ಬೆಂಗಳೂರು,(www.thenewzmirror.com);
ಬೆಂಗಳೂರು ಹಾಗೂ ಮೈಸೂರು ಜನತೆಗೆ ಪ್ರಧಾನಿ ನರೇಂದ್ರ ಮೋದಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿನಿಮದ ಮೈಸೂರಿಗೆ ನಮ್ಮ ಮೆಟ್ರೋ ಓಡಾಟ ಮಾಡಲಿದೆ ಅಂತ ಸುಳಿವುಕೊಟ್ಟಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಬೈಯ್ಯಪ್ಪನಹಳ್ಳಿ ಟು ಕೆ.ಆರ್ ಪುರಂ ಹಾಗೂ ಕೆಂಗೇರಿ ಟು ಚಲ್ಲಘಟ್ಟ ನಡುವಿನ ವಿಸ್ತರಿತ ಮಾರ್ಗಕ್ಕೆ ಚಾಲನೆ ಕೊಟ್ಟ ಬಳಿಕೆ ನಮೋ ಈ ಮಾಹಿತಿ ನೀಡಿದರು. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗಳಿಗೆ 3 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
![](https://thenewzmirror.com/wp-content/uploads/2023/10/banner1-mob.jpg)
ಸದ್ಯ ಬೆಂಗಳೂರಿನಲ್ಲಿ ಮಾತ್ರ ಓಡಾಟ ಮಾಡುತ್ತಿರುವ ನಮ್ಮ ಮೆಟ್ರೋ ಇನ್ಮುಂದೆ ಎರಡು ಜಿಲ್ಲೆಗಳ ನಡುವೆ ಸಂಚಾರ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದರು.