ಬೆಂಗಳೂರು, (www.thenewzmirror.com) ;
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೆ ಬ್ರೇಕ್ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಖಾಸಗಿ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಪತ್ರ ಬರೆದಿದೆ.
ಇತ್ತೀಚಿನ ದಿನಗಳಲ್ಲಿ ವಯಸ್ಕರಿಗೆ ಹೋಲಿಸಿದರೆ ಶಾಲಾ ಮಕ್ಕಳು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿರುತ್ತಾರೆ. ಇದರ ಗೀಳು ಹೆಚ್ಚಾದರೆ ಅವರು ಅಪಾಯಕ್ಕೆ ಸಿಲುಕಿಹಾಕಿಕೊಳ್ಳುವ ಸಾಧ್ಯತಡ ಹೆಚ್ಚಿದೆ. ಇದನ್ನ ಮನಗಂಡ ಖಾಸಗಿ ಶಾಲಾ ಒಕ್ಕೂಟ ಪೋಷಕರಿಗೆ ಪತ್ರ ಬರೆದು ಎಚ್ಚರಿಕೆ ಕೊಟ್ಟಿದೆ. ಮಕ್ಕಳು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುತ್ತಿದ್ದು, ಇದರಿಂದ ಅಪಾಯ ಬಂದೊದಗಬಹುದಾದ ಸಾಧ್ಯೆತೆ ಇದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರ ವಹಿಸಿ ಎಂದು ಪತ್ರ ಬರೆದಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಾಮಾಜಿಕ ಜಾತಾಣದ ಗೀಳು ಅತಿಯಾಗುತ್ತಿದೆ. ಹಾಗೆನೇ ಬಹುತೇಕ ವಿದ್ಯಾರ್ಥಿಗಳಿಂದ ತಂತ್ರಜ್ಞಾನದ ದುರ್ಬಳಕೆಯೂ ಆಗುತ್ತಿದೆ. ಮಕ್ಕಳ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾಗಿದ್ದು, ಗುಪ್ತವಾಗಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ, ಬೇರೆ ಬೇರೆ ಹೆಸರುಗಳನ್ನಿಟ್ಟು ಪೋಷಕರಿಗೆ ಗೊತ್ತಿಲ್ಲದೆ ಆಕ್ಟೀವ್ ಆಗಿದ್ದಾರೆ. ಮಕ್ಕಳು ಇತರೆ ಸಹಪಾಠಿಯೊಂದಿಗೆ ಗುಪ್ತ ಸಂಪರ್ಕ, ಪ್ರೀತಿ ಪ್ರೇಮಗಳು, ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಹಾಗೆನೇ ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿ ಬೈದಾಡುವುದು, ದ್ವೇಷ ಸಾಧಿಸುವುದು, ಅವಮಾನಿಸುವ ಪ್ರಸಂಗ ಹೆಚ್ಚಾಗಲು ಇದೂ ಒಂದು ಕಾರಣವಾಗಿದ್ದು, ಅಪ್ರಾಪ್ತ ವಿದ್ಯಾರ್ಥಿಗಳು ಈ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಾರೆ ಅಂತ ಕಳವಳ ವ್ಯಕ್ತಪಡಿಸಿದೆ.
ಆನ್‌ಲೈನ್ ವ್ಯಾಪಾರಗಳು, ಆನ್‌ಲೈನ್ ಆಟಗಳು, ಆನ್‌ಲೈನ್ ಜೂಜಾಟ, ಮುಂತಾದವುಗಳಲ್ಲಿ 5-6ನೇ ತರಗತಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಇನ್ನೊಂದು ಆತಂಕದ ವಿಚಾರ ಎಂದರೆ ತಂದೆ ತಾಯಿಗೆ ಗೊತ್ತಿಲ್ಲದೆ ತಮ್ಮ ಮೊಬೈಲ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಮಕ್ಕಳ ಬಗ್ಗೆ ಜಾಗರೂಕರಾಗಿರಿ ಎಂದು ಖಾಸಗಿ ಶಾಲಾ ಒಕ್ಕೂಟ ಪತ್ರ ಬರೆದಿದೆ.