ಬೆಂಗಳೂರು,(www.thenewzmirror.com) ;
ರಸ್ತೆ ಅಫಘಾತಕ್ಕೆ ಕಾರಣವಾಗ್ತಿರೋ ಹೈ ಬೀಮ್ ಲೈಟ್ ಬಳಕೆ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಹೀಗಾಗಿ ಜುಲೈ ತಿಂಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 28620 ವಾಹನ ಮಾಲೀಕರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ದೇಶದಲ್ಲೇ ಇದೆ ಮೊದಲ ಬಾರಿಗೆ ಕಾರ್ಯಾಚರಣೆಯ ಮುಂದಾಳತ್ವ ವಹಿಸಿರುವ ಸಂಚಾರಿ ಮತ್ತು ರಸ್ತೆ ಸುರಕ್ಷತಾ ವಿಭಾಗದ ADGP ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ಜುಲೈ ತಿಂಗಳಂದು 28620 ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
ಇದು ಆರಂಭವಾಗಿದ್ದು, ನಿರಂತರವಾಗಿ ಈ ಕಾರ್ಯಾಚರಣೆ ನಡೆಯಲಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದು, ಹೈ ಬೀಮ್ ಬದಲು ಲೋ ಬೀಮ್ ಲೈಟ್ ಬಳಸಿ ವಾಹನ ಚಲಾಯಿಸಿ ಅಫಘಾತ ಕಡಿಮೆಯಾಗುವಲ್ಲಿ ನೆರವಾಗಿ ಅಂತ ಮನವಿ ಮಾಡಿದ್ದಾರೆ.