ಬೆಂಗಳೂರು, (www.thenewzmirror.com) ;
ಕಳೆದ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಸಾರಕ್ಕಿ ಕೆರೆಯಲ್ಲಿ ಕೊನೆಗೂ ಒತ್ತುವರಿ ಪ್ರದೇಶವನ್ನ ಬಿಬಿಎಂಪಿ ತೆರವುಗೊಳಿಸಿ, ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಬಿಎಂಪಿಯ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಬರುವ ಸಾರಕ್ಕಿ ಕೆರೆಯ ಸುತ್ತಮುತ್ತ ಒತ್ತುವರಿಯಾಗಿತ್ತು. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಸಾರಕ್ಕಿ ಕೆರೆ ಸೇರಿದಂತೆ ಪಾಲಿಕೆ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಒತ್ತುವರಿ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು.



ಅದರಂತೆ ಇತ್ತೀಚೆಗೆ ಬೊಮ್ಮನಹಳ್ಳಿ ವಲಯದ ಸಾರಕ್ಕಿ ಕೆರೆ (ಜರಗನಹಳ್ಳಿ ಸರ್ವೆ 7) ರ ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೆರೆಯ ಸರ್ವೆ ಕಾರ್ಯ ನಡೆಸಿ 21.68 ಗುಂಟೆ ಶೆಡ್ ಖಾಲಿ ಜಾಗ ಹಾಗೂ ರಸ್ತೆಯಿಂದ ಆಕ್ರಮಿತವಾಗಿದ್ದ ಪ್ರದೇಶವು ಒತ್ತುವರಿಯಾಗಿರುವುದಾಗಿ ತಿಳಿದುಬಂದಿತ್ತು. ಹೀಗಾಗಿ ಕೆರೆಗಳು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ನೇತೃತ್ವದಲ್ಲಿ ಒತ್ತುವರಿಯಾಗಿದ್ದ 21 ಎಕರೆ 68 ಗುಂಟೆ ಪ್ರದೇಶವನ್ನ ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿದ್ದ ಪ್ರದೇಶದಲ್ಲಿ ತಂತಿ ಬೇಲಿ ಅಳವಡಿಸಿದೆ. ಕೆರೆ ಜಾಗದಲ್ಲಿ ಒತ್ತುವರಿಯಾಗಿದ್ದ ಪ್ರದೇಶ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದೆ.