ಮೂರು ಪರೀಕ್ಷೆಯಲ್ಲೂ ಸೋಲು : ಕರ್ನಾಟಕ ಸಿಎಂ ಬದಲಾವಣೆ ಸನ್ನಿಹಿತನಾ..?

ಬೆಂಗಳೂರು, (www.thenewzmirror.com) :

ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಒಂದ್ಕಡೆ ಯಶಸ್ವಿ ಆಡಳಿತ ಕೊಟ್ಟಿದ್ರೂ ಎದುರಾಗಿದ್ದ ಮೂರು ಸವಾಲುಗಳಲ್ಲಿ ಅವರು ಸೋಲನ್ನ ಅನುಭವಿಸಿದ್ದಾರೆ. ಆ ಮೂಲಕ ಬಸವರಾಜ ಬೊಮ್ಮಾಯಿ ಅವ್ರ ಕುರ್ಚಿ ಅಲುಗಾಡುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

RELATED POSTS

ಬಸವರಾಜ ಬೊಮ್ಮಾಯಿಯ ಸವಾಲು ಒಂದು

ಉಪಚುನಾವಣೆಯಲ್ಲಿ ಸಿಎಂ ಸ್ವಕ್ಷೇತ್ರದಲ್ಲೇ ಸೋಲನ್ನು ಅನುಭವಿಸಬೇಕಾಯ್ತು.., ತಮ್ಮ ನಾಯಕತ್ವದಲ್ಲಿ ಎದುರಿಸಿದ ಮೊದಲ ಉಪಚುನಾವಣೆಯಲ್ಲಿ ತವರು ಜಿಲ್ಲೆಯಲ್ಲೇ ಪಕ್ಷ ಮುಗ್ಗರಿಸಿರುವುದು ಬಸವರಾಜ ಬೊಮ್ಮಾಯಿ ನಾಯಕತ್ವವನ್ನು ಪಕ್ಷದೊಳಗೆ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಂತಾಗಿದೆ.

ಬಸವರಾಜ ಬೊಮ್ಮಾಯಿಯ ಸವಾಲು ಎರಡು

ರಾಜ್ಯದ 25 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಕನಿಷ್ಟ 15 ರಿಂದ 20 ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇತ್ತಾದರೂ ಗೆದ್ದಿದ್ದು ಕೇವಲ 11 ಮಾತ್ರ.., ಆಡಳಿತದಲ್ಲಿದ್ದೂ ವಿಧಾನಪರಿಷತ್‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೇ ಇರುವುದು. ಬಿಜೆಪಿಯ ಭದ್ರಕೋಟೆಗಳೆನಿಸಿದ ಕ್ಷೇತ್ರಗಳಲ್ಲೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವುದು ಹಿನ್ನಡೆ ಎಂದೇ ಭಾವಿಸಿದ್ದು, ಈ ಪರೀಕ್ಷೆಯಲ್ಲೂ ಸಿಎಂ ಸೋತಿದ್ದಾರೆ.

ಬಸವರಾಜ ಬೊಮ್ಮಾಯಿಯ ಸವಾಲು ಮೂರು

ರಾಜ್ಯದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.., ಹಾವೇರಿಯಲ್ಲೇ ಸಿಎಂ ಬೊಮ್ಮಾಯಿಗೆ ಹಿನ್ನಡೆಯಾಗಿದೆ.. ಆಡಳಿತದಲ್ಲಿದ್ದ ಬಿಜೆಪಿ ನಿರೀಕ್ಷೆ ಮಾಡುವಷ್ಟು ಸ್ಥಾನ ಗೆಲ್ಲದೇ ಇರೋದೂ ಕೂಡ ಸಿಎಂಗೆ ಬೇಸರ ತರಿಸಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಎದುರಾಗಿದ್ದ ಪರೀಕ್ಷೆಗಳನ್ನ ಸಮರ್ಥವಾಗಿ ಎದುರಿಸಿದರೂ ಅದರಲ್ಲಿ ಉತ್ತೀರ್ಣವಾಗುವಲ್ಲಿ ವಿಫಲವಾಗಿದ್ದಾರೆ. ಈ ಫಲಿತಾಂಶ ರಾಜ್ಯದಲ್ಲಿ ಸಿಎಂ ಬದಲಾಗ್ತಾರೆ ಅನ್ನೋ ಊಹಾಪೋಹಗಳಿಗೆ ಇದು ಪುಷ್ಠಿ ನೀಡುತ್ತಿದ್ದು, ಬದಲಾವಣೆ ಆಗ್ತಾರೆ ಅಂತಾನೇ ವಿಧಾನಸೌಧ ಪಡಸಾಲೆಯಲ್ಲಿ ಕೇಳಿ ಬರ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist