ಬೆಂಗಳೂರು, (www.thenewzmirror.com) :
ಬಾಲಿವುಡ್ ನಟಿ ಪ್ರೀತಿ ಜಿಂಟಾ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಾಲಿವುಡ್ ನಟಿ, ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಸಹ ಮಾಲೀಕತ್ವ ಹೊಂದಿರುವ ಪ್ರೀತಿ ಜಿಂಟಾ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.

ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡೆನಫ್ ದಂಪತಿ ಸಿಹಿ ಸುದ್ದಿಯೊಂದನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದು, ಅವಳಿ ಮಕ್ಕಳಿಗೆ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಎಂಬ ಹೆಸರು ಇರಿಸಲಾಗಿದೆ ಎಂದೂ ತಿಳಿಸಿದ್ದಾರೆ.
ನಮ್ಮ ಕುಟುಂಬಕ್ಕೆ ಅವರನ್ನ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದು, ಇದನ್ನ ಹಂಚಿಕೊಳ್ಳೋದಕ್ಕೆ ಸಂತಸವಾಗ್ತಿದೆ ಎಂದೂ ಹೇಳಿದ್ದಾರೆ. ಪ್ರೀತಿ 2016 ರಲ್ಲಿ ಜೀನ್ ಗುಡೆನಫ್ ಅವ್ರನ್ನ ವಿವಾಹವಾಗಿದ್ರು.