ಬೆಂಗಳೂರು, (www.thenewzmirror.com);
ಇತ್ತೀಚಿನ ದಿನನಗಳಲ್ಲಿ ನಕಲಿ ಪೇಸ್ ಬುಕ್ ಹಾವಳಿ ಹೆಚ್ಚುತ್ತಿದೆ. ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸೋದು ಬಳಿಕ ಹಣ ಕೇಳೋದು ಮಾಮೂಲಿಯಾಗಿಬಿಟ್ಟಿದೆ. ಇದೇ ರೀತಿ ಹಣ ಕೇಳಿದ ತಕ್ಷಣ ಗೊತ್ತಿರುವವರು ಅಲ್ವಾ ಅಂತ ಹಣ ಕಳೆದುಕೊಂಡವರೂ ಸಾಕಷ್ಟು ಜನರಿದ್ದಾರೆ.
ಹೀಗೆ ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ತೆರಳಿ ದೂರು ಕೊಡುತ್ತಿರೋರ ಸಂಖ್ಯೆ ಹೆಚ್ಚಿರೋರ ನಡುವೆನೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೆಸರಿನಲ್ಲಿ ನಕಲಿ ಅಕೌಂಟ್ ನ್ನ ಕಿಡಿಗೇಡಿಗಳು ಓಪನ್ ಮಾಡಿದ್ದಾರೆ. ಹೀಗೆ ಫೇಕ್ ಅಕೌಂಟ್ ಓಪನ್ ಮಾಡಿ ಬಹುತೇಕ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.

ಇದೇ ರೀತಿ thenewzmirror ಓದುಗರಿಗೊಬ್ಬರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಅವರ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ಅವರು ನಮ್ಮ ಗಮನಕ್ಕೆ ತರುವ ಕೆಲ್ಸ ಮಾಡಿದ್ದಾರೆ. ಅಷ್ಟೇ ಅಲ್ದೇ ಈ ಬಗ್ಗೆ ಜಾಗೃತಿ ಮೂಡಿಸಿ ಅಂತಾನೂ ಮನವಿ ಮಾಡಿದ್ದಾರೆ. ಈ ಮನವಿ ಆಧಾರದ ಮೇಲೆ ಈ ವರದಿ ಪ್ರಕಟ ಮಾಡುತ್ತಿದ್ದು, ಈ ಕುರಿತಂತೆ ಪೊಲೀಸರು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಕ್ರಿಯೆಟ್ ಮಾಡಿರೋರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.
ಇಡೀ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸುತ್ತಿರುವ ಹಿರಿಯ IPS ಅಧಿಕಾರಿ ದಯಾನಂದ ಅವ್ರ ಹೆಸರಿನ ಫೇಕ್ ಬುಕ್ ಅಕೌಂಟ್ ನಿಂದ ಒಬ್ಬ ಜನಸಾಮಾನ್ಯನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಸಾಧಾನ್ಯ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಈ ಅನುಮಾನದ ಆಧಾರದ ಮೇಲೆ ಈ ಜಾಗೃತಿ ಮೂಡಿಸುವ ವರದಿ ಪ್ರಕಟ ಮಾಡಲಾಗುತ್ತಿದೆ.
ಈ ಫೇಸ್ ಬುಕ್ ಅಕೌಂಟ್ ಅಸಲಿಯೋ ನಕಲಿಯೋ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಇದೇ ರೀತಿ ಬೇರೆಯಾರಿಗಾದರೂ ಈ ರೀತಿ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದರೆ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳ್ಳುವ ಬದಲು ಒಮ್ಮೆ ಪರಿಶೀಲಿಸಿ ಆನಂತರ ಒಪ್ಪಿಕೊಳ್ಳುವುದು ಸೂಕ್ತ ಎನ್ನುವುದು ನಮ್ಮ ಮನವಿ.