ಬೆಂಗಳೂರು, (www.thenewzmirror.com) :
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಮತ್ತು ಬ್ರಿಡ್ಜ್ ವಾಟರ್ ಸ್ಟೇಟ್ ಯೂನಿವರ್ಸಿಟಿ ಪರಸ್ಪರ ಸಹಕಾರಕ್ಕೆ ಸಾಕ್ಷಿಯಾಯಿತು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅಮೆರಿಕಾದ ಬ್ರಿಡ್ಜ್ ವಾಟರ್ ಸ್ಟೇಟ್ ಯೂನಿವರ್ಸಿಟಿ ತಂಡ ಭೇಟಿ ನೀಡಿ ಜಂಟಿಯಾಗಿ ಕಾರ್ಯಕ್ರಮ ರೂಪಿಸುವ ಅನೇಕ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
2017 ರಿಂದಲೂ ಎರಡು ವಿಶ್ವವಿದ್ಯಾಲಯಗಳು ನಿರಂತರ ಸಂಪರ್ಕ,ಒಡನಾಟದಲ್ಲಿದ್ದು ಪರಸ್ಪರ ವಿದ್ಯಾರ್ಥಿ ಮತ್ತು ಅಧ್ಯಾಪಕರ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿದೆ.ಒಡಂಬಡಿಕೆ ಭಾಗವಾಗಿ ಗಣ್ಯರ ತಂಡ ಭೇಟಿ ನೀಡಿದ್ದು ಅನೇಕ ಮಹತ್ವದ ವಿಚಾರ ಚರ್ಚಿಸಲಾಯಿತು.
ವಿಶ್ವವಿದ್ಯಾಲಯಗಳ ನಡುವಿನ ಮುಂದಿನ ಯೋಜನೆ,ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು.ಪರಸ್ಪರ ವಿದ್ಯಾರ್ಥಿ – ಪ್ರಾಧ್ಯಾಪಕರ ವಿನಿಮಯ,ಜಂಟಿ ಸಂಶೋಧನೆ, ಜ್ಞಾನಭಿವೃದ್ದಿ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಯಿತು.
ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ವಿಜ್ಞಾನ,ಸಂಶೋಧನೆ,ತಂತ್ರಜ್ಞಾನ,ಕೃತಕ ಬುದ್ದಿಮತ್ತೆ,ಸೈಬರ್ ಸೆಕ್ಯುರಿಟಿ,ಜೀವವಿಜ್ಞಾನ,AI ಕೌಶಲ್ಯ ವಿಷಯದಲ್ಲಿ ವಿಶೇಷ ತರಭೇತಿ ನೀಡುವ ಕಾರ್ಯಕ್ರಮ ರೂಪಿಸುವ ಕುರಿತು ಚರ್ಚಿಸಲಾಯಿತು. ಕುಲಪತಿ ಡಾ.ಜಯಕರ ಎಸ್,ಕುಲಸಚಿವ ಶೇಕ್ ಲತೀಫ್ ಸೇರಿದಂತೆ ವಿವಿಯ ವಿಭಾಗ ಮುಖ್ಯಸ್ಥರು,ಪ್ರಾಧ್ಯಾಪಕರು ಸಭೆಯಲ್ಲಿ ಭಾಗಿಯಾಗಿದ್ದರು.