ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಹೊಸ ಮಾರ್ಗಸೂಚಿ…??!

ಬೆಂಗಳೂರು,(www.thenewzmirror.com):

ಕರೋನಾ ಎರಡನೇ ಆರ್ಭಟ ಮುಗಿತು ಅಂತ ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿಗೆ ಶಾಕ್ ಕೊಟ್ಟಿದ್ದು ಒಮಿಕ್ರಾನ್ ವೈರಸ್.., ರೂಪಾಂತರಿ ವೈರಸ್ ಆರ್ಭಟ ಮೂರನೇ ಅಲೆಯ ಮುನ್ಸೂಚನೆ ಅಂತ ಹೇಳಲಾಗ್ತಿದೆಯಾದ್ರೂ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ತಜ್ಞರ ಸಮಿತಿ ಮನವಿ ಮಾಡಿದೆ. ಅಷ್ಟೇ ಅಲ್ದೇ ಕ್ರಿಸ್ ಮಸ್, ನ್ಯೂ ಇಯರ್ ಗೆ ಬ್ರೇಕ್ ಹಾಕಿ ಅಂತಾನೂ ಶಿಫಾರಸ್ಸು ಮಾಡಿದೆ.

RELATED POSTS

ರಾಜ್ಯದಲ್ಲಿ ಈಗಾಗ್ಲೇ ಒಮಿಕ್ರಾನ್ ಅಬ್ಬರ ಶುರುವಾಗೋ ಮೂನ್ಸೂಚನೆ ಕೊಟ್ಟಿದೆ.., ಇನ್ನೂ ತಜ್ಞರು ಕೂಡ ಜನವರಿ ಮೂರನೇ ವಾರದಲ್ಲಿ ಒಮಿಕ್ರಾನ್ಹೆಚ್ಚು ಸದ್ದು ಮಾಡುತ್ತೆ ಅಂತ ಎಚ್ಚರಿಕೆನ್ನೂ ನೀಡಿದ್ದಾರೆ.., ಇದಕ್ಕೆ ಕ್ರಿಸ್ ಮಸ್ ಹಾಗೂ ನ್ಯೂ ಇಯರ್ ಕಾರಣವಾಗಬಾರದು ಅನ್ನೋ ಕಾರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿ ಅಂತ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ದೇಶದಲ್ಲೇ ಮೊದಲ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.., ಅದೂ ವಿದೇಶಿ ಪ್ರಜೆಗಳ ಕೃಪಕಾಟಕ್ಷದಿಂದ.., ಯಾವಾಗ ಒಮಿಕ್ರಾನ್ ಪತ್ತೆ ಅಯ್ತೋ ಅಂದಿನಿಂದಲೇ ಅರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಕಟ್ಟೆಚ್ಚರವಹಿಸಿ, ಹಲವು ಹೊಸ ಮಾರ್ಗಸೂಚಿಗಳನ್ನೂ ತರೋದಕ್ಕೆ ತಯಾರಿ ನಡೆಸಿದ್ವು..,ಇನ್ನೇನು ಕ್ರಿಸ್ ಮಸ್ ಹಾಗೂ ನ್ಯೂಸ್ ಇಯರ್ ಗೆ ಸಿದ್ಧತೆಗಳು ಭರದಿಂದ ಸಾಗ್ತಿರುವಾಗ್ಲೇ ಇದೇ ಮೂರನೇ ಅಲೆಗೆ ಕಾರಣವಾಗಬಾರ್ದು ಅನ್ನೋ ಕಾರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಏಕಾಏಕಿ ಸಭೆ ನಡೆಸಿ ಕೆಲ ಹೊಸ ಮಾರ್ಗಸೂಚಿಗಳನ್ನ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ಸಲಹಾ ಸಮಿತಿಯ ಶಿಫಾರಸ್ಸುಗಳು

  • ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರಕ್ಕೆ ಮಾರ್ಗಸೂಚಿ ಹೊರಡಿಸಿ
  • ಡಿಸೆಂಬರ್ 22 ರಿಂದ ಜನವರಿ 2 ರವರೆಗೆ ಜಾರಿಯಾಗುವಂತೆ ರೂಲ್ಸ್ ಜಾರಿ ಮಾಡಿ
  • ದೇವಸ್ಥಾನ, ಚರ್ಚ್, ಮಸೀದಿಗೂ‌ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಗೆ ಸಲಹೆ
  • ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ
  • ಪಬ್ ಕ್ಲಬ್ ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ
  • ಪಬ್ ಗೆ ಬರುವ ಗ್ರಾಹಕರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು
  • ಹೊರಾಂಗಣ ಪ್ರದೇಶದ ಕಾರ್ಯಕ್ರಮಗಳಿಗೆ 200-300 ಜನರಿಗೆ ಸೀಮಿತಗೊಳಿಸುವುದು
  • ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್ ಗಳ ನಿಯೋಜನೆ
  • ಕ್ರಿಸ್ ಮಾಸ್ , ಹೊಸ ವರ್ಷಾಚರಣೆಗೆ ಸದ್ಯದ ಮಟ್ಟಿಗೆ ಬೇಡ
ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist