ಬೆಂಗಳೂರು, (www.thenewzmirror.com);
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ತನ್ನ 8 ವಲಯಗಳ ತೆರಿಗೆ ಬಾಕಿದಾರರ ಟಾಪ್ 50 ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಿಡುಗಡೆ ಮಾಡಿದೆ. ಎಂಟು ವಲಯಗಳಿಂದ ಕೋಟಿ ಕೋಟಿ ರೂ. ತೆರಿಗೆ ಹಣ ಬಾಕಿ ಇದ್ದು, ಪ್ರತಿ ವಲಯದಲ್ಲೂ 50 ತೆರಿಗೆ ಬಾಕಿದಾರರ ಮಾಹಿತಿ ಮಾತ್ರ ಪ್ರಕಟ ಮಾಡಲಾಗಿದೆ.
ಒಟಿಎಸ್ ಸೌಲಭ್ಯ ನೀಡಿದ್ದರೂ ಬಾಕಿ ಹಣ ಬೊಕ್ಕಸಕ್ಕೆ ಬಂದಿಲ್ಲ. ಹೀಗಾಗಿ ಪಾಲಿಕೆ ಈ ತೀರ್ಮಾನಕ್ಕೆ ಬಂದಿದ್ದು ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನ ತನ್ನ ವೆಬ್ ಸೈಟ್ ನಲ್ಲೂ ಪ್ರಕಟ ಮಾಡಿದೆ.
https://bbmptax.karnataka.gov.in/documents/DefaulterslistZones1.pdf
ವಲಯವಾರು ತೆರಿಗೆ ಬಾಕಿ ಇರುವವರ ಪಟ್ಟಿ..!
– ದಕ್ಷಿಣ ವಲಯ: 47, 81,75 ರೂ
– ಪೂರ್ವ ವಲಯ: 7 ಕೋಟಿ 49 ಲಕ್ಷದ 50 ಸಾವಿರ
– ಬೊಮ್ಮನಹಳ್ಳಿ ವಲಯ: 7 ಕೋಟಿ 27 ಲಕ್ಷದ 51 ಸಾವಿರ
– ಮಹದೇವಪುರ ವಲಯ: 4 ಕೋಟಿ 74 ಲಕ್ಷದ 87 ಸಾವಿರ ರೂ.
– ಯಲಹಂಕ ವಲಯ: 2,79,44 ರೂ.
– ಪಶ್ಚಿಮ ವಲಯ, ಮಹದೇವಪುರ ವಲಯ ಹಾಗೂ ದಾಸರಹಳ್ಳಿ ವಲಯಗಳಲ್ಲೂ ಹತ್ತಾರು ಕೋಟಿಗಟ್ಟಲೇ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಒನ್ ಟೈಮ್ ಸೆಟ್ಲಮೆಂಟ್ ನಡಿ ತೆರಿಗೆ ಪಾವತಿ ಮಾಡಲು ಕಾಲಾವಕಾಶ ನೀಡಲಾಗಿತ್ತು. ಹಾಗೆನೇ ಒಂದು ತಿಂಗಳು ವಿಸ್ತರಣೆ ಮಾಡಿಬಾದೇಶ ನೀಡಲಾಗಿತ್ತು. ಹೀಗಿದ್ದರೂ ಬಹುತೇಕ ತೆರಿಗೆದಾರೆಉ ಬಾಕಿ ಕಟ್ಟದ ಹಿನ್ನಲೆಯಲ್ಲಿ ಪಾಲಿಕೆ ಬಾಕಿ ಉಳಿಸಿಕೊಂಡವರ ಪಟ್ಟಿ ಬಹಿರಂಗ ಪಡಿಸಿದೆ.