ಬೆಂಗಳೂರು,(www.thenewzmirroe.com):
ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿರೋ ಬಿಎಂಟಿಸಿಯನ್ನ ಮುಚ್ಚುವ ಹುನ್ನಾರ ಸದ್ದಿಲ್ಲದೆ ನಡೀತಾ ಇದೆ ಅನ್ನೋ ಅನುಮಾನ ಮೂಡ್ತಿದೆ.
ಇದಕ್ಕೆ ಪೂರಕ ಎನ್ನುವಂಥ ಬೆಳವಣಿಗೆಗಳು ನಡೆಯುತ್ತಿದ್ದು ನೌಕರರು, ಚಾಲಕರು, ನಿರ್ವಾಹಕರು ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಕೆಲ್ಸಕ್ಕೆ ಸಂಚಕಾರ ಬಂದ್ರೂ ಅಚ್ಚರಿಪಡ್ಬೇಕಿಲ್ಲ.
ಬಿಎಂಟಿಸಿಯನ್ನ ಖಾಸಗೀಕರಣ ಮಾಡೋದಿಲ್ಲ.. ನಷ್ಟದಲ್ಲಿರೋ ನಿಗಮದ ಆರ್ಥಿಕ ಹೊರೆ ತಗ್ಗಿಸೋ ಕೆಲ್ಸ ಮಾಡ್ತೀವಿ ಅಂತೆಲ್ಲಾ ಬಡಾಯಿ ಕೊಚ್ಚಿಕೊಳ್ತಿರೋ ನಿಗಮ ಇದೀಗ ಸಂಸ್ಥಡ ಕಟ್ಟಿ ಬೆಳೆಸಿದವ್ರಿಗೆ ಸದ್ದಿಲ್ಲದೇ ಸೋಡಾಚೀಟಿ ನೀಡೋಕೆ ಮುಂದಾಯ್ತಾ ಅನ್ನೋ ಆತಂಕ ಮನೆ ಮಾಡಿದೆ.
ಈ ಆತಂಕಕ್ಕೆ ಇಂಬು ನೀಡವಂಥ ಸನ್ನಿವೇಶ ನಡೆದಿದ್ದು, ಮೊದಲ ಹೆಜ್ಜೆಯಾಗಿ ಈಗಾಗಲೇ ಎಲೆಕ್ಟ್ರಿಕ್ ಬಸ್ ಓಡಿಸೋಕೆ ಸಿದ್ದತೆ ಮಾಡಿಕೊಂಡಿದೆ. ಬಸ್ ಓಡಿಸೋ ಬವಾಜ್ದಾರಿ ಖಾಸಗಿಯವ್ರಿಗೆ ನೀಡುವ ಮೊದಲ ಯತ್ನ ಮುಂದಾಗಿದ್ದು ಆ ಮಾದರಿಯ ಮೊದಲ ಯತ್ನವಾಗಿ 90 ಬಸ್ ಗಳು ರಸ್ತೆಗಿಳಿಸುತ್ತಿದೆ ಬಿಎಂಟಿಸಿ.
ಇಷ್ಟು ವರ್ಷ ನೀವು ದುಡಿದಿದ್ದು ಸಾಕು.. ನಿಮ್ಮನ್ನ ಬೇರೆಡೆ ಕಳಿಸ್ತೀವಿ ದೂಸ್ರಾ ಮಾತಿಲ್ಲದೆ ಹೋಗ್ಬೇಕು ಅನ್ನೋ ಅರ್ಥ ಬರುವ ಧಾಟಿಯಲ್ಲಿ ಹೊರಡಿಸಿರುವ ಸುತ್ತೋಲೆ ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ಸಾರಿಗೆ ನೌಕರರ ಮುಷ್ಕರಕ್ಕೆ ಸಾಥ್ ಕೊಟ್ಟು ಸಾರ್ವಜನಿಕರ ಹಾಗೂ ನಿಗಮದ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರಮಿಕವರ್ಗದವರನ್ನ ಸದ್ದಿಲ್ಲದೆ ಮೂಲೆಗುಂಪು ಮಾಡುವ ಕೆಲ್ಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
೧೦,೨೦,೩೦,೪೦ ವರ್ಷಗಳಿಂದ ಬೆವರು ಸುರಿಸಿ ದೇಶದಲ್ಲೇ ನಂಬರ್ ಒನ್ ಸಾರಿಗೆ ಸಂಸ್ಥೆ ಅನ್ನೋ ಬಿರುದು ಬರಲು ಬೆವರ ಹರಿಸಿದ್ದ ಶ್ರಮಿಕವರ್ಗದವರನ್ನ ಸದ್ದಿಲ್ಲದೆ ಬೇರೆ ಕಡೆಗಳಿಗೆ ವರ್ಗಾವಣೆ ಮಾಡುವ ಕುರಿತ ಸುತ್ತೋಲೆ ಸದ್ದಿಲ್ಲದೆ ಆಚೆ ಬಂದಿದೆ.
