ಬೆಂಗಳೂರು(thenewzmirror.com) : ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದು, ಈ ಪ್ರತಿಭಟನೆ ಇವತ್ತು ಬೆಂಗಳೂರು ನಗರದಲ್ಲಿ ಪ್ರಾರಂಭವಾಗಿದೆ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ಪ್ರತಿಭಟನೆ ನಡೆಸಲಿದ್ದು, ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಹೋರಾಟ ಮುದುವರೆಯುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು,ಈ ವೇಳೆ ಮಾತನಾಡಿದ , ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ,
ಗೃಹಲಕ್ಷ್ಮಿ ಹಣ ಬಿಡುಗಡೆ ಆಗ್ರಹಿಸಿ ನಾಳೆ (ಮಂಗಳವಾರ ) ನಮ್ಮ ಪಕ್ಷದ ಶಾಸಕರು, ವಿಧಾನಪರಿಷತ್ ಸದ್ಯಸರು ಎಲ್ಲರೂ ಸೇರಿ ವಿಧಾನಸೌಧದ ಮುಂಭಾಗ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಇಡೀ ರಾಜ್ಯಾದ್ಯಂತ ನಮ್ಮ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಿದ್ದೇವೆ ಎಂದು ಕರೆ ನೀಡಿದರು.
ಮನಸೋ ಇಚ್ಛೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಲ್ಲ. ಗೃಹಲಕ್ಷ್ಮಿ ಹಣ ಕೊಡುವ ದಿನಾಂಕ ಹೇಳಿ ಸಿದ್ರಾಮಣ್ಣ.ನಾಡಿನ ಮಹಿಳೆಯರು ದುಡ್ಡು ಯಾವಾಗ ಬರುತ್ತೆ ಅಂತ ಆತಂಕದಿಂದ ಕಾಯುತ್ತಿದ್ದಾರೆ. ನೀವೇ ಕೊಟ್ಟಿರುವ ಮಾತನ್ನ ಉಳಿಸಿಕೊಂಡು ಒಂದು ದಿನಾಂಕ ನಿಗದಿ ಮಾಡಿ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಚುನಾವಣೆಗಳನ್ನ ಗೆಲ್ಲುವ ಗ್ಯಾರಂಟಿ ವಾಮಮಾರ್ಗ:
ಗ್ಯಾರಂಟಿಗಳು ಎಂದರೆ ಈ ಸರ್ಕಾರಕ್ಕೆ ಚುನಾವಣೆಗಳನ್ನು ಗೆಲ್ಲುವ ವಾಮಮಾರ್ಗ ಎನ್ನುವ ಅಪವಾದ ಇದೆ. ಸಿಎಂ ಸಿದ್ದರಾಮಯ್ಯ ಅವರೇ..ಡಿಸಿಎಂ ಡಿಕೆ ಶಿವಕುಮಾರ್ ಅವರೇ.
ನಿಮಗೆ ಇಷ್ಟ ಬಂದಾಗ ಗ್ಯಾರಂಟಿ ಹಣ ಕೊಡುವುದಲ್ಲ. ಕ್ಯಾಲೆಂಡರ್ ನಲ್ಲಿ ದಿನಾಂಕ ಗುರುತಿಸಿ ಘೋಷಣೆ ಮಾಡಿ. ನಿಮ್ಮ ಬಜೆಟ್ ನಲ್ಲಿ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಎಂದು. ಪ್ರತಿ ತಿಂಗಳು ಹಣ DBT ಮಾಡುವ ದಿನ ಹೇಳಿ ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಪರಿಜ್ಞಾನ ಇರಲಿಲ್ವಾ.? ನಿಖಿಲ್ ಕಿಡಿ:
ಐದು ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಬೇಕಾಗುತ್ತೆ ಅಂತ ನಿಮಗೆ ಪರಿಜ್ಞಾನ ಇರಲಿಲ್ವಾ.?
ಗ್ಯಾರಂಟಿಗಳನ್ನ ರಾಜ್ಯದ ಜನತೆ ನಿಮಗೆ ಕೇಳಿದ್ರಾ.? ಕರ್ನಾಟಕಕ್ಕೂ ಮೀರಿ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೇಸ್ ಬಂದ ನಂತರ ನಲವತ್ತು ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇತಃ ಪರಿಸ್ಥಿತಿ ಈ ಸರ್ಕಾರ ದಲ್ಲಿ ಬಂದರು ಆಶ್ಚರ್ಯಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆಗೆ ಗ್ಯಾರಂಟಿ ಹಣ:
ನಮ್ಮ ತಾಯಂದಿರ ಮತ್ತು ಹೆಣ್ಣುಮಕ್ಕಳಿಗೆ ಒಂದು ಮಾತು ಹೇಳ್ತಿನಿ,ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರೋವರೆಗೂ ನೀವು ಯಾವಾ ನಿರೀಕ್ಷೆ ಇಟ್ಟುಕ್ಕೊಳ್ಳಬೇಡಿ, ಚುನಾವಣೆ ಬರೋದಕ್ಕಿಂತ ಮುಚ್ಚೆ ಭವಿಷ್ಯ ನಿಮ್ಮ ಖಾತೆಗೆ ಹಣ ಜಮಾ ಆಗಬೋದು. ಇವರ ರಾಜಕೀಯದ ಬೆಳೆ ಬೇಯಿಸಿಕೊಳ್ಳುವುದಕ್ಕೆ ಖಾತೆಗಳಿಗೆ ಹಣ ಅಕಿರೋದನ್ನ ನೋಡಿದ್ದೇವೆ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದರು
ಕೇಂದ್ರದ ಮಹಾನಾಯಕರೇ ಉತ್ತರ ಕೊಡಿ:
ಕೇಂದ್ರದ ಮಹಾನಾಯಕರೇ ಉತ್ತರ ಕೊಡಿ ಎಂದು ಹೇಳಿದ್ರಿ ಗ್ಯಾರಂಟಿ ಯೋಜನೆಯ ಬಗ್ಗೆ ರಾಹುಲ್ ಗಾಂಧಿ ಯವರೇ, ಭಾರತ ಜೋಡೋ ಯಾತ್ರೆ ಮಾಡಿದ್ರಿ.ಎಲ್ಲಾ ರೀತಿಯ ಭರವಸೆ ಕೊಟ್ರಿ ಆದ್ರೆ 64 ಸಾವಿರ ಕೋಟಿ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಮಾಧ್ಯಮದಲ್ಲಿ ನೋಡ್ದೆ ಇವತ್ತು ಗುತ್ತಿಗೆದಾರರು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡ್ತಿದ್ದಾರೆ ಅಂತ, ಭೇಟಿಯಿಂದ ಏನು ಪ್ರಯೋಜನ ವಿಲ್ಲ ಎಂದರು
ನಮ್ಮ ತೆರಿಗೆ ದುಡ್ಡು ಗಾಂಧಿ ಕುಟುಂಬಕ್ಕೆ:
ಈ ದೇಶದಲ್ಲಿ ಕಾಂಗ್ರೆಸ್ ಅನ್ನುವುದು ಉಳಿದಿದ್ರೆ ಅದು ಏಳುವರೆ ಕೋಟಿ ಜನ ಕಟ್ಟುವಂತ ತೆರಿಗೆ ಹಣದಿಂದ.ಈ ಹಣವನ್ನು ಚೀಲದ ತುಂಬಾ ತುಂಬಿಕೊಂಡು ಹೋಗಿ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿಗೆ, ಪ್ರಿಯಾಂಕಾ ಗಾಂಧಿಗೆ ಅರ್ಪಿಸುತ್ತಿದ್ದಾರೆ ನಾಚಿಕೆ ಆಗಬೇಕು ಈ ಸರ್ಕಾರಕ್ಕೆ.
ಕಾನೂನು ವ್ಯವಸ್ಥೆ ಹದಗೆಟ್ಟಿದೆ ಜನ ಸಾಮಾನ್ಯರ ಪರಿಸ್ಥಿತಿ ಏನು:
ಈ ಸರ್ಕಾರದಲ್ಲಿ ರೈತರ ನ್ನ ಲೆಕ್ಕಕ್ಕೆ ಇಟ್ಟಿಲ್ಲ, ಗುತ್ತಿಗೆದಾರರು, BPL ಕಾರ್ಡ್ ಬಳಕೆದಾರರು ಈ ಸರ್ಕಾರದಲ್ಲಿ ಬೀದಿಗೆ ಬಂದಿದ್ದಾರೆ. ಇನ್ನು ಲಾ ಅಂಡ್ ಆರ್ಡರ್ ಸಂಪೂರ್ಣ ಹದಗೆಟ್ಟಿದೆ.ಇದಕ್ಕೆ ಮೈಸೂರಿನಲ್ಲಿ ನಡೆದ ಘಟನೆ ಉದಾಹರಣೆ. ಕಾನೂನನ್ನ ರಕ್ಷಣೆ ಮಾಡೋ ಪೊಲೀಸ್ ಅಧಿಕಾರಿ ಮೇಲೆ ಕಲ್ಲು ಎಸೆಯುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಆತಂಕ ವ್ಯಕ್ತಪಡಿಸಿದರು.
ಭದ್ರಾವತಿ ಘಟನೆ ಬಗ್ಗೆ ಮಾತನಾಡಿದ ಅವರು; ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಒಂದು ಮಾತು ಹೇಳ್ತಿನಿ, ಯಾರೋ ಪಕ್ಕಾದ ಮನೆ ಅಧಿಕಾರಿಗೆ ಆಗಿದೆ, ನಮಗಿನ್ನೂ ಬಂದಿಲ್ಲ ಅಂತ ಕಣ್ಮುಚ್ಚಿ, ಕೈ ಕಟ್ಟಿ ಕೂರ ಬೇಡಿ, ಎಷ್ಟು ವರ್ಷ ಈ ಅಸಹಾಯಕತೆಯಿಂದ ನಡೆದುಕೊಳ್ಳುತ್ತಿರಿ ನಿಮ್ಮ ಜೊತೆಗೆ ಜನತಾದಳ ಪಕ್ಷ ಇದೆ. ಇವತ್ತು ನಿಮ್ಮ ಸ್ನೇಹಿತರಿಗೆ ಆಗಿದೆ. ನಾಳೆ ನಿಮಗೆ ಆಗುತ್ತೆ. ಈ ಪರಿಸ್ಥಿತಿಗೆ ಹೊಂದಿಕೊಂಡು ಹೆಜ್ಜೆ ಹಾಕ್ತಿದ್ದೀರಿ ಎಂದು ಕಿವಿಮಾತು ಹೇಳಿದರು.
ಚುನಾವಣೆಗೆ ಮಾತ್ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ:
ಬಾಯಿಬಿಟ್ರೆ ಸಾಕು ನಾವು ಹಿಂದುಳಿದ ಸಮುದಾಯದ ಪರ ಅಂತ ಭಾಷಣ ಬಿಡ್ತೀರಾ.ಆರು ನಿಗಮಕ್ಕೆ ವರ್ಷಕ್ಕೆ 350 ಕೋಟಿ ಇಟ್ಟಿರುವ ಹಣ ಕೇವಲ 85ಕೋಟಿ ಹಣ ಮಾತ್ರ ಉಪಯೋಗ ಆಗಿದೆ.ಮಿಕ್ಕಿದು ಹಣ ಎಲ್ಲೋಯ್ತು.? ಬೇರೆ ರಾಜ್ಯದ ಚುನಾವಣೆಗೆ ಈ ಹಣನೇ ಬೇಕಿತ್ತಾ. ಚುನಾವಣೆ ಹೊತ್ತಿನಲ್ಲಿ ಮಾತ್ರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕೇವಲ ಚುನಾವಣೆಗೆ ಮಾತ್ರ ಸೀಮಿತನಾ.? ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.