ಬೆಂಗಳೂರು, (www.thenewzmirror.com);
ಬಿಬಿಎಂಪಿ ಆಸ್ತಿ ತೆರಿಗೆಯ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್)ಯನ್ನು 2024ರ ಆಗಸ್ಟ್ 31ರವರೆಗೆ ವಿಸ್ತರಿಸಿದ್ದಕ್ಕಾಗಿ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಎಫ್ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಧನ್ಯವಾದ ತಿಳಿಸಿದ್ದಾರೆ.
ಬಿಬಿಎಂಪಿಯಿಂದ ಆಸ್ತಿ ತೆರಿಗೆ ಪಾವತಿಗಾಗಿ ಅಮ್ನೆಸ್ಟಿ ಯೋಜನೆಯ ಒನ್-ಟೈಮ್ ಸೆಟಲ್ಮೆಂಟ್ ಅನ್ನು 2024 ರ ಆಗಸ್ಟ್ 31 ರವರೆಗೆ, ಇನ್ನೂ ಒಂದು ತಿಂಗಳವರೆಗೆ ವಿಸ್ತರಿಸುವಂತೆ ಎಫ್ಕೆಸಿಸಿಐ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಬೇಡಿಕೆಯನ್ನು ಸರ್ಕಾರ ಪರಿಗಣಿಸಿರುವುದಕ್ಕೆ ಎಫ್ಕೆಸಿಸಿಐ ಸಂತಸ ವ್ಯಕ್ತಪಡಿಸಿದೆ.
ಕಳೆದ 10 ರಿಂದ 12 ದಿನಗಳಲ್ಲಿ ಬಿಬಿಎಂಪಿಯು ಸುಮಾರು ರೂ.1,200 ಕೋಟಿ ಸಂಗ್ರಹಿಸಿದ್ದು ಒಟ್ಟಾರೆ ರೂ.3,065 ಕೋಟಿ ಆದಾಯವನ್ನು ಸ್ವೀಕರಿಸಿದೆ. ಈ ಅವಧಿಯ ವಿಸ್ತರಣೆಯಿಂದ ಇನ್ನೂ ಹೆಚ್ಚಿನ ಆದಾಯ ಸಂಗ್ರಹಣೆ ಮತ್ತು ಬಿಬಿಎಂಪಿಯು ತನ್ನ ವಾರ್ಷಿಕ ಗುರಿಯಾದ ರೂ.5,200 ಕೋಟಿಗಳನ್ನು ಸುಲಭವಾಗಿ ಪೂರೈಸಬಲ್ಲದು ಎಂಬುದು ಎಫ್ಕೆಸಿಸಿಐನ ಅಭಿಪ್ರಾಯ.