈಗೊಂಡಿದ್ದಾರೆ.
ಬಂದ್ ವಾಪಾಸ್ ಪಡೆದಿದ್ದರೂ ಡಿಸೆಂಬರ್ 31 ರಂದು ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೂ ಬೃಹತ್ ಜಾಥಾ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಎಂಇಎಸ್ ನಿಷೇಧ ಮಾಡೋದ್ರ ಬಗ್ಗೆ ಸರ್ಕಾರ ಕೆಲಸ ಮಾಡುತ್ತೆ ಹೀಗಾಗಿ ಈ ತೀರ್ಮಾನ ಅಂತ ವಾಟಾಳ್ ಮಾಹಿತಿ ನೀಡಿದರು. ಒಂದು ಕಡೆ ವಾಟಾಳ್ ಬಂದ್ ವಾಪಾಸ್ ಪಡೆದಿದ್ದರೂ ವಾಟಾಳ್ ಅವ್ರಿಗೆ ತೀವ್ರ ಮುಖಭಂಗ ಅಂತಾನೇ ವಿಶ್ಲೇಷಣೆ ಮಾಡಲಾಗ್ತಿದೆ.
ಆರಂಭಂದಿದಲೂ ವಾಟಾಳಾ ನಿರ್ಧಾರಕ್ಕೆ ವಿರೋಧ ಕೇಳಿ ಬರ್ ಇತ್ತು.., ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ಯಾರನ್ನೂ ಸಂಪರ್ಕ ಮಾಡದೆ ಚರ್ಚೆ ಮಾಡದೆ ಕೈಗೊಂಡಿರೋ ನಿರ್ಧಾರ ಅಂತ ಕರವೇ ನಾರಾಯಣಗೌಡ ಭಣ ಹಿಂದೆ ಸರಿದಿತ್ತು. ಇದರ ಬೆನ್ನಲ್ಲೇ ಪ್ರವೀಣ್ ಶೆಟ್ಟಿ ಬಣನೂ ಇಂದು ಬೆಳಗ್ಗೆ ಮುಷ್ಕರದಿಂದ ಹಿಂದರ ಸರಿಯೋ ಮಾಹಿತಿ ನೀಡಿದ್ದರು. ಅಷ್ಟೇ ಅಲ್ದೇ ವಾಟಾಳ್ ಗೆ ಮನವಿ ಮಾಡೋದಾಗಿಯೂ ತಿಳಿಸಿದ್ದರು. ಅದರಂತೆ ಇದೀಗ ಬಂದ್ ವಾಪಾಸ್ ಪಡೆಯಲಾಗಿದೆ.
ಬಂದ್ ವಾಪಾಸ್ ಪಡೆಯಲು ಕಾರಣಗಳು
- ಮುಖಭಂಗ ತಪ್ಪಿಸಿಕೊಳ್ಳೋ ನಿಟ್ಟಿನಲ್ಲಿ ವಾಟಾಳ್ ಬಂದ್ ನಿಂದ ಹಿಂದೆ ಸರಿದಿದ್ದು..
- ಒಂದೊಂದೇ ಸಂಘಟನೆಗಳು ಬಂದ್ ನಿಂದ ಹಿಂದೆ ಸರಿದಿದ್ದು
- ಹೊಸ ವರ್ಷ ಮುನ್ನಾದಿನ ಇಂಥ ಬಂದ್ ಸಮಂಜಸವಲ್ಲ ಅನ್ನೋ ಅಭಿಪ್ರಾಯ
- ವಾಟಾಳ್ ಏಕಾಏಕಿ ಕೈಗೊಂಡ ನಿರ್ಧಾರದಿಂದ ಇತರ ಸಂಘಟನೆಗಳಲ್ಲಿ ಅಸಮಧಾನ
- ಹೊಸ ಸಿನೆಮಾಗಳು ಬಿಡುಗಡೆ ಆಗ್ತಿರೋದ್ರಿಂದ
- ಸಿಎಂ ಪದೇ ಪದೇ ಮನವಿ ಮಾಡಿದ್ದು
- ಎಂ ಇಎಸ್ ವಿರುದ್ಧ ಕಠಿಣ ಕ್ರಮದ ಭರವಸೆ ಸಿಕ್ಕಿದ್ದು