ಬೆಂಗಳೂರು, (www.thenewzmirror.com);
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಶೋ 2025 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಲಹಂಕದ ವೈಮಾನಿಕ ವಾಯು ನೆಲೆಯಲ್ಲಿ ಐದು ದಿನಗಳ ಕಾಲ ಏರೋ ಶೋ ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ನೋಡುಗರ ಮೈನವಿರೇಳಿಸುವ ಪ್ರದರ್ಶನ ಇರಲಿದೆ. 1996ರಿಂದ ಸತತ ಏರೋ ಶೋ ಗೆ ವೇದಿಕೆಯಾಗುತ್ತಿರುವ ಬೆಂಗಳೂರು ವಿಶ್ವ ಮಟ್ಟದಲ್ಲಿ ಮತ್ತಷ್ಟು ಪ್ರಸಿದ್ದಿ ಪಡೆಯುತ್ತಿದೆ. ಈ ಬಾರಿ 10 ಲಕ್ಷಕ್ಕೂ ಅಧಿಕ ಮಂದಿ ಏರೋ ಶೋ ವೀಕ್ಷಣೆ ಮಾಡುವ ನಿರೀಕ್ಷೆಯಿದೆ ಜತೆಗೆ ಒಂದು ಸಾವಿರಕ್ಕೂ ಅಧಿಕ ಪ್ರದರ್ಶಕರು, 60ಕ್ಕೂ ಹೆಚ್ಚು ದೇಶೀಯ ಏರ್ ಕ್ರಾಫ್ಟ್ ಗಳು ಭಾಗಿಯಾಗುವ ನಿರೀಕ್ಷೆಯಿದೆ. ಜತೆಗೆ ಮೂವತ್ತಕ್ಕೂ ಅಧಿಕ ದೇಶಗಳು ಗಣ್ಯರು ಭಾಗವಹಿಸುವ ನಿರೀಕ್ಷೆಯಿಂದ ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ವಹಿವಾಟು ಗಳು ನಡೆಯುವ ನಿರೀಕ್ಷೆಯನ್ನ ಇಟ್ಟುಕೊಳ್ಳಲಾಗಿದೆ.


2023ರ ಹಿನ್ನೋಟ..!
ಕಳೆದ ಬಾರಿ ಏರೋ ಶೋನಲ್ಲಿ ಒಟ್ಟು 809 ಪ್ರದರ್ಶನಕರು ಭಾಗವಹಿಸಿದ್ರು. ಭಾರತದಿಂದ 53 ಏರ್ ಕ್ರಾಫ್ಟ್ ಗಳು ಏರೋ ಶೋನಲ್ಲಿ ಭಾಗವಹಿಸಿದ್ದವು. ಹಾಗೆನೇ ಐದು ದಿನಗಳಲ್ಲಿ ಏಳು ಲಕ್ಷಕ್ಕೂ ಅಧಿಕ ಮಂದಿ ಏರೋ ಶೋವನ್ನ ಕಣ್ತುಂಬಿಕೊಂಡಿದ್ದರು. ಒಟ್ಟು 27 ದೇಶಗಳ ವಿದೇಶಿ ಗಣ್ಯರು ಹಾಗೆನೇ ರಕ್ಷಣಾ ಸಚಿವರು ಏರೋ ಶೋ 2023 ರಲ್ಲಿ ಭಾಗವಹಿಸಿದ್ರು. ಕಳೆದ ಬಾರಿ 250 ಕ್ಕೂ ಹೆಚ್ಚು ಎಂಓಯು(ಒಪ್ಪಂದ)ಗಳು ನಡೆದಿದ್ವು. ಇದರಿಂದ ಸುಮಾರು 75,000ಕೋಟಿ ಗೂ ಅಧಿಕ ಮೌಲ್ಯದ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ 200 ಕೋಟಿಗೂ ಅಧಿಕ ಮೌಲ್ಯದ ವ್ಯವಹಾರ ಐಡೆಕ್ಸ್ ಹೂಡಿಕೆದಾರರ ಕೇಂದ್ರದಿಂದ ನಡೆದಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಹೆಚ್ಚಿನ ವಹಿವಾಟು ನಿರೀಕ್ಷೆ ಮಾಡಲಾಗುತ್ತಿದೆ.