ಚಿತ್ರದುರ್ಗ/ಬೆಂಗಳೂರು, (www.thenewzmirror.com) ;
ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆಯಲ್ಲಿ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ ತಿರಂಗ ಯಾತ್ರೆಗೆ ಬಿಸಿಲನ್ನೂ ಲೆಕ್ಕಿಸದೆ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಿದರು. ತಿರಂಗ ಯಾತ್ರೆಯ ಮುಂದಾಳತ್ವವನ್ನು ನಿವೃತ್ತ ಕೆಎಎಸ್ ಅಧಿಕಾರಿ ರಘುಮೂರ್ತಿ ವಹಿಸಿಕೊಂಡಿದ್ದರು.
ಈ ವೇಳೆ ಮಾತನಾಡಿದ ರಘುಮೂರ್ತಿ, ಜಗತ್ತಿನಲ್ಲೇ ರಕ್ಷಣೆ ಮತ್ತು ಭದ್ರತಾ ವ್ಯವಸ್ಥೆಗೆ ಅತ್ಯಂತ ಹೆಚ್ಚಿನ ಅನುದಾನವನ್ನು ಮೀಸಲಿಟ್ಟ ದೇಶ ಎಂದರೆ ಅದು ನಮ್ಮ ಭಾರತ ದೇಶ ಎಂದು ಅಭಿಪ್ರಾಯಪಟ್ಟರು.
ಸಿಂಧೂರ ಆಪರೇಷನ್ ಮೂಲಕ ಭಾರತ ನೆರೆಹೊರೆಯ ರಾಷ್ಟ್ರಗಳನ್ನು ಒಳಗೊಂಡಂತೆ ಜಗತ್ತಿನ ಅನೇಕ ದೇಶಗಳಿಗೆ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಾದುನಿಕ ಮತ್ತು ಅಕ್ರಮಣಕಾರಿ ಶಾಸ್ತ್ರಗಳನ್ನು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದ ಅವರು, ದೇಸಿ ನಿರ್ಮಿತ ಬ್ರಹ್ಮೋಸ್ ರಫೆಲ್ ಮುಂತಾದ ಶಸ್ತ್ರಾಸ್ತ್ರಗಳಿಗೆ ಪಾಕಿಸ್ತಾನದ ಮತ್ತು ಪಾಕ್ ಪರ ರಾಷ್ಟ್ರಗಳು ನೀಡಿದಂತಹ ಶಸ್ತ್ರಾಸ್ತ್ರಗಳು ತರಗೆಲೆಯಂತೆ ಉದುರಿ ಹೋಗಿವೆ. ಅಷ್ಟೇ ಅಲ್ದೆ ಪಾಕಿಸ್ತಾನದ ಒಂಬತ್ತು ಏರ್ ಬೇಸ್ ಗಳನ್ನು ಧ್ವಂಸ ಮಾಡಿದ್ದು ಒಂದೊಂದು ಏರ್ ಬೇಸ್ ಗಳನ್ನು ಪುನರ್ ನಿರ್ಮಾಣ ಮಾಡಲು ಅಂದಾಜು 15,000 ಕೋಟಿ ರೂಗಳ ಅಗತ್ಯವಿದೆ ಎಂದರು.






ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಕರಾಚಿಗಳಲ್ಲಿ ನುಗ್ಗಿ ಪಾಕಿಗಳ ಭದ್ರತಾ ನೆಲೆಗಳನ್ನು ಧ್ವಂಸ ಮಾಡುವುದು ಅಷ್ಟು ಸುಲಭದ ಮಾತಲ್ಲ ಮಹಾಭಾರತದ ಅರ್ಜುನನಂತೆ ರಾಮಾಯಣದ ಶ್ರೀರಾಮನಂತೆ ನಮ್ಮ ದೇಶದ ಸೈನಿಕರು ಜೀವದ ಹಂಗನ್ನು ತೊರೆದು ಇಂತಹ ಮಹಾನ್ ಕಾರ್ಯ ಕೈಗೊಂಡಿದ್ದಾರೆ ಈ ಕಾರ್ಯಗಳನ್ನು ಭಾರತೀಯರಾದ ಪ್ರತಿಯೊಬ್ಬರು ಪ್ರಶಂಸಿಸಬೇಕು ಎಂದು ಕರೆ ಕೊಟ್ಟಿದ್ದಲ್ಲದೆ ಯಾರೂ ಕೂಡ ಈ ಸೈನಿಕರ ಬಗ್ಗೆ ಹಗುರವಾಗಿ ಮಾತಾಡಬಾರದು ಎಂದು ಸಲಹೆ ಕೊಟ್ಟರು.
ಹಲವು ರಾಷ್ಟ್ರಗಳು ಪಾಕಿಸ್ತಾನದ ನೆಲೆಗಳಲ್ಲಿ ಪರಮಾಣು ಸೇರಿದಂತೆ ಹಲವು ರೀತಿಯ ಭದ್ರತಾ ಸಾಮಗ್ರಿಗಳ ಶೇಖರಣೆಗಳನ್ನು ಮಾಡಿರುವುದು ಈ ಕೃತ್ಯದಿಂದ ಬಟಾಬಯಲಾಗಿದೆ ಸಿಂಹಿಣಿಯಂತೆ ಘರ್ಜಿಸಿದ ಕರ್ನಲ್ ಸೋಫಿಯಾ ಖುರೇಶಿ ಮತ್ತು ಲಿಫ್ಟಿನೆಂಟ್ ಕರ್ನಲ್ ವ್ಯೂಮಸಿಂಗ್ ಅವರ ಕಾರ್ಯ ನಿಜಕ್ಕೂ ಭಾರತೀಯರಾದ ನಿಮಗೆ ಹೆಮ್ಮೆ ತರುವಂತದ್ದು ಎಂದರು.
ನಮ್ಮ ದೇಶದ ಸೈನಿಕರ ನೈತಿಕ ಸ್ಥೈರ್ಯ ಮತ್ತು ಇವರನ್ನು ಉದ್ಧೀಪನಗೊಳಿಸಲು ಪ್ರತಿ ಗ್ರಾಮದಲ್ಲಿ ಪ್ರತಿ ಹೋಬಳಿಯಲ್ಲಿ ಇಂತಹ ತಿರಂಗ ಯಾತ್ರೆಗಳು ಅತ್ಯಂತ ಅವಶ್ಯಕವಿದೆ ಎಂದರು.
ತಿರಂಗ ಯಾತ್ರೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಮತ್ತು ಮುಖಂಡರುಗಳಾದ ಕುಮಾರಸ್ವಾಮಿ ತಾಲೂಕು ಮಂಡಲ ಅಧ್ಯಕ್ಷ ಸುರೇಶ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಜಯಪಾಲ್ ಶಿವಪುತ್ರಪ್ಪ ಸೋಮಶೇಖರ್ ಮಂಡಿಮಠ ಎಬಿವಿಪಿ ಮಂಜುನಾಥ್ ಕಾಲವೇಹಳ್ಳಿ ಪಾಲಯ್ಯ ನಾಯಕನಹಟ್ಟಿ ಮಂಡಲ್ ಅಧ್ಯಕ್ಷ ಚ ನಗನಹಳ್ಳಿ ಮಲ್ಲೇಶ್ ಕರಿಕೆರೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.