ಬೆಂಗಳೂರು, (www.thenewzmirror.com) :
ರಾಜ್ಯದಲ್ಲಿ ಭುಗಿಲೆದ್ದಿರೋ ಹಿಜಾಬ್ ವಿವಾದ ಸದ್ಯಕ್ಕೆ ಅಂತ್ಯ ಕಾಣುತ್ತಿಲ್ಲ.., ಹೈ ಕೋರ್ಟ್ ನ ವಿಸ್ತೃತ ಪೀಠ ಇಂದು ವಿಚಾರಣೆ ನಡೆಸಿ ತೀರ್ಪು ಪ್ರಕಟ ಮಾಡುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ ಮುಖ್ಯ ನಾಯಮೂರ್ತಿ ಇದ್ದ ವಿಸ್ತೃತ ಪೀಠ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ತೀರ್ಪು ಬರುವ ವರೆಗೂ ಯಥಾ ಸ್ಥಿತಿ ಕಾಪಾಡುವಂತೆಯೂ ಸೂಚನೆ ಕೊಟ್ಟಿದೆ.
ಹೈಕೋರ್ಟ್‌ನ ವಿಸ್ತೃತ ಪೀಠ ನೀಡಿರೋ ಸೂಚನೆ ಪ್ರಕಾರ ತೀರ್ಪಿನ ಅಂತಿಮ ಆದೇಶ ಬರುವ ವರೆಗೂ ಧಾರ್ಮಿಕ ಉಡುಗೆ ತೊಡಬಾರದು ಎಂದೂ ಕಟ್ಟುನಿಟ್ಟಾಗಿ ಸೂಚಿಸಿದೆ.. ಆದಷ್ಟು ಬೇಗ ಪ್ರಕರಣದ ತೀರ್ಪು ಪ್ರಕಟಿಸಲಾಗುವುದು ಎಂದೂ ನ್ಯಾಯಪೀಠ ಹೇಳಿದೆ. ಅಲ್ಲಿವರೆಗೂ ರಾಜ್ಯದಲ್ಲಿ ಶಾಂತಿ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಅಂತಾನೂ ಹೇಳಿದೆ.
ತಕ್ಷಣಕ್ಕೆ ಶಾಲಾ ಕಾಲೇಜುಗಳನ್ನ ಆರಂಭಿಸಬೇಕೆಂದು ಸೂಚನೆ ಕೊಟ್ಟಿರೋ ನ್ಯಾಯಪೀಠ ಅವ್ರಿಗೆ ರಕ್ಷಣೆ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ ಅಂತಾನೂ ಹೇಳಿದೆ.
ಇನ್ನು ಪ್ರಕರನ ಇತ್ಯರ್ಥ ಆಗುವ ವರೆಗೂ ಧಾರ್ಮಿಕ ಉಡುಗೆ ತೊಡುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸೂಚನೆ ಕೊಟ್ಟಿದೆ.