ಬೆಂಗಳೂರು,(www.thenewzmirror.com)
ಅಕ್ರಮ ಆಸ್ತಿ ವಿಚಾರದಲ್ಲಿ ಹೆಸರು ಕೇಳಿದ್ದ ಬಂದಿದ್ದ IPS ಅಧಿಕಾರಿ ರವಿ ಚೆನ್ನಣ್ಣನವರ್ ಕೊನೆಗೂ ವರ್ಗಾವಣೆ ಆಗಿದ್ದಾರೆ.
ಇಂದು 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿರೋ ಸರ್ಕಾರ ಅದರಲ್ಲಿ ರವಿ ಚೆನ್ನಣ್ಣನವರ್ ನ್ನೂ ವರ್ಗಾವಣೆ ಮಾಡಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಎಂಡಿಯಾಗಿ ರವಿ ಚೆನ್ನಣ್ಣನವರ್ ಅವ್ರನ್ನ ನಿಯೋಜನೆ ಮಾಡಲಾಗಿದೆ.
ಸಿಐಡಿ ಎಸ್ ಪಿ ಆಗಿದ್ದ ರಚಿ ಚೆನ್ನಣ್ಣನವರ್ ವಿರುದ್ಧ ಸಾಕಷ್ಡು ಆರೋಪಗಳು ಕೇಳಿ ಬಂದಿತ್ತು. ಸಾವಿರಾರು ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು, ಇದೆಲ್ಲಾ ಅಕ್ರಮವಾಗಿದ್ದು, ತನಿಖೆ ನಡೆಸುವಂತೆ ಒತ್ತಾಯಗಳು ಕೇಳಿ ಬಂದಿತ್ತು. ಈ ಕುರಿತಂತೆ ವಕೀಲ ಜಗದೀಶ್ ಕಾನೂನು ಹೋರಾಟಕ್ಕೂ ಮುಂದಾಗಿದ್ರು.
ಇದೆಲ್ಲಾ ಬೆಳವಣಿಗೆಗಳ ನಡುವೆನೇ ರವಿ ಚೆನ್ನಣ್ಣನವರ್ ಅವ್ರನ್ನ ವರ್ಗಾವಣೆ ಮಾಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.