ಬೆಂಗಳೂರು, (www.thenewzmirror.com) ;
ಸಿದ್ದರಾಮಯ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯಿತ ಅಧಿಕಾರಿಗಳಿಗೆ ಕಿರುಕುಳ ಆಗುತ್ತಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಸಮುದಾಯದರಿಗೆ
ವೀರಶೈವ ಲಿಂಗಾಯತ ಬಂಧುಗಳೇ ನಮ್ಮ ಸಮಾಜದ ಅಧಿಕಾರಿಗಳಿಗೆ ನಾವು ಬೆಂಬಲವಾಗಿ ನಿಲ್ಲುವಂತ ಕಾಲ ಬಂದಿದೆ. ಮಾನಸಿಕವಾಗಿ, ಆರ್ಥಿಕವಾಗಿ ಕುಗ್ಗಿಸುವುದಲ್ಲದೇ ಅವರುಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ಕಾಣಬಹುದು ಎಂದು ಸಮುದಾಯದ ಬಾಂದವದವರಿಗೆ ಸಂದೇಶ ರವಾನೆ ಮಾಡಿದ್ದಾರೆ.
ನಮ್ಮ ಸಮಾಜದ ಅಧಿಕಾರಿಗಳು ಯಾರ ಮುಂದೆ ಹೇಳದೆ ತಮ್ಮ ನೋವುಗಳನ್ನು ಅನುಭವಿಸುತ್ತಿರುವುದು ವೀರಶೈವ ಲಿಂಗಾಯತ ಸಮಾಜದ ಸಂಘಟನೆಗಳು ಇದರ ಬಗ್ಗೆ ಗಮನ ಹರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕ
ಆತಂಕ ವ್ಯಕ್ತಪಡಿಸಿದ್ದು, ಇನ್ಮುಂದೇ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಎಲ್ಲಾ ವರ್ಗದ ಅಧಿಕಾರಿಗಳ ಜೊತೆಗೆ ಇರುವುದಲ್ಲದೇ ಎಲ್ಲಾ ತರಹ ಸಹಕಾರ ನೀಡಲು ಸದಾ ಸಿದ್ದ ಎಂದು ಅಭಯ ನೀಡಿದ್ದಾರೆ.
ಯಾರೆ ಆಗಿರಲಿ ಅಥವಾ RTI ಕಾರ್ಯಕರ್ತರನ್ನು ಬಿಟ್ಟು ಆಟ ಆಡುವವರನ್ನು ಇನ್ಮುಂದೇ ಬಿಡುವುದಿಲ್ಲ. ಎಲ್ಲವನ್ನೂ ಸಮಾಜ ನೋಡುತ್ತಿದೆ ಇನ್ಮುಂದೇ ಅಲ್ಲೇ ತಕ್ಕ ಉತ್ತರ ನೀಡುವಂತಹ ವ್ಯವಸ್ಥೆಗಳು ಆಗಬೇಕಾಗಿದೆ. ಹೀಗಾಗಿ ಯಾರೆಲ್ಲ ನೋವು ಅನುಭವಿಸುತ್ತಾರೋ ಅವ್ರ ಬೆಬಲವಾಗಿ ನಿಲ್ಲೋಣ ಎಂದು ಕರೆ ಕೊಟ್ಟಿದ್ದಾರೆ ಪ್ರದೀಪ್ ಕಂಕಣವಾಡಿ.