ಬೆಂಗಳೂರು, (www.thenewzmirror.com);
ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ KSRTC. ಪ್ರತಿ ಬಾರಿಯೂ ಏನಾದರೊಂದು ಹೊಸತನ ನೀಡುತ್ತಾ ಲಕ್ಷಾಂತರ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿರುವ KSRTCಗೆ ಮತ್ತೊಂದು ಪ್ರಶಸದತಿಯ ಗರಿ ಲಭಿಸಿದೆ.
ಕೆ.ಎಸ್.ಅರ್.ಟಿ.ಸಿ. ಗೆ, ವಿನೂತನ ಕಾರ್ಮಿಕ ಕಲ್ಯಾಣ ಉಪಕ್ರಮಗಳ ಅನುಷ್ಠಾನಕ್ಕಾಗಿ STARS OF THE INDUSTRY- EXCELLENCE AND LEADERSHIP ಪ್ರಶಸ್ತಿಯನ್ನು Most Admired Company of the year ವರ್ಗದಡಿಯಲ್ಲಿ ನೀಡಲಾಗಿದೆ.
ದೆಹಲಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಿಗಮ ಈ ಪ್ರಶಸ್ತಿಯನ್ನು ತನ್ನ ಮುಗಿಡೇರಿಸಿಕೊಂಡಿದೆ. World HRD Congress ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾರುಕಟ್ಟೆ ವಿಭಾಗದ ಭಾರತದ ಮುಖ್ಯಸ್ಥ ವಿಜಯಕುಮಾರ್ ನಾಯ್ಡು, ಡಾ. ಜೈ ಮದಾನ್, renowned Celebrity Astrologer and Motivational Speaker ರವರು Most Admired Company of the year ಪ್ರಶಸ್ತಿಯನ್ನ ಕೆ.ಎಸ್.ಅರ್.ಟಿ.ಸಿ. ಗೆ ಪ್ರದಾನ ಮಾಡಿದರು.
ಸಂಸ್ಥೆಯ ಪರವಾಗಿ ಮುಖ್ಯ ಯೋಜನಾ ಮತ್ತು ಸಂಖ್ಯಾಧಿಕಾರಿ ವೀಣಾ ಪಿ. ದೇಸಾಯಿ, ಮಳವಳ್ಳಿಯ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ವಿದ್ಯಾ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇನ್ನು KSRTC ಈ ಸಾಧನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಏಳಿಗೆಗೆ ದುಡಿಯುತ್ತಿರುವ ನೌಕರರಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ.