ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ; ಜೈನರು, ಕ್ರೈಸ್ತರಿಗೆ ಉಪ್ಪಿನಕಾಯಿ,SC/ST, OBCಗೆ ಅನ್ಯಾಯ: ನಿಖಿಲ್ ಕುಮಾರಸ್ವಾಮಿ

RELATED POSTS

ಬೆಂಗಳೂರು(thenewzmirror.com): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಡಕೌಟ್ ಬಜೆಟ್,

ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ನೀಡಿದ್ದಾರೆ. ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇಂತಹ ಬಜೆಟ್ ಕೊಟ್ಟವರಿಗೆ ನಾಚಿಕೆಯಾಗಬೇಕು ಎಂದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಪಕ್ಷದ ಕಚೇರಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು,ಓಲೈಕೆ ಮಾಡುವುದಕ್ಕೂ ಒಂದು ಮಿತಿ ಇದೆ. ಇದನ್ನು ಸಿದ್ದರಾಮಯ್ಯ ಅವರ ಹದಿನಾರನೇ ಬಜೆಟ್ ಎಂದು ಎಲ್ಲರೂ ಹೇಳಿದ್ದಾರೆ. ಅದನ್ನು ದಾಖಲೆ ಎಂದು ಹೊಗಳುತ್ತಿದ್ದಾರೆ. ಆದರೆ, ಮುಸ್ಲಿಮರಿಗೆ ಹದಿನಾರು ಕಾರ್ಯಕ್ರಮಗಳನ್ನು ಕೊಟ್ಟು ತಮ್ಮ ನಿರ್ದಿಷ್ಟ ಕಾರ್ಯಸೂಚಿ ಏನು ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಸಮಾಜವನ್ನು ಹೇಗೆ ಒಡೆಯಬೇಕು ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಬಜೆಟ್ ಚುನಾವಣೆಗೆ ಸಿದ್ಧಪಡಿಸಿದ ಬಜೆಟ್ ನಂತೆ ಇದೆ. ಕೇವಲ ಘೋಷಣೆಗಳಿಗೆ ಸೀಮಿತವಾದ ಪುಸ್ತಕ. ಒಂದು ಸಮುದಾಯವನ್ನು ತುಷ್ಟೀಕರಣ ಮಾಡಿದ್ದಾರೆ. ಇದ್ರಲ್ಲಿ ಒಂದು ಸಮುದಾಯಕ್ಕೆ ಬಿರಿಯಾನಿ ಊಟ ಮತ್ತೊಂದು ಸಮುದಾಯಕ್ಕೆ ಉಪ್ಪಿನಕಾಯಿ ಊಟ. ಬಜೆಟ್ ನಲ್ಲಿ ಕೇವಲ ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ ಎಂದು ನಿಖಿಲ್ ಅವರು ಬಹು ಸಂಖ್ಯಾತ ಸಮುದಾಯಗಳನ್ನು ತುಚ್ಛೀಕರಣ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ದೊಡ್ಡ ಬಜೆಟ್ ಗೆ ಕನ್ನಡಿಗರ ಉದಾರತೆ ಕಾರಣ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬರೋಬ್ಬರಿ ₹4.09 ಲಕ್ಷ ಕೋಟಿ ಮೌಲ್ಯದ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ₹1.15 ಲಕ್ಷ ಕೋಟಿಗಳನ್ನು ಸಾಲ ಮಾಡಿದೆ. ಭಾರತದಲ್ಲಿಯೇ ಅತಿ ದೊಡ್ಡ ಬಜೆಟ್ ಅಂತ ಮಾನ್ಯ ಸಿದ್ದರಣಯ್ಯ ಮಯ್ಯ ಅವರ ಬೆನ್ನನ್ನ ಅವರೇ ತಟ್ಟಿಕೊಳ್ಳುತ್ತಿದ್ದಾರೆ, ಇದಕ್ಕೆ ಕಾರಣ ರಾಜ್ಯದ ಕನ್ನಡಿಗರು ಎಂದರು.

ನಮ್ಮ ರಾಜ್ಯದಲ್ಲಿ ಒಂದು ಲಕ್ಷ ₹80,000 ಕೋಟಿ ರಾಜ್ಯದಿಂದ ತೆರಿಗೆ ಹಣ ಸಂಗ್ರಹ ಆಗ್ತಿದೆ. ಕೇಂದ್ರದಲ್ಲಿ ರಾಜ್ಯದಿಂದ ₹68,000 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ₹4 ಲಕ್ಷ ಕೋಟಿ ಗಾತ್ರದ ಬಜೆಟ್ ಗೆ  ಕನ್ನಡಿಗರು ಕಾರಣ. ಇದರಲ್ಲಿ ಸುಮಾರು ₹4,000 ಕೋಟಿಯಷ್ಟು ಬಂಡವಾಳ ಸರ್ಕಾರಕ್ಕೆ ಹೋಗುತ್ತದೆ. ಗ್ಯಾರಂಟಿಗಳಿಗೆ ₹52,000 ಕೋಟಿ ಕೊಟ್ಟಿದ್ದಾರೆ. ಉಳಿದ ₹17,000 ಕೋಟಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮತ್ತು ಶಾಸಕರಿಗೆ ಅನುದಾನ ನೀಡಬೇಕು. ಕಳೆದ ವರ್ಷ ₹1.05 ಲಕ್ಷ ಕೋಟಿ ಸಾಲ ಆಗಿದೆ. ಈ ಬಜೆಟ್ ನಲ್ಲಿ ₹1.16 ಕೋಟಿಯಷ್ಟು ಸಾಲ ಆಗಿದೆ ಎಂದು ಅವರು ಗದಾಪ್ರಹಾರ ನಡೆಸಿದರು. 

ಸಾಲ ತೀರಿಸುವುದಕ್ಕೆ ಸಾಲ ಮಾಡಿದ್ದಾರೆ:

ಇನ್ನು ಬಜೆಟ್ ನಲ್ಲಿ ಕೇಂದ್ರ ಸರಕಾರ ಸಾಲ ಮಾಡಿಲ್ಲವೇ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ₹50 ಲಕ್ಷ ಕೋಟಿಯಲ್ಲಿ ₹15 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ, ಮೆಟ್ರೋ , ಹೆದ್ದಾರಿ, ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಕೊಟ್ಟಿದ್ದಾರೆ. ಆದರೆ ರಾಜ್ಯ ಸರಕಾರ ಸಾಲ ಮಾಡಿ ಸಾಲ ತೀರಿಸುತ್ತಿದ್ದಾರೆ. ಖಜಾನೆ ತುಂಬಿಸಿದ ಕನ್ನಡಿಗರಿಗೆ ಈ ಬಜೆಟ್ ನಿಂದ ಏನೂ ಉಪಯೋಗ ಆಗಿಲ್ಲ ಎಂದು ಅವರು ಕಿಡಿಕಾರಿದರು.

ಮಹಾರಾಷ್ಟ್ರದಲ್ಲಿ ಒಂದು ಯೂನಿಟ್ ವಿದ್ಯುತ್ ಅನ್ನು ₹3 ದರದಲ್ಲಿ ಕೊಡುತ್ತಾರೆ. ಕರ್ನಾಟಕದಲ್ಲಿ ಒಂದು ಯೂನಿಟ್ ಗೆ ₹7 ಹಾಕುತ್ತಾರೆ. ದೊಡ್ಡ ದೊಡ್ಡ ಕಾರ್ಖಾನೆಗಳು ನಮ್ಮಲ್ಲಿ ಇದೇ ಕಾರಣಕ್ಕೆ ಬರುತ್ತಿಲ್ಲ. ಇದರ ಲೋಪದೋಷಗಳು ಏನು? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೊಡ್ಡ ಪ್ರಮಾಣದ ಬಜೆಟ್ ಕೊಟ್ಟಿದ್ದೇನೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಸಿಎಂ ವಿರುದ್ಧ ನಿಖಿಲ್ ಅವರು ಹರಿಹಾಯ್ದರು.

ಪ್ರತಿ ಕನ್ನಡಿಗನ ಮೇಲೆ ₹14.700 ಸಾಲ:

ಈ ಬಜೆಟ್ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಜನರಿಗೆ ಇನ್ನು ಸ್ವಲ್ಪ ದಿನದಲ್ಲೇ ಸತ್ಯ ಏನೆಂದು ಗೊತ್ತಾಗುತ್ತದೆ. ಬೆಂಗಳೂರು ನಗರದ ಸುರಂಗ ಯೋಜನೆಗೆ ₹40,000 ಕೋಟಿ.ಕೊಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಿಂದ ಹಣ ಕೊಡುತ್ತಾರೆ? ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಇದು ನಿಜಕ್ಕೂ ಆಗುತ್ತಾ? ಅಥವಾ ಕನಸಾಗಿಯೇ ಉಳಿಯುತ್ತಾ? ಎಂದು ಅನುಮಾನ ವ್ಯಕ್ತಪಡಿಸಿದರು.

SC/ST ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ವಿಶೇಷವಾಗಿ 16 ಯೋಜನೆಯನ್ನ ಕೊಟ್ಟಿದ್ದಾರೆ. ಆದರೆ ಉಳಿದ  ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ. ಬಜೆಟ್ ನ ಪ್ರತಿ ಅಂಶದಲ್ಲಿಯೂ ಓಲೈಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಮಾಡಿರುವ ಸಾಮಾಜಿಕ ನ್ಯಾಯವಿದು ಎಂದು ನಿಖಿಲ್ ಅವರು ಕಿಡಿಕಾರಿದರು. 

ಮುಸ್ಲಿಮರಿಗೆ ಬಿರಿಯಾನಿ ಉಳಿದವರಿಗೆ ಉಪ್ಪಿನಕಾಯಿ!!

ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಇಷ್ಟರ ಮಟ್ಟಿಗೆ ತಾರತಮ್ಯ ನೀತಿ ತೋರಬಾರದಿತ್ತು. ಅಲ್ಪಸಂಖ್ಯಾತರಲ್ಲಿಯೇ ಒಡೆದು ಆಳುವ ನೀತಿ ಅನುಸರಿಸಿದ್ದಾರೆ. ಹದಿನಾರು ಕಾರ್ಯಕ್ರಮಗಳನ್ನು ಕೊಡುವ ಮೂಲಕ ಮುಸ್ಲಿಮರಿಗೆ ಈದ್ ಬಿರಿಯಾನಿ ನೀಡಿದ್ದಾರೆ. ಆದರೆ ಇತರೆ ಅಲ್ಪಸಂಖ್ಯಾತರಿಗೆ ನೆಕ್ಕಲು ಉಪ್ಪಿನಕಾಯಿ ಕೊಟ್ಟಿದ್ದಾರೆ ನೀಡಿದ್ದಾರೆ. ರಾಜಕೀಯದಲ್ಲಿ ಅವರ ಬೆಳೆ ಬೇಯಿಸಿಕೊಳ್ಳುವುದಕ್ಕೆ ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡಿದ್ದಾರೆ. ಇದು ಸರಿಯಲ್ಲ. ಯಾವ ಸಮುದಾಯ ನಿಜವಾಗಿಯೂ ಹಿಂದೆ ಉಳಿದಿದೆ ಅಂತವರಿಗೆ ಸಮಾನವಾಗಿ ನ್ಯಾಯ ಕೊಡಲಿ. ಅದನ್ನು ಬಜೆಟ್ ನಲ್ಲಿ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಗಳನ್ನು ನಡೆಸುವುದಕ್ಕೆ ದುಡ್ಡಿಲ್ಲ,:

ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು; ಉರ್ದು ಶಾಲೆಗಳನ್ನು ಉದ್ಧಾರ ಮಾಡುವುದಕ್ಕೆ ಹಣ ಇದೆ. ಆದರೆ, ವಿವಿಗಳಿಗೆ ಕೊಡಲು ದುಡ್ಡಿಲ್ಲ. ವಕ್ಫ್ ಕಟ್ಟಡಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ ಎಲ್ಲಾ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿವಿಗಳಿಗೆ ಕೊಡಲು ಇವರಿಗೆ ಕೈ ಬರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist