ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ನ ಪೋರಬಂದರ್ ಕರಾವಳಿಯಲ್ಲಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಅಂತ ಹೇಳಿಕೊಂಡಿದೆ. ವಶಪಡಿಸಿಕೊಂಡ ಡ್ರಗ್ಸ್ಗಳಲ್ಲಿ 3,089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಮೈನ್ 25 ಕೆಜಿ ಮಾರ್ಫಿನ್ ಸೇರಿವೆ ಎಂದು ಭಾರತೀಯ ನೌಕಾಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
The Indian Navy and the Narcotics Control Bureau in a joint operation seized such a large amount of drugs off the coast of Porbandar in Gujarat, claiming that this was the biggest operation. The seized drugs include 3,089 kg of charas, 158 kg of methamphetamine and 25 kg of morphine, the Indian Navy said in a release.
ಬೆಂಗಳೂರು, www.thenewzmirror.com) :
ಭಾರತೀಯ ನೌಕಾಪಡೆ ಮತ್ತು ಎನ್ಸಿಬಿ ಪೋರ್ಬಂದರ್ ಕರಾವಳಿಯಲ್ಲಿ 3,330 ಕಿಲೋಗ್ರಾಂಗಳಷ್ಟು ಡ್ರಗ್ಸ್ ಅನ್ನ ವಶಪಡಿಸಿಕೊಂಡಿದೆ. ಭಾರತೀಯ ನೌಕಾಪಡೆ ಮತ್ತು ಎನ್ಸಿಬಿಯ ಅತಿ ದೊಡ್ಡ ಕಾರ್ಯಾಚರಣೆ ಯಾಗಿದ್ದು, ಗೃಹ ಸಚಿವ ಅಮಿತ್ ಶಾ ಏಜೆನ್ಸಿ ಕಾರ್ಯವನ್ನ ಶ್ಘಾಘಿಸಿದ್ದಾರೆ.
ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ನ ಪೋರಬಂದರ್ ಕರಾವಳಿಯಲ್ಲಿ ಇಷ್ಟು ದೊಡ್ಡ ಮೊತ್ತದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದೊಂದು ಅತಿ ದೊಡ್ಡ ಕಾರ್ಯಾಚರಣೆ ಅಂತ ಹೇಳಿಕೊಂಡಿದೆ. ವಶಪಡಿಸಿಕೊಂಡ ಡ್ರಗ್ಸ್ಗಳಲ್ಲಿ 3,089 ಕೆಜಿ ಚರಸ್, 158 ಕೆಜಿ ಮೆಥಾಂಫೆಟಮೈನ್ 25 ಕೆಜಿ ಮಾರ್ಫಿನ್ ಸೇರಿವೆ ಎಂದು ಭಾರತೀಯ ನೌಕಾಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
P8I LRMR ವಿಮಾನದ ಇನ್ಪುಟ್ ಆಧಾರದ ಮೇಲೆ, ಭಾರತೀಯ ನೌಕಾಪಡೆ ಗಸ್ತು ತಿರುಗುವ ಸಂದರ್ಭದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಹಡಗೊಂದನ್ನ ಪತ್ತೆ ಹಚ್ಚಲಾಯ್ತು. ಭಾರತದ ಸಮುದ್ರದ ನೆರೆಹೊರೆಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿರೋದು ಪತ್ತೆಯಾಯ್ತು. ಏಜೆನ್ಸಿಗಳ ಪ್ರಕಾರ, ನಿಷಿದ್ಧ ವಸ್ತುವು 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ್ದಾಗಿದೆ ಮತ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದವರು ಇರಾನಿ ಪ್ರಜೆಗಳೆಂದು ತಿಳಿದು ಬಂದಿದ್ದು, ಪ್ರಕರಣ ಸಂಬಮಧ ಐವರನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಶ್ಲಾಘನೆ
Pursuing PM @narendramodi Ji's vision of a drug-free Bharat our agencies today achieved the grand success of making the biggest offshore seizure of drugs in the nation. In a joint operation carried out by the NCB, the Navy, and the Gujarat Police, a gigantic consignment of 3132…
— Amit Shah (@AmitShah) February 28, 2024
“ಪ್ರಧಾನಿ @narendramodi Ji ಅವರ ಡ್ರಗ್ಸ್ ಮುಕ್ತ ಭಾರತದ ದೃಷ್ಟಿಯನ್ನು ಅನುಸರಿಸುವ ಮೂಲಕ ನಮ್ಮ ಏಜೆನ್ಸಿಗಳು ಇಂದು ರಾಷ್ಟ್ರದಲ್ಲಿ ಡ್ರಗ್ಸ್ನ ಅತಿದೊಡ್ಡ ವಶಪಡಿಸಿಕೊಳ್ಳುವಲ್ಲಿ ಭವ್ಯವಾದ ಯಶಸ್ಸನ್ನು ಸಾಧಿಸಿವೆ” ಎಂದು ಷಾ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎನ್ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 3132 ಕೆಜಿಯಷ್ಟು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. “ನಮ್ಮ ರಾಷ್ಟ್ರವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ನಮ್ಮ ಸರ್ಕಾರದ ಅಚಲ ಬದ್ಧತೆಗೆ ಐತಿಹಾಸಿಕ ಯಶಸ್ಸು ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ, ನಾನು ಎನ್ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸರನ್ನು ಅಭಿನಂದಿಸುತ್ತೇನೆ” ಎಂದು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.