ಬೆಂಗಳೂರು, (www.thenewzmirror.com) ;
ಏಷ್ಯಾದ ಅತಿ ದೊಡ್ಡ ವಾನಿಕ ಪ್ರದರ್ಶನ ಏರೋ ಶೋ 2025 ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಯಲಹಂಕದ ವೈಮಾನಿಕ ನೆಲೆಯಲ್ಲಿ ರಕ್ಷಾಣಾ ಸಚಿವ ರಾನಜಾಥ್ ಸಿಂಗ್ 15 ನೇ ಆವೃತ್ತಿಗೆ ಚಾಲನೆ ನೀಡಿದ್ರು.
ಉದ್ಘಾಟನೆ ಬಳಿಕ ಕನ್ನಡದಲ್ಲಿಯೇ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರಗಳು ಎಂದು ಮಾತು ಆರಂಭಿಸಿದರು. ಬಳಿಕ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಏರ್ ಶೋಗೆ ಬೇಕಾದ ಸಹಕಾರ ರಾಜ್ಯ ಸರ್ಕಾರ ಮಾಡಿದೆ. ಈ ಬಾರಿಯ ಏರ್ ಶೋ ನಲ್ಲಿ ನೂತನ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಏರೋ ಷೋ ತಂತ್ರಜ್ಞಾನ ಆವಿಷ್ಕಾರಕ್ಕೆ ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕವೇ ದೇಶದ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.



ಇಂದಿನ ಅನಿಶ್ಚಿತತೆಗಳನ್ನು ಎದುರಿಸಲು ಏರೋ ಇಂಡಿಯಾ 2025 ಸಮಾನ ಮನಸ್ಕ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದ ರಕ್ಷಣಾ ಸಚಿವ, ಇಂದು ರಕ್ಷಣಾ ವಲಯವು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಎಂಜಿನ್ಗೆ ಶಕ್ತಿ ತುಂಬುವ ಒಂದು ಎಂಜಿನ್ ಆಗಿ ಮಾರ್ಪಟ್ಟಿದೆ. ಹಾಗೆನೇ ಭಾರತೀಯ ಭದ್ರತೆ ಅಥವಾ ಭಾರತೀಯ ಶಾಂತಿ ಮೂಲೆಗುಂಪಾಗಿಲ್ಲ; ಭದ್ರತೆ, ಸ್ಥಿರತೆ ಮತ್ತು ಶಾಂತಿ ರಾಷ್ಟ್ರೀಯ ಗಡಿಗಳನ್ನು ಮೀರಿದ ಹಂಚಿಕೆಯ ವಿಷಯಗಳಾಗಿವೆ ಎಂದು ತಿಳಿಸಿದ್ರು.
ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾದ. ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದು, ಇಂದಿನಿಂದ 5 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. ‘‘ರನ್ವೇ ಟು ಬಿಲಿಯನ್ ಅಪಾರ್ಚುನಿಟಿಸಿ’’ ಟ್ಯಾಗ್ ಲೈನ್ನಲ್ಲಿ ಏರ್ಶೋ-2025 ಆಯೋಜಿಸಲಾಗಿದೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ.
ಬಾರಿಯ ಏರ್ ಶೋನಲ್ಲಿ ರಷ್ಯನ್ ಹಾಗೂ ಅಮೆರಿಕನ್ ಫೈಟ್ ಏರ್ಕ್ರಾಪ್ಟ್ ಗಳು ಭಾಗವಹಿಸಲಿವೆ. ರನ್ ವೇ ಟು ಎ ಬಿಲಿಯನ್ ಆಪರ್ಚುನಿಟಿಸಿ ಟ್ಯಾಗ್ ಲೈನ್ ನಲ್ಲಿ ಏರ್ ಶೋ ನಡೆಯಲಿದೆ. ಈ ಶೋ ನಲ್ಲಿ 100 ದೇಶಗಳು ಹಾಗೂ 900 ಕ್ಕೂ ಹೆಚ್ಚು ಉತ್ಪಾದಕರು ಭಾಗವಹಿಸಲಿದ್ದಾರೆ. ಮಾತ್ರವಲ್ಲ ಎಐ, ಡ್ರೋನ್, ಸೈಬರ್ ಸೆಕ್ಯುರಟಿ, ಗ್ಲೋಬರ್ ಏರೋಸ್ಪೇಸ್ ನಂತಹ ನೂತನ ತಂತ್ರಜ್ಞಾನಗಳು ಇರಲಿದೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಕೂಡ ಈ ಬಾರಿಯ ಶೋನಲ್ಲಿ ಇರಲಿವೆ.