ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ MES ನಿಷೇಧ ಮಾಡ್ಬೇಕು ಅಂತ ಇದೇ ತಿಂಗಳ 31 ಕ್ಕೆ ಕರೆ ಕೊಟ್ಟಿರೋ ಕರ್ನಾಟಕ ಬಂದ್ ಸಕ್ಸಸ್ ಆಗೋದು ಅನುಮಾನವಾಗಿದೆ.
ಬಂದ್ ಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿರೋ ಬಂದ್ ಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ.., ರಾಜ್ಯದ ಜನತೆ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ.. ಇದ್ರ ನಡುವೆನೇ ಹೊಸ ಸಿನೆಮಾಗಳೂ ಬಿಡುಗಡೆಯಾಗ್ತಿವೆ.. ಹೀಗಿರುವಾಗ ಬಂದ್ ಬೇಡ ಎಂಬ ಒತ್ತಾಯ ಕೇಳಿ ಬರ್ತಾ ಇದ್ವು.
ಇದ ಜತೆಗೆ ವಿವಿಧ ವಲಯಗಳು ನೈತಿಕ ಬೆಂಬಲ ನೀಡ್ತೀವಿ ಅಂತೆಲ್ಲಾ ಹೇಳಿದ್ದರಿಂದ ಬಂದ್ ಮುಂದೂಡಿದರೆ ಸೂಕ್ತ ಅನ್ನೋ ಅಭಿಪ್ರಾಯನೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಬಂದ್ ನ ಮುಂದಾಳತ್ವ ವಹಿಸಿದ್ದ ಪ್ರವೀಣ್ ಶೆಟ್ಟಿ, ಬಂದ್ ಮುಂದೂಡಿದರೆ ಸೂಕ್ತ ಅಂತ ವಾಟಾಳ್ ನಾಗರಾಜ್ ಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರವನ್ನೂ ಬರೆದಿದ್ದು, ಬಂದ್ ಸಕ್ಸಸ್ ಆಗೋದು ಅನುಮಾನವಾಗಿದೆ.
ಪ್ರವೀಣ್ ಶೆಟ್ಟಿ ಬರೆದಿರುವ ಪತ್ರದ ಸಾರಾಂಶ….
ಅಧ್ಯಕ್ಷರು
ಕನ್ನಡ ಪರ ಸಂಘಟನೆಗಳ ಒಕ್ಕೂಟ
ಬೆಂಗಳೂರು
ಕನ್ನಡದ,ಕನ್ನಡಿಗರ,ಕನ್ನಡ ಪರ ಹೋರಾಟಗಾರರ ಪ್ರಶ್ನಾತೀತ ನಾಯಕರೆ ತಮ್ಮಲ್ಲಿ ವಿನಮ್ರತೆಯಿಂದ ನಿವೇದಿಸಿ ಕೊಳ್ಳುವುದೇನೆಂದರೆ ದಿನಾಂಕ 22-12-21 ರಂದು ನಾವೆಲ್ಲರೂ ಒಮ್ಮತದಿಂದ ದಿನಾಂಕ ಮೂವತ್ತೊಂದರ ಶುಕ್ರವಾರ ರಾಜ್ಯ ಬಂದ್ ಕರೆ ನೀಡಿದ್ದು ಸರಿಯಷ್ಟೆ ಆದರೆ ನಂತರ ನಡೆದ ಹಲವಾರು ಬೆಳವಣಿಗೆಗಳು ನಮ್ಮ ಈ ನಿರ್ಧಾರ ಪ್ರಸ್ತುತ ಸರಿ ಇಲ್ಲವೆಂಬ ಭಾವನೆ ಮೂಡುತ್ತಿದೆ ಕಾರಣ ಓಮಿಕ್ರಾನ್ ಈಗಾಗಲೇ ತನ್ನ ಕಬಂಧ ಬಾಹುಗಳನ್ನ ಚಾಚುತ್ತಿದೆ ತತ್ಪರಿಣಾಮವಾಗಿ ಸೆಕ್ಷನ್ 144 ಹಾಗು ರಾತ್ರಿ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ ಈಗಾಗಲೆ ಕೊವಿಡ್ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿರುವ ವರ್ತಕರು ವಾಣಿಜ್ಯೋದ್ಯಮಿಗಳು ಹೋಟೆಲ್ ಮಾಲೀಕರು ನಮ್ಮ ಈ ನಿರ್ಧಾರದಿಂದ ಸಾಕಷ್ಟು ಆತಂಕ ದಲ್ಲಿದ್ದಾರೆ ಹಳೆ ವರ್ಷದ ಕೊನೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಒಳ್ಳೆಯ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರು ಬಹಳ ನಷ್ಠ ಹೊಂದುತ್ತಾರೆ ಸದಾಕಾಲ ನಮ್ಮ ಜೊತೆ ನಿಲ್ಲುತ್ತಿದ್ದ ಚಿತ್ರೋದ್ಯಮ ಕೆಲವು ಸಂಘಟನೆಗಳು ತಮ್ಮ ಅಸಮಾಧಾನವನ್ನ ಹೊರ ಹಾಕಿವೆ ಸಾರ್ವಜನಿಕ ವಲಯ ಹಾಗೂ ಬಹಳ ಪ್ರಮುಖವಾಗಿ ಬೆಳಗಾವಿಯ ಕ್ರಿಯ ಸಮಿತಿ ಕೂಡ ನಮ್ಮ ಬಂದ್ ಗೆ ಬೆಂಬಲ ನೀಡುತ್ತಿಲ್ಲ ನಮ್ಮ ಸಂಘಟನೆಯ ಪದಾಧಿಕಾರಿಗಳಲ್ಲೂ ಬಂದ್ ಬಗ್ಗೆ ಒಮ್ಮತ ಸಾದ್ಯವಾಗಿಲ್ಲ ಈ ಎಲ್ಲಾ ಕಾರಣಗಳನ್ನ ಗಮನಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವು ಬಂದ್ ದಿನಾಂಕವನ್ನ ಮೂಂದೂಡುವುದು ಸೂಕ್ತ ಮುಂದಿನ ಸಭೆಯಲ್ಲಿ ಚರ್ಚಿಸಿ ದಿನಾಂಕ ನಿಗಧಿ ಗೊಳಿಸೋಣಾ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇವೆ ವಂದನೆಗಳೊಂದಿಗೆ
ಇಂತಿ
ತಮ್ಮ ವಿಧೇಯ
ಪ್ರವೀಣ್ ಕುಮಾರ್ ಶೆಟ್ಟಿ