ಯೆಸ್, 90 ಎಲೆಕ್ಟ್ರಿಕ್ ಬಸ್ ಗಳನ್ನ ನಾವು ಆಪರೇಟ್ ಮಾಡ್ತಾ ಇದೀವಿ, ಆ ಎಲೆಕ್ಟ್ರಿಕ್ ಬಸ್ ಗಳಿಗೆ ಸಂಸ್ಥೆಯ ಚಾಲಕರ ಅಗತ್ಯವಿಲ್ಲ.., ಹೊರಗಿನಿಂದ ಚಾಲಕ್ರು ಬರ್ತಾರೆ ಕೇವಲ ಕಂಡಕ್ಟರ್ ಮಾತ್ರ ಸಾಕು. ಹೀಗಾಗಿ ಕಂಡಕ್ಟರ್ ಗಳು ಮಾತ್ರ ಸಾಕು ಹೀಗಾಗಿ ಮೂರು ಡಿಪೋಗಳಲ್ಲಿರೋ 90 ಚಾಲಕ್ರನ್ನ ವರ್ಗಾವಣೆ ಮಾಡಲಾಗುತ್ತೆ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಮೊದಲ ಹಂತದಲ್ಲಿ ನಿಗಮವನ್ನ ಸೇರುತ್ತಿರೋ ತೊಂಭತ್ತು ಎಲೆಕ್ಟ್ರಿಕ್ ಬಸ್ ಗಳನ್ನ ನಾವು ಮೆಟ್ರೋ ಫೀಡರ್ ಸೇವೆಗೆ ಬಳಸಿಕೊಳ್ತಾ ಇದೀವಿ. ಹೀಗಾಗಿ ಡಿಪೋ 08 ಡಿಪೋ 27 ಡಿಪೋ 30 ರ ಮೂಲಕ ಎಲೆಕ್ಟ್ರಿಕ್ ಬಸ್ ಗಳು ಎನ್ NTPS ವಿದ್ಯುತ್ ವ್ಯಾಪಾರ್ ನಿಗಮ್ ಲಿಮಿಟೆಡ್ ಮೂಲಕ ಆಪರೇಟ್ ಮಾಡ್ತಾ ಇದೀವಿ ಅಂತನೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಖಾಸಗೀಕರಣ ನಮ್ಮ ಉದ್ದೇಶವಿಲ್ಲ.
ಕಳೆದೊಂದು ತಿಂಗಳ ಹಿಂದೆ ಎಲೆಕ್ಟ್ರಿಕ್ ಬಸ್ ಗಳ ಉದ್ಘಾಟನೆಗೆ ಆಗಮಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ನಿಗಮವನ್ನ ಖಾಸಗೀಕರಣ ಮಾಡೋದಿಲ್ಲ.. ಇದೆಲ್ಲಾ ಊಹಾಪೋಹ ಅಂತ ಸಮಜಾಯಿಷಿ ಕೊಟ್ಟಿದ್ದರು. ಹೀಗೆ ಹೇಳಿಕೆ ಕೊಟ್ಟ ಒಂದೂವರೆ ತಿಂಗಳೋಳಗೆ ಬಂದಿರೋ ಸುತ್ತೋಲೆ ಹತ್ತತ್ತು ಪ್ರಶ್ನೆ ಮೂಡುವಂತೆ ಮಾಡಿದೆ.
ಇನ್ನು ನಿಗಮದ ಸುತ್ತೋಲೆ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಸಾರಿಗೆ ನೌಕರರ ಮುಖಂಡರೊಬ್ಬರು, ನಿಗಮದ ಏಳಿಗೆಗೆ ನಾವು ಬೇಕಿತ್ತು. ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡುವಾಗ ನಮ್ಮ ಕಷ್ಟ, ನಮ್ಮ ಶ್ರಮ ಅಧಿಕಾರಿಗಳ ಕಣ್ಣಿಗೆ ಕಾಣಲಿಲ್ವಾ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಕಾರ್ಮಿಕ ಮಜ್ದೂರ್ ಸಂಘದ ಮುಖಂಡರೊಬ್ಬರು ಮಾತನಾಡಿ, ಶ್ರಮಿಕ ವರ್ಗಕ್ಕೆ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯ. ಈಗ ಬಂದಿರುವ ಸುತ್ತೋಲೆ ಮರಣಶಾಸನ. ಇದು ಆರಂಭವಷ್ಟೇಮುಂದಿನ ದಿನಗಳಲ್ಲಿ ಮೂರು ಡಿಪೋ ಇರೋದು ೧೦, ೨೦ ಡಿಪೋ ಆಗಬಹುದು ಅಂತ ಆತಂಕ ವ್ಯಕ್ತಪಡಿಸಿದ್ದಾರೆ.