ಶಿವಮೊಗ್ಗ,(www.thenewzmirror.com) ;
ಶಿವಮೊಗ್ಗದಲ್ಲಿ ವಿಚಿತ್ರ ಘಟನೆ ನಡೆದಿದ್ದು, ವೃತ್ತಿ ಜೀವನದ ನಿವೃತ್ತಿ ದಿನವೇ ಸರ್ಕಾರಿ ಅಧಿಕಾರಿ ಹಣದ ಅಸೆಗೆ ಬಿದ್ದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಲೋಕ ಬಲೆಗೆ ಬಿದ್ದಿದ್ದು, ಪೊಲೀಸರ ಅಥಿತಿಯಾಗಿದ್ದಾರೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ ಎನ್ನುವವರು ನಗರದಲ್ಲಿ ಟಿವಿ, ಎಲ್ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪೆನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಕಂಪೆನಿ ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂದು ರಿಪೋರ್ಟ್ ಬರೆಯುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಹೇಳಲಾಗುತ್ತಿದೆ.
ಅಧಿಕಾರಿ ಹೇಳಿದಂತೆ ಕಂಪನಿ ಸಿಬ್ಬಂದಿ ಅಧಿಕಾರಿಗೆ ಹಣ ನೀಡುವಾಗ ಲೋಕಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಲೋಕ ಬಲೆಗೆ ಬಿದ್ದ ಅಧಿಕಾರಿ ಏಪ್ರಿಲ್ 9 ರಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು.