ಬೆಂಗಳೂರು, (www.thenewzmirror.com) ;
ಗಣಪತಿ ಹಬ್ಬ ಹತ್ತಿರ ಬರುತ್ತಿದೆ. ಇದರ ನಡುವೆ ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಂತ ಸರ್ಕಾರ ಹಾಗೂ ಬಿಬಿಎಂಪಿ ಮನವಿ ಮಾಡುತ್ತಿದೆ. ಆದರೂ ಗನೇಶ ಮೂರ್ತಿ ತಯಾರಕರು ಮಾತ್ರ ಪಿಓಪಿ ಯಿಂದ ಮೂರ್ತಿಯನ್ನ ಸಿದ್ದಪಡಿಸುತ್ತಿರುತ್ತಾರೆ. ಪರಿಸರ ಸ್ನೇಹಿ ಹೋರಾಟಗಾರರು ಮಾತ್ರ ಇದಕ್ಕೆ ಕಡಿವಾಣ ಹಾಕಿ ಅಂತ ಮನವಿ ಮಾಡ್ತಾನೇ ಇದ್ರು.
ಇದೀಗ ಹೋರಾಟಗಾರರು ಹಾಗೂ ಪರಿಸರವಾದಿಗಳ ಒತ್ತಡಕ್ಕೆ ಮಣಿದ ಬಿಬಿಎಂಪಿ ಇದೀಗ ಪಿಒಪಿ ಗಣೇಶ ತಯಾರಿಕಾ ಗೋಡನ್ ಗೆ ಬಿಬಿಎಂಪಿಯ ರಾಜರಾಜೇಶ್ವರಿನ ನಗರ ವಲಯದ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.198 ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ಪಿ.ಓ.ಪಿ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ತಯಾರಿಸುತ್ತಿರುವ ಗೋಡೌನ್‌ಗೆ ಬೀಗಮುದ್ರೆ ಹಾಕಿ ನೋಟೀಸ್ ಜಾರಿ ಮಾಡಿದ್ದಾರೆ